ತುಮಕೂರು; ಈಗಾಗಲೇ ಲೋಕಸಭೆ ಚುನಾವಣೆ ಹಿನ್ನೆಲೆ ಜೆಡಿಎಸ್ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು ಚುನಾವಣೆಯಲ್ಲಿ ಬಹುಮತ ಸಾಧಿಸುವ ಯತ್ನದಲ್ಲಿದೆ ಇದಕ್ಕೆ ಚಿಕ್ಕನಾಯಕನ ಹಳ್ಳಿ ಜೆಡಿಎಸ್ ಶಾಸಕ ಸುರೇಶ್ ಬಾಬು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಪಕ್ಷವನ್ನು ಉಳಿಸಲು ವರಿಷ್ಠರು ಈ ತೀರ್ಮಾನ ತಗೆದುಕೊಂಡಿದ್ದಾರೆ ಎಂಬುದು ನನ್ನ ಭಾವನೆ. ಇಂಡಿಯಾ ಕೂಟಕ್ಕೆ ಜೆ.ಡಿ.ಎಸ್ ಪಕ್ಷವನ್ನು ಆಹ್ವಾನ ಮಾಡಿಲ್ಲ ಎಂದು ಈ ರೀತಿ ತೀರ್ಮಾನ ತಗೊಂಡಿದ್ದಾರೆ. ಪಕ್ಷದ ತೀರ್ಮಾನಕ್ಕೆ ನಾವು ಬದ್ದ. ಯಾವ ಯಾವ ಚುನಾವಣೆ ಹೊಂದಾಣಿಕೆ ಮಾಡ್ಕೊಳ್ತಾರೆ ಎಂಬುದನ್ನು ತೀರ್ಮಾನ ಮಾಡಿಲ್ಲ. ಸದ್ಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಆಗುತ್ತೆ.
ಜೆ.ಡಿ.ಎಸ್.ಪಕ್ಷದ ಮುಸ್ಲಿಂ ಮುಖಂಡರ ಅಸಮಾಧಾನ ವಿಚಾರ ಎಲ್ಲಾ ಪಕ್ಷದಲ್ಲೂ ಮುಸ್ಲಿಂ ಇದ್ದಾರೆ. ಕಾಂಗ್ರೆಸ್ ನಲ್ಲಿ ಮಾತ್ರ ಅಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದರು. ಕಾರ್ಯಕ್ರಮಗಳ ಆಧಾರದ ಮೇಲೆ ಆ ಸಮುದಾಯದವರು ಮುಂದಿನ ನಿರ್ಧಾರ ತಗೋಳ್ತಾರೆ ಅನ್ನೊದು ನನ್ನ ಭಾವನೆ ಎಂದು ಉತ್ತರಿಸಿದರು.
Bhadra dam: ಭದ್ರಾ ಆಣೆಕಟ್ಟಿನಿಂದ ನೀರು ಬಿಡಲು ಮೀನಾಮೇಶ; ದಾವಣಗೆರೆ ರೈತರಿಂದ ಬಂದ್ ಗೆ ಕರೆ




