Saturday, April 19, 2025

Latest Posts

ಸಾಲ ವಾಪಸ್ ಕೇಳಿದ್ದಕ್ಕೆ ಬಿಜೆಪಿ ಮುಖಂಡನಿಂದ ಹಲ್ಲೆ ಆರೋಪ..?

- Advertisement -

ಹಾಸನ: ಸಾಲ ವಾಪಸ್ ಕೇಳಿದ್ದಕ್ಕೆ ಬಿಜೆಪಿ ಮುಖಂಡರು ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಉದ್ದೂರು ಪುರುಷೋತ್ತಮ್ ವಿರುದ್ಧ ಆರೋಪ ಮಾಡಲಾಗಿದೆ. ಉದ್ದೂರು ಗ್ರಾಮದ ಶೇಖರ್ ಎಂಬುವವರಿಗೆ ಮನೆ ಕಟ್ಟಲು ಮಂಜೇಗೌಡ ಎಂಬುವವರು ಟೈಲ್ಸನ್ನು ಸಾಲ ಕೊಟ್ಟಿದ್ದರು. ಆರು ತಿಂಗಳ ಹಿಂದೆ ಶೇಖರ್, ಮಂಜೇಗೌಡರಿಂದ ಟೈಲ್ಸ್ ಸಾಲ ಪಡೆದಿದ್ದರು.

ಮೆಕ್ ಡೋನಾಲ್ಡ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ಮಹಿಳೆ..

74 ಸಾವಿರ ರೂಪಾಯಿ ಸಾಲ ವಾಪಸ್ ನೀಡುವಂತೆ ಮಂಜೇಗೌಡ, ಶೇಖರ್‌ಗೆ ಕೇಳಿದ್ದಾರೆ. ಹೀಗಾಗಿ ನಿನ್ನೆ ಸಂಜೆ ಸಾಲ ವಾಪಸ್ ಕೊಡುವುದಾಗಿ, ಶೇಖರ್ ಕಾಲ್ ಮಾಡಿ ಹೇಳಿದ್ದಾರೆ. ಸಾಲ ತೆಗೆದುಕೊಳ್ಳಲು ಶೇಖರ್ ಇರುವ ಜಾಗಕ್ಕೆ ಮಂಜೇಗೌಡ ಹೋಗಿದ್ದು, ಈ ವೇಳೆ ಅಲ್ಲಿ ಬಿಜೆಪಿ ಮುಖಂಡ ಉದ್ದೂರು ಪುಷೋತ್ತಮ್ ಕೂಡ ಇದ್ದರು.

‘ಉಗ್ರಗಾಮಿ-ನಾಲಾಯಕ್ ಪದ ಬಳಕೆ ವಾಪಸ್ ಪಡೆಯಲಿ..’

ಮಂಜೇಗೌಡ ಬರುತ್ತಿದ್ದಂತೆ, ಪುರುಷೋತ್ತಮ್ ಏಕಾಏಕಿ ದಾಳಿ ನಡೆಸಿದ್ದಾರೆಂದು ಮಂಜೇಗೌಡ ಆರೋಪಿಸಿದ್ದಾರೆ. ಇದಕ್ಕೆ ಸಾಕ್ಷಿಯಾ, ಗಲಾಟೆ ಮಾಡಿರುವ ವೀಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸದ್ಯ ಹಲ್ಲೆಗೆ ಒಳಗಾಗಿರುವ ಮಂಜೇಗೌಡ, ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಹೌಸನ ಪೆನ್ಕ್ಷನ್ ಮೊಹೊಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪುರುಷೋತ್ತಮ್ ವಿರುದ್ಧ ದೂರು ನೀಡಿದ್ರೂ ಕೂಡ ಪೊಲೀಸರು, ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಲಾಗಿದೆ.

- Advertisement -

Latest Posts

Don't Miss