Saturday, July 5, 2025

Latest Posts

‘ನಮಗಿಂತ ಜಾಸ್ತಿ ರೈತರಿಗೆ ಬಿಜೆಪಿ-ಜೆಡಿಎಸ್ ಅನ್ಯಾಯ ಮಾಡಿ ನೀರು ಬಿಟ್ಟಿದ್ದಾರೆ’

- Advertisement -

Mandya Political News: ಮಂಡ್ಯ: ಜೆಡಿಎಸ್ ಮಮತ್ತು ಬಿಜೆಪಿ ವಿರುದ್ಧ ಮಂಡ್ಯದಲ್ಲಿ ಸಚಿವ ಎನ್. ಚೆಲುವನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಕಾವೇರಿ ವಿಚಾರದ ಪ್ರಶ್ನೆ ಕೇಳ್ತಾ ಇದ್ದ ಹಾಗೆ ಸಚಿವ ಎನ್. ಚಲುವರಾಯಸ್ವಾಮಿ ಕೆಂಡಾಮಂಡಲರಾಗಿದ್ದು, ನಮಗಿಂತ ಜಾಸ್ತಿ ರೈತರಿಗೆ ಬಿಜೆಪಿ-ಜೆಡಿಎಸ್ ಅನ್ಯಾಯ ಮಾಡಿ ನೀರು ಬಿಟ್ಟಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ನಾನು ರೈತರು ಹಾಗೂ ಸಂಘಟನೆಗಳ ಬಗ್ಗೆ ಮಾತಾಡಲ್ಲ. ನಮ್ಮ ಗಮನ ಸೆಳೆಯಲು ಪ್ರತಿಭಟನೆ ಮಾಡುತ್ತಾರೆ. ನಾವು ನಮ್ಮ ಸಮಸ್ಯೆಯನ್ನು ಕೋರ್ಟ್ ಹಾಗೂ ಪ್ರಾಧಿಕಾರದ ಮುಂದೆ ಹೇಳಬಹುದು ಅಷ್ಟೇ. ಕೇಂದ್ರ ಸರ್ಕಾರ ಮಧ್ಯ ಪ್ರದೇಶ ಮಾಡುವ ಅವಕಾಶವಿದೆ. ಬಿಜೆಪಿ ಹಾಗೂ ಜೆಡಿಎಸ್ ಅವರಿಗೆ ಕೃತಜ್ಞತೆ ಇಲ್ವಾ. ಮಂಡ್ಯದಲ್ಲಿ ಬಂದು ಬಿಜೆಪಿ ಜೆಡಿಎಸ್ ಏನ್ ಮಾಡ್ತಾರೆ?. ನಮ್ಮ ಗಮನಕ್ಕೆ ತರುವ ಮಂಡ್ಯದಲ್ಲಿ ರೈತರು ಇಲ್ವಾ..? ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ, ಕುಮಾರಸ್ವಾಮಿ, ಬೊಮ್ಮಾಯಿ ದೆಹಲಿಗೆ ಹೋಗಿ ಪ್ರಧಾನಿಗಳ ಬಳಿ ಮಾತಾಡಬೇಕು. ಕಾವೇರಿ ವಿಚಾರದ ಸಮಸ್ಯೆ ಹೇಳಿ ಎರಡು ಸಿಎಂ ಕರೆಸಿ ಸಮಸ್ಯೆ ಬಗೆಹರಿಸಲು ಹೇಳಬೇಕು. ಪ್ರಧಾನಿ ಬಳಿ ಹೇಳಬೇಕಾ ಇಲ್ಲ ಇಲ್ಲಿ ಟಿವಿಯವರ ಮುಂದೆ ಪ್ರತಿಭಟನೆ ಮಾಡಬೇಕಾ..? ನಾವು ದೆಹಲಿಗೆ ಹೋಗಿದ್ದೇವೆ, ಎಂಪಿಗಳ ಸಭೆ ಮಾಡಿದ್ದೇವೆ. ಮೂರು ಬಾರಿ ವಿರೋಧ ಪಕ್ಷಗಳ ಸಭೆ ಮಾಡಿದ್ದೀವಿ. ಕೋರ್ಟ್ ಹಾಗೂ ಪ್ರಾಧಿಕಾರದ ಆದೇಶವನ್ನು ಎಲ್ಲಾ ಸಿಎಂಗಳು ಪಾಲಿಸಿದ್ದಾರೆ. ಇಲ್ಲಿ ಬಂದು ಶೂರಾ ವೀರನ ರೀತಿ ಭಾಷಣ ಮಾಡುವ ಜೆಡಿಎಸ್ ಬಿಜೆಪಿಯವರು ಎಲ್ಲಾ ನೀರು ಬಿಟ್ಟಿದ್ದಾರೆ. ನಮಗಿಂತ ಜಾಸ್ತಿ ರೈತರಿಗೆ ಅನ್ಯಾಯ ಮಾಡಿ ನೀರನ್ನು ಬಿಟ್ಟಿದ್ದಾರೆ ಎಂದು ಚೆಲುವನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ನಾವು ಇಲ್ಲಿಯವರೆಗೆ ರೈತರ ಹಿತಾಸಕ್ತಿ ಕಾಪಾಡಿ, ಅಲ್ಪಸ್ವಲ್ಪ ಆದೇಶ ಪಾಲನೆ ಮಾಡಿದ್ದೇವೆ. ನಾವು ಪೂರ್ಣ ಪ್ರಮಾಣದ ಆದೇಶ ಪಾಲನೆ ಮಾಡದೆ, ಸ್ವಲ್ಪ ಆದೇಶ ಪಾಲನೆ ಮಾಡಿದ್ದೇವೆ ಅಷ್ಟೇ. ಮಂಡ್ಯ ರೈತರಿಗೆ ಇನ್ನೂ ಎರಡು ಕಟ್ಟು ನೀರು ಕೊಡ್ತೀವಿ, ರಕ್ಷಣೆ ಮಾಡ್ತೀವಿ. ಎಂಪಿ ಚುನಾವಣೆಯಲ್ಲಿ ಒಂದೇ ಸಲ ಸಾಧನೆ ಮಾಡಲು ಒಂದಾಗುತ್ತಾ ಇದ್ದಾರೆ ಬಿಜೆಪಿ ಜೆಡಿಎಸ್. ಆ ಕೆಲಸವನ್ನು ಪ್ರಾಮಾಣಿಕವಾಗಿ ಪ್ರಧಾನಿ ಬಳಿ ಹೋಗಿ ಕಾವೇರಿ ವಿಚಾರದಲ್ಲಿ ಮಾಡಬೇಕು ಅವರು. ಮಧ್ಯ ಪ್ರವೇಶ ಮಾಡೋಕೆ ಆಗಲ್ಲ ಅಂದ್ರೆ ಮನೆಯಲ್ಲಿ ಇರಲಿ, ರಾಜಕಾರಣ ಯಾಕೆ ಮಾಡ್ತಾರೆ..? ಈ ಹಿಂದೆ ವಾಜಪೇಯಿ ಅವರು ಮಧ್ಯ ಪ್ರವೇಶ ಮಾಡಿರಲಿಲ್ವಾ?. ಒಕ್ಕೂಟ ವ್ಯವಸ್ಥೆಯಲ್ಲಿ ಮೇಲೆ ಇರೋದು ಕೇಂದ್ರ ಸರ್ಕಾರ. ಕೇಂದ್ರ ಸರ್ಕಾರವೇ  ಎರಡು ರಾಜ್ಯಗಳನ್ನು ಕರೆದು ಸಮಸ್ಯೆ ಬಗೆಹರಿಸಬೇಕು ಎಂದು ಚೆಲುವನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

INDIA ಒಕ್ಕೂಟ ರಾಜಕೀಯ , ಕಾವೇರಿ ವಿಚಾರ ಸಪರೇಟ್. ಕರ್ನಾಟಕ, ತಮಿಳುನಾಡು ಬೇರೆ ಬೇರೆ ರಾಜ್ಯ. ತಮಿಳುನಾಡಿನವರು ಅವರ ಹಿತಾಸಕ್ತಿ ನೋಡ್ತಾರೆ. ನಾವು ನಮ‌್ಮ ಹಿತಾಸಕ್ತಿ ನೋಡ್ತೀವಿ. ರಾಜಕೀಯವನ್ನು ಇವರು ಯಾರ ಜೊತೆ ಆದ್ರು‌ ಮಾಡಿಕೊಳ್ಳಲಿ. ನಾವು ಸಹ INDIA ರಾಜಕೀಯವನ್ನು ಮಾಡ್ತೀವಿ. ಕಾವೇರಿ ಸಮಸ್ಯೆಯನ್ನು ಸಾಧ್ಯವಾದ್ರೆ ಬಗೆಹರಿಸಲಿ. ಅವರ ಕೈಯಲ್ಲಿ ಆಗದೇ ಇದ್ರೆ ನಮ್ಮ ರೈತರನ್ನು ಉಳಿಸೋದು ನಮಗೆ ಗೊತ್ತು ಮಾಡ್ತೀವಿ. ಈಗಾಗಲೇ ನಾವು ಕಾವೇರಿ ನೀರಿನ ವಿಚಾರವನ್ನು ಕೋರ್ಟ್‌ಗೆ ಅಪೀಲು ಹೋಗಿದ್ದೇವೆ. 12ನೇ ತಾರೀಖು CWMA ಮುಂದೆ ನೀರು ಬಿಡಲ್ಲ ಎಂದು‌ ಹೇಳ್ತೀವಿ ಎಂದು ಹೇಳಿದ್ದಾರೆ.

ಅಲ್ಪ ಸಂಖ್ಯಾತರು ಮತಗಳು ಜೆಡಿಎಸ್ ಕೈಹಿಡಿಯಲಿಲ್ಲ ಎಂಬ ಹೆಚ್ಡಿಕೆ ಹೇಳಿಕೆ ವಿಚಾರಕ್ಕೆ ಚೆಲುವನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಸಾಧನೆ ಏನೂ ಅಂತಾ ನಿಮಗು, ನಮಗು ಗೊತ್ತಿದೆ. ವೋಟ್ ಹಾಕಿಸ್ಕೊಳಕ್ಕೆ ಏನ್ ಮಾತಾಡ್ಬೇಕು ಅದನ್ನ ಮಾತಾಡ್ತಾರೆ. ಈ ಜಿಲ್ಲೆಗೆ, ಕಾವೇರಿ ಅಚ್ಚುಕಟ್ಟಿಗೆ ಕುಮಾರಸ್ವಾಮಿ ಕೊಡುಗೆ ಏನು..? ಇವರ ತಂದೆ ಕೊಡುಗೆಯನ್ನೆ ಎಷ್ಟು ಸಲ ಹೇಳ್ತಾರೆ. ಅವರ ತಂದೆ ಕೊಡುಗೆ ಕೊಟ್ಟಾಯ್ತು, ಜಿಲ್ಲೆ ಜನರು ಕೃತಜ್ಞತೆ ಸಲ್ಲಿಸಿಯಾಯ್ತು. ಕುಮಾರಸ್ವಾಮಿಯವರ ವಯಕ್ತಿಕ ಕೊಡುಗೆ ಏನು.? ಹೆಚ್ಡಿಕೆ ದೇವೇಗೌಡ ಕೊಡುಗೆ ಮೇಲೆ ರಾಜಕಾರಣ ಮಾಡ್ತಿದ್ದಾರೆ ಅಷ್ಟೇ ಎಂದಿದ್ದಾರೆ.

ಸಂಕ್ರಾಂತಿ ವೇಳೆಗೆ ಕಾಂಗ್ರೆಸ್ ಸರ್ಕಾರ ಬೀಳುತ್ತೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಚೆಲುವನಾರಾಯಣಸ್ವಾಮಿ, ರಾತ್ರಿಯಲ್ಲ ಕನಸ್ಸು ಕಾಣೋಕೆ ಹೇಳಿ. ಐದು ವರ್ಷ‌ ಸರ್ಕಾರ ಕಂಪ್ಲೀಟ್ ಮಾಡಿದ್ಮೇಲೆ ಗೊತ್ತಾಗುತ್ತೆ ಎಂದಿದ್ದಾರೆ.  ಕಾಂಗ್ರೆಸ್ ನಲ್ಲಿ ಮೂರು ಡಿಸಿಎಂ ಕೂಗು ವಿಚಾರ. ಅದೆಲ್ಲವನ್ನ ಪಕ್ಷ ನೋಡಿಕೊಳ್ಳುತ್ತೆ ಎಂದು ಚೆಲುವನಾರಾಯಣಸ್ವಾಮಿ ಹೇಳಿದ್ದಾರೆ.

3 ಕೋಟಿ ರೂಪಾಯಿ ಅನುದಾನದಲ್ಲಿ ಕಿತ್ತೂರು ಉತ್ಸವ ನಡೆಸುವ ಘೋಷಣೆ

‘ಬಿಜೆಪಿ ಜತೆ ಮೈತ್ರಿಯಾಗಿದೆ ಎಂದರೆ ಅಲ್ಪಸಂಖ್ಯಾತರಿಗೆ ಭಯ ಬೇಡ’

ಪರಿಸರ ಜಾಗೃತಿಗಾಗಿ ಪಾದಯಾತ್ರೆ: ಮಾದರಿಯಾದ ಅಯೋಧ್ಯೆಯ ಯುವಕ

- Advertisement -

Latest Posts

Don't Miss