Chikkaballapura News: ಚಿಕ್ಕಬಳ್ಳಾಪುರ: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಗಡಿದಂ ರಸ್ತೆ, ಕೊಂಡಂವಾರಪಲ್ಲಿಯ ಎಸ್.ಎಲ್.ಎನ್. ಕಲ್ಯಾಣ ಮಂಟಪದಲ್ಲಿ ಇಂದು ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯು ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ರಾಮಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಜರುಗಿತು. ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಆರ್. ಅಶೋಕ್ ರವರು, ಶ್ರೀ ಪಿ.ಸಿ.ಮೋಹನ್ ರವರು, ಶ್ರೀಎಸ್.ಮುನಿಸ್ವಾಮಿರವರು ಹಾಗೂ ರಾಜ್ಯ ಕಾರ್ಯದರ್ಶಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ತುಳಸಿ ಮುನಿರಾಜುಗೌಡರವರನ್ನು ಒಳಗೊಂಡ ರಾಜ್ಯ ತಂಡದವರು ಈ ಸಭೆಯಲ್ಲಿ ಉಪಸ್ಥಿತರಿದ್ದರು.
ಈ ಸಭೆಯಲ್ಲಿ ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಕಾಂತರಾಜುರವರು, ಶ್ರೀ ರಾಜಣ್ಣ ರವರು, ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪಕ್ಷದ ಹಿರಿಯ ಮುಖಂಡರು, ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
‘ಕಿಮ್ಸ್ ಸಿಬ್ಬಂದಿ ಹೆಚ್ಚಳಕ್ಕೆ ರಾಜ್ಯ ಸರ್ಕಾರಕ್ಕೆ ಮನವಿ ಮಾತಾಡುತ್ತೇನೆ’
ಬ್ರ್ಯಾಂಡ್ ಬೆಂಗಳೂರು ಅಭಿಯಾನದ ವೆಬ್‌ಸೈಟ್ ಅಧಿಕೃತ ರಿಲೀಸ್: ಟ್ವೀಟ್ ಮೂಲಕ ಡಿಕೆಶಿ ವಿವರಣೆ
‘ಸಿದ್ದರಾಮಯ್ಯ,ಜಾರಕಿಹೊಳಿ ಅವರೇ 135 ಸೀಟ್ ಸಿಕ್ಕಿದ್ದು EVM ನಿಂದ ಇದು ನೆನಪಿರಲಿ’