ಮಂಡ್ಯ: ರೈತರನ್ನು ಹತ್ತಿಕ್ಕುವ ಕೆಲಸವನ್ನ ಕಾಂಗ್ರೆಸ್ ನವರು ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ದ ಸಚಿವ ನಾರಾಯಣ್ ಗೌಡ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಗೌರವದಿಂದ ನಡೆದುಕೊಳ್ಳಬೇಕು. ನಮಗೂ ಮಾತನಾಡಲು ಬರುತ್ತದೆ ಹಾಗಂತ ದೊಡ್ಡವರಿಗೆ ಟೀಕೆ ಟಿಪ್ಪಣಿಯನ್ನು ನಾವು ಮಾಡುವುದಿಲ್ಲ. ಅವರು ಒಂದು ಪಕ್ಷದಲ್ಲಿದ್ದಾರೆ, ವಿರೋಧ ಪಕ್ಷದ ನಾಯಕರಾಗಿದ್ದಾರೆ. ಲೆಟರ್ ಮೂಲಕ ಸರ್ಕಾರಕ್ಕೆ ತಲುಪಿಸಿದರೆ ಸರ್ಕಾರ ಸಮಸ್ಯೆ ಬಗೆಹರಿಸುತ್ತದೆ.
ಆಧ್ಯಾತ್ಮಿಕ ಸಂತೋಷಕ್ಕಾಗಿ ಪ್ರತಿದಿನ ಮಾಡಬೇಕಾದ ಕೆಲಸಗಳು..!
ಮಂಡ್ಯದಲ್ಲಿ ಎರಡೂ ಶುಗರ್ ಫ್ಯಾಕ್ಟರಿ ಶುರುವಾಗಿದ್ದು ಬಿಜೆಪಿಯವರಿಂದ. ಇವರ ಸರ್ಕಾರ ಯಾಕೆ ಮಾಡಲಿಲ್ಲ? ಮೂಲೆಗೆ ಹಾಕಿ ಕುಟ್ಟುಹಿಡಿಸಿದ್ರು ಕಾಂಗ್ರೆಸ್ ಹಾಗೂ ಜೆಡಿಎಸ್ ನವರು. ಸಿದ್ದರಾಮಯ್ಯ ಬಿಜೆಪಿಗೆ ಶಬಾಸ್ ಗಿರಿ ಕೊಡಬೇಕು ಅವರು ಸುಮ್ಮನೆ ಏನೇನೂ ಮಾತನಾಡಬಾರದು. ನಮಗೆ ಜವಾಬ್ದಾರಿ ಇದೆ ನಾವು ಕೆಲಸ ಮಾಡಿ ತೋರಿಸುತ್ತೇವೆ ಅವರಿಗೆ ಮಾತನಾಡುವ ಜವಾಬ್ದಾರಿ ಇದೆ ಹಾಗಾಗಿ ಮಾತನಾಡಲಿ ಎಂದು ಕೆ.ಆರ್.ಪೇಟೆಯಲ್ಲಿ ಸಚಿವ ನಾರಾಯಣ್ ಗೌಡ ವ್ಯಂಗ್ಯವಾಡಿದರು.