Political News: ಬೆಳಗಾವಿ: ಬೆಂಗಳೂರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುಣ್ಯಸ್ಮರಣೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಸಭಾ ಆದಿವೇಶನದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಆಗಮಿಸಿದ್ದಾರೆ.
ಸಾಂಬ್ರಾ ವಿಮಾನ ನಿಲ್ದಾಣದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ತೆಲಂಗಾಣದಲ್ಲಿ ರೇವಂತ್ ರೆಡ್ಡಿ ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವ ಬಗ್ಗೆ ಇನ್ನ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದರು.
ನಿನ್ನೆ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರು ಸಿದ್ದರಾಮಯ್ಯ ಮೊದಲಿನ ಅವಧಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿಲ್ಲ, ಮಂಕಾಗಿದ್ದಾರೆ, ಮೆತ್ತಗಾಗಿದ್ದಾರೆ ಅಂತ ಹೇಳಿದ್ದನ್ನು ಅವರಿಗೆ ನೆನಪಿಸಿದಾಗ, ಅವರ ಮಾತು ಬಿಡಿ ರಾಜಕಾರಣ ಮಾಡುತ್ತಾರೆ, ತಾನು ಮಂಕಾಗಿದ್ದೇನೆಯೇ ಮಾಧ್ಯಮದವರು ಹೇಳಲಿ ಅಂತ ಹೇಳಿದರು.
ಅಲ್ಲಾ ಸಾರ್ ಮೊದಲಿನ ಹಾಗೆ ಸ್ಟ್ರಾಂಗ್ ಅಂತ ಮಾಧ್ಯಮದವರು ಹೇಳುತ್ತಿದ್ದಂತೆಯೇ, ಅಂದರೆ ಮೊದಲು ತಾನು ಸ್ಟ್ರಾಂಗ್ ಆಗಿದ್ದಿದನ್ನು ಅವರು ಒಪ್ಪಿಕೊಂಡಿದ್ದಾರೆ ಅಂತಾಯ್ತು ಎಂದು ನಗುತ್ತಾ ಹೇಳಿ ಸಿದ್ದರಾಮಯ್ಯ ಅಲ್ಲಿಂದ ನಡೆದರು.
‘ಮುಸ್ಲಿಂ ಹಿತರಕ್ಷಣೆ ಮಾಡ್ತೀನಿ ಅಂತಾ ಸಿಎಂ ಹೇಳಿದ್ದಾರೆ. ಅದನ್ನು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ’
ಜಾತಿ ಕಾರಣಕ್ಕೆ ನನ್ನನ್ನು ಆರ್ಎಸ್ಎಸ್ ಕಚೇರಿ ಪ್ರವೇಶಕ್ಕೆ ನಿರಾಕರಿಸಿದ್ದಾರೆ: ಗೂಳಿಹಟ್ಟಿ ಶೇಖರ್
‘ಡೈನಾಮಿಕ್ ಶಾಸಕ ಬಸವರಾಜ ಪಾಟೀಲ್ ಯತ್ನಾಳ ಅವರು ಸುಖಾಸುಮ್ಮನೆ ಆರೋಪ ಮಾಡ್ತಾ ಇದ್ದಾರೆ’