‘ಅಯೋಧ್ಯೆಯಲ್ಲಿ ರಾಮ ಮಂದಿರ, ಅಂಜನಾದ್ರಿಯಲ್ಲಿ ಹನುಮ ಮಂದಿರ ನಿರ್ಮಾಣ ನಮ್ಮ ಧ್ಯೇಯ’

ಕಾಂಗ್ರೆಸ್ ಇಂದು ಪ್ರಣಾಳಿಕೆ ರಿಲೀಸ್ ಮಾಡಿದ್ದು, 10 ಕೆಜಿ ಅಕ್ಕಿ, ಹೆಣ್ಣು ಮಕ್ಕಳಿಗೆ ಫ್ರೀ ಬಸ್ ಸಂಚಾರ, ಸೇರಿ ಹಲವು ಕಾರ್ಯಕ್ರಮಗಳನ್ನು ಕೊಡುವುದಾಗಿ ಭರವಸೆ ನೀಡಿದೆ. ಆದರೆ, ಭಜರಂಗ ದಳ ನಿಷೇಧ ಎಂಬ ನಿರ್ಧಾರಕ್ಕೆ ಬಂದಿರುವುದು ಮಾತ್ರ, ಹಲವರು ಕಣ್ಣು ಕೆಂಪಾಗುವುದಕ್ಕೆ ಕಾರಣವಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ, ಭಯೋತ್ಪಾದನೆ, ಹಿಂಸೆ ಹಾಗೂ ದೇಶದ್ರೋಹದ ಚಟುವಟಿಕೆ ನಡೆಸುವ ಪಿ.ಎಫ್.ಐ ಜೊತೆ ಧರ್ಮ, ಪರಂಪರೆ ಹಾಗೂ ಇತಿಹಾಸವನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿರುವ ಭಜರಂಗದಳವನ್ನು ತುಲನೆ ಮಾಡುವುದು ದೊಡ್ಡ ಅಪರಾಧ. ಆದರೇ ಕಾಂಗ್ರೆಸ್ ಇಂತಹ ತಪ್ಪು ಮಾಡಿ, ಭಜರಂಗದಳವನ್ನು ನಿಷೇಧಿಸುತ್ತೇವೆ ಎಂದು ಹೇಳಿದೆ. ಹನುಮ ಭಕ್ತರು ಸಿಡಿದು ನಿಂತರೇ, ಈಗಾಗಲೇ ಅವಸಾನದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಈ ದೇಶದಿಂದ ಕಿತ್ತೆಸೆಯುತ್ತಾರೆ. ಉತ್ತರದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ, ದಕ್ಷಿಣದ ಅಂಜನಾದ್ರಿಯಲ್ಲಿ ಶ್ರೀ ಹನುಮ ಮಂದಿರ ನಿರ್ಮಾಣ ನಮ್ಮ ಧ್ಯೇಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ವಿಜಯೇಂದ್ರ, ರಾಷ್ಟ್ರ ಭಕ್ತ ಸಂಘಟನೆ ‘ಬಜರಂಗ ದಳ’ ನಿಷೇಧದ ನಿಮ್ಮ ಪ್ರಣಾಳಿಕೆಯ ಅಸ್ತ್ರ , ನಿಮ್ಮನ್ನು ನಿಶ್ಯಸ್ತ್ರಗೊಳಿಸಿ, ನಿಷ್ಕ್ರೀಯಗೊಳಿಸಲಿದೆ. ‘ವಿನಾಶಕಾಲೇ ವಿಪರೀತ ಬುದ್ದಿ’ ಧರ್ಮ-ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ಎಂದು ಬರೆದಿದ್ದಾರೆ.

ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಸೇರಿ ಇನ್ನೂ ಹಲವು ಬಿಜೆಪಿ ನಾಯಕರು ಟ್ವಿಟರ್ನಲ್ಲಿ ಹನುಮಂತರ ಪ್ರೊಫೈಲ್ ಪಿಕ್ಚರ್ ಹಾಕಿದ್ದಾರೆ. ಇದರಲ್ಲಿ ನಾನೊಬ್ಬ ಕನ್ನಡಿಗ, ನನ್ನ ನಾನು ಹನುಮ ಜನಿಸಿದ ನಾಡು. ನಾನೊಬ್ಬ ಭಜರಂಗಿ ಎಂದು ಬರೆದಿದೆ.

ಒಟ್ಟಾರೆಯಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಂದಿರುವ ಭಜರಂಗದಳ ನಿಷೇಧ ವಿಚಾರಕ್ಕೆ ಹಲವು ಹಿಂದೂಗಳು, ಬಿಜೆಪಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ, ಕಾಂಗ್ರೆಸ್‌ಗೆ ಕೆಲ ವೋಟ್ ನಷ್ಟವಾಗುವ ಸಾಧ್ಯತೆ ಇದೆ.

About The Author