ಹುಬ್ಬಳ್ಳಿ: ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ತುಳಿಯುವ ಕೆಲಸವಾಗುತ್ತಿದೆ ಎಂಬ ವಿಧಾನ ಪರಿಷತ್ ಬಿಜೆಪಿ ಸದಸ್ಯ ಪ್ರದೀಶ್ ಶೆಟ್ಟರ್ ಹೇಳಿಕೆಗೆ ಧಾರವಾಡ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜ ಕುಂದಗೋಳ ಮಠ ಅಸಮಧಾನ ಹೊರಹಾಕಿದ್ದಾರೆ
ಕರ್ನಾಟಕ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಹೈಕಮಾಂಡ್ ಕಸರತ್ತು ನಡೆಸುತ್ತಿದೆ. ಸಿಟಿ ರವಿ ಅವರನ್ನು ಆಯ್ಕೆ ಮಾಡಲು ಪ್ಲಾನ್ ಮಾಡಲಾಗಿದೆ ಎನ್ನಲಾಗುತ್ತಿದೆ. ಇದನ್ನೇ ಮುಂದಿಟ್ಟುಕೊಂಡು, ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ತುಳಿಯುವ ಕೆಲಸವಾಗುತ್ತಿದೆ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಪ್ರದೀಪ್ ಶೆಟ್ಟರ್ ಹೇಳಿದ್ದಾರೆ. ಇವರ ಹೇಳಿಕೆಗೆ ಧಾರವಾಡ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷರು ಬಸವರಾಜ ಕುಂದಗೋಳ ಮಠ ಅಸಮಾಧಾನ ಹೊರಹಾಕಿದ್ದಾರೆ.
ಭಾರತೀಯ ಜನತಾ ಪಕ್ಷದಲ್ಲಿ ಎಂದಿಗೂ ನಿಮ್ಮನ್ನು ಕಡೆಗಣನೆ ಮಾಡಿಲ್ಲ. ಕಾರ್ಯಕರ್ತರಿಂದ ಕೇಂದ್ರ ನಾಯಕರವರೆಗೂ ಗಣ್ಯರೆಂದು ಅರಿಯಬೇಕು. ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಸನ್ಮಾನ ಕಾರ್ಯಕ್ರಮಕ್ಕೆ ಕರೆದಿರಲಿಲ್ಲ. ನಿಮ್ಮನ್ನು ಕರೆಯದಿದ್ದಕ್ಕೆ ಬಹಿರಂಗವಾಗಿ ಕ್ಷಮೆಯಾಚಿಸಲು ನಾವು ಸಿದ್ಧ.ಆದರೆ ಬಿಜೆಪಿ ಚಿಹ್ನೆ ಮೇಲೆ ಎರಡು ಬಾರಿ ಎಂಎಲ್ ಸಿ ಆಗಿ ಈ ರೀತಿ ಮಾತಾಡುವುದು ತಪ್ಪು ಎಂದರು.
ಜಗದೀಶ್ ಶೆಟ್ಟರ್ ವೈಯಕ್ತಿಕ ವರ್ಚಸ್ಸಿನಿಂದ ಶಾಸಕರಾಗಿರಲಿಲ್ಲ, ಜಗದೀಶ್ ಶೆಟ್ಟರ್ ಆರು ಬಾರಿ ಶಾಸಕರಾಗಿದ್ದೂ ಬಿಜೆಪಿ ಚಿಹ್ನೆಯಿಂದಲೇ. ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಮೂರರಲ್ಲಿ ಲಿಂಗಾಯತ ಶಾಸಕರೇ ಇದ್ದಾರೆ. ನೀವು ಜನ ಪ್ರತಿನಿಧಿಯಾಗಿ ಮಾರ್ಗದರ್ಶನ ಮಾಡಬೇಕೆ ಹೊರತು, ಈ ರೀತಿ ಹೇಳಿಕೆ ಕೊಡಬಾರದು ಎಂದು ಬಸವರಾಜ ಕುಂದಗೋಳಮಠ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Lad Foundation ಲಾಡ್ ಫೌಂಡೇಶನ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ..!
Tractor Driver: ಟ್ರ್ಯಾಕ್ಟರ್ ರಿವರ್ಸ್ ಚಲಾಯಿಸಿ ಯಲ್ಲಮ್ಮನ ಗುಡ್ಡಕ್ಕೆ ಹೋದ ಯುವಕ..!
Pradeep Shetter: ಲಿಂಗಾಯತ ನಾಯಕರನ್ನು ಬಿಜೆಪಿಯಲ್ಲಿ ತುಳಿಯುತ್ತಿದ್ದಾರೆ..!