Sunday, July 20, 2025

Latest Posts

Political News: ಗೃಹಲಕ್ಷ್ಮೀ ಹಣ ಪರಿಷ್ಕರಣೆ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು..?

- Advertisement -

Political News: ಮೇ ನಿಂದಲೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆದಷ್ಟು ಬೇಗ ಗೃಹಲಕ್ಷ್ಮೀ ಹಣ ಬಿಡುಗಡೆ ಮಾಡುತ್ತೇವೆ ಅಂತಾ ಹೇಳುತ್ತಲೇ ಇದ್ದಾರೆ. ಆದರೆ ಜೂನ್ ತಿಂಗಳು ಮುಗಿಯುತ್ತ ಬಂದರೂ, ರಾಜ್ಯದ ಗೃಹಲಕ್ಷ್ಮೀಯರ ಅಕೌಂಟ್‌ಗೆ ಹಣ ಬಂದು ಜಮೆ ಆಗಲೇ ಇಲ್ಲ. ಇದೀಗ ಸಚಿವೆ ಮತ್ತೆ ಈ ಬಗ್ಗೆ ಮಾತನಾಡಿದ್ದಾರೆ.

ಟೆಕ್ನಿಕಲಿ ಏನೂ ಸಮಸ್ಯೆ ಇಲ್ಲ. ನಾವು ಏಪ್ರಿಲ್ ತನಕದ ಹಣವನ್ನು ಹಂಚಿಕೆ ಮಾಡಿದ್ದೇವೆ. ಆದರೆ ಮೇ ಮತ್ತು ಜೂನ್ ತಿಂಗಳ ಕಂತು ಬಿಡುಗಡೆ ಮಾಡುವುದು ಬಾಕಿ ಇದೆ. ಆದರೆ ರೆಗ್ಯೂಲರ್ ಆಗಿ ನಮ್ಮ ಇಲಾಖೆಗೆ ಹಣ ಬಿಡುಗಡೆ ಆಗ್ತಾ ಇದೆ. ಮುಂಚೆಯಾಗಿದ್ದರೆ ನಮ್ಮ ಇಲಾಖೆಗೆ ಹಣ ಬರುತ್ತಿತ್ತು. ಆದರೆ ಈಗ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗೆ ಹಣ ಸುತ್ತಾಡಿಕ“ಂಡು ಬರುತ್ತದೆ. ಹಾಗಾಗಿ ಕೆಲ ವಾರ ಡಿಲೇ ಆಗಿದೆ. ಆದರೆ ರೆಗ್ಯೂಲರ್ ಆಗಿ ನಮ್ಮ ಇಲಾಖೆಗೆ ಹಣ ಬರುತ್ತಿದೆ. ಮುಖ್ಯಮಂತ್ರಿ ಅವರಿಗೆ ಅದರ ಬಗ್ಗೆ ಕಾಳಜಿ ಇದೆ. ಹಾಗಾಗಿ ಯಾವುದೇ ಕಂತನ್ನು ತಡೆಯುವ ಪ್ರಮೇಯವೇ ಇಲ್ಲವೆಂದು ಸಚಿವೆ ಹೇಳಿದ್ದಾರೆ.

ಅಲ್ಲದೇ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯ್ತಿ ಮೂಲಕ ಇಂತಿಷ್ಟು ಖರ್ಚು ಮಾಡಬೇಕು ಎಂದು ಕೇಂದ್ರ ಸರ್ಕಾರದ ಸುತ್ತೋಲೆ ಇದೆ. ಈ ಕಾರಣ್ಕಕೆ ಗೃಹಲಕ್ಷ್ಮೀ ಹಣ, ಜಿ.ಪಂ ಮತ್ತು ತಾ.ಪಂ ಸುತ್ತಿ ಬರುತ್ತದೆ ಎಂದಿದ್ದಾರೆ.

ಇನ್ನು ಮಾಧ್ಯಮದವರು ಫಲಾನುಭವಿಗಳ ಪರಿಷ್ಕರಣೆ ಬಗ್ಗೆ ಕೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ಸಚಿವರು, ಯಾವುದೇ ಫಲಾನುಭವಿಗಳ ಪರಿಷ್ಕರಣೆ ಮಾಡುವುದಿಲ್ಲ. ಇದು ನಿರಂತರವಾಗಿ ಗೃಹಲಕ್ಷ್ಮೀ ಆ್ಯಡ್ ಆಗುತ್ತಲೇ ಇದೆ. ಪ್ರತೀ ತಿಂಗಳು 15ರಿಂದ 30 ಸಾವಿರದವರೆಗೂ ಗೃಹಲಕ್ಷ್ಮೀಯರ ಸಂಖ್ಯೆ ಹೆಚ್ಚಾಗುತ್ತಿದೆ. 1 ಕೋಟಿ, 25 ಲಕ್ಷಕ್ಕೂ ಮೇಲ್ಪಟ್ಟು ಯಜಮಾನಿಯರು, ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಸಚಿವೆ ಹೇಳಿದ್ದಾರೆ.

- Advertisement -

Latest Posts

Don't Miss