ಮೈಸೂರು: ಎಚ್.ಡಿ ರೇವಣ್ಣ ಸರ್ಕಾರ ಉಳಿಸೋದಕ್ಕೆ ಬರಿಗಾಲಲ್ಲಿ ನಡೆದ್ರೂ, ನಿಂಬೆಹಣ್ಣು ಇಟ್ಟುಕೊಂಡು ಓಡಾಡಿದ್ರೂ ಸರ್ಕಾರ ಉಳಿಸೋಕೆ ಆಗಲಿಲ್ಲ ಅಂತ ಬಿಜೆಪಿ ಮುಖಂಡ ಎ.ಮಂಜು ಲೇವಡಿ ಮಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಎ.ಮಂಜು, ದೇವೇಗೌಡರ ಕುಟುಂಬಕ್ಕೆ ಸಂಖ್ಯೆ 9 ಆಗಿಬರೋದಿಲ್ಲ. ಇದನ್ನು ನಾನು ದೇವೇಗೌಡರಿಗೆ ಮೊದಲೇ ಹೇಳಿದ್ದೆ. ಇದಕ್ಕೆ 1999,2009ರಲ್ಲಿ ಸೋಲು ಕಂಡಿದ್ದು ಹಾಗೂ ಇದೀಗ 2019ರಲ್ಲೂ ಕೂಡ ಸೋಲನುಭವಿಸಿದ್ದೇ ಸಾಕ್ಷಿಯಾಗಿದೆ. ಆದರೆ ಅವರು ಬರಿಗಾಲಿನಲ್ಲಿ ನಡೆದರೆ, ನಿಂಬೆಹಣ್ಣು ಹಿಡಿದುಕೊಂಡು ಓಡಾಡಿದರೆ, ದೇವಸ್ಥಾನಗಳನ್ನು ಸುತ್ತಿತರೆ ನಮ್ಮ ಕುಟುಂಬ ಅಧಿಕಾರದಲ್ಲಿರುತ್ತೆ ಅಂತ ಅಂದುಕೊಂಡಿದ್ದರು ಅಂತ ಎ.ಮಂಜು ಹೇಳಿದ್ರು. ಇದೀಗ ನಾವು ಕೂಡ ಬಿಜೆಪಿ ಸರ್ಕಾರ ಸುಭದ್ರವಾಗಿರಲಿ ಅನ್ನೋದಕ್ಕಿಂದ ಈ ರಾಜ್ಯದ ಜನತೆಯ ಒಳಿತಿಗಾಗಿ ದೇವಸ್ಥಾನಕ್ಕೆ ಬಂದ್ದೇವೆ ಎಂದರು.
ಬಳಿಕ ಮಾತನಾಡಿದ ಮಂಜು, ಎಲ್ಲರಿಗೂ ದೇವರು ಇದ್ದೇ ಇರುತ್ತಾನೆ, ದೇವರು ಒಬ್ಬರಿಗೇ ಮಾತ್ರ ಸೀಮಿತವಲ್ಲ. ಮಂಗಳವಾರದವರೆಗೂ ವಿಶ್ವಾಸಮತ ಯಾಚನೆ ಮುಂದೂಡಿಕೆ ಮಾಡಿದ್ರೆ ಸರ್ಕಾರ ಉಳಿಯುತ್ತೆ ಅಂತ ಅಂದುಕೊಂಡಿದ್ದರು. ಬರಿಗಾಲಲ್ಲಿ ಓಡಾಡಿದ್ದ ರೇವಣ್ಣ ಇಟ್ಟುಕೊಂಡಿದ್ದ ನಿಂಬೇಹಣ್ಣು ಫಲ ನೀಡಲಿಲ್ಲ. ಸರ್ಕಾರ ಉಳಿಸಲು ಆಗಲಿಲ್ಲ ಅಂತ ಇದೇ ವೇಳೆ ಎ.ಮಂಜು ಲೇವಡಿ ಮಾಡಿದ್ರು.