Mangaluru News: ಸೂರತ್‌ಕಲ್: ನಿನ್ನೆಯಷ್ಟೇ ಸಚಿವ ಪ್ರಿಯಾಂಕ್ ಖರ್ಗೆ, ಚಕ್ರವರ್ತಿ ಸೂಲಿಬೆಲೆ ಕುರಿತಾದ ಪಠ್ಯದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಸೂಲಿಬೆಲೆ ಯಾವ ಪಿಎಚ್‌ಡಿ ಪದವಿ ಗಳಿಸಿದ್ದಾನೆ..? ಬಾಡಿಗೆ ಭಾಷಣಕಾರರ ಪಠ್ಯವನ್ನು ನಮ್ಮ ಮಕ್ಕಳು ಯಾಕೆ ಓದಬೇಕು..? ಎಂದು ಪ್ರಶ್ನಿಸಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ, ಇಂದು ಪ್ರತಿಕ್ರಿಯಿಸಿರುವ ಶಾಸಕ ಭರತ್ ಶೆಟ್ಟಿ, ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿ ಕಾರಿದ್ದಾರೆ. ಎಂಜಿನಿಯರಿಂಗ್ ಮುಗಿಸಿ, ಕೈ ತುಂಬಾ ಸಂಬಳ ಸಿಗುವ ಕೆಲಸ ಸಿಕ್ಕರೂ, ಅದನ್ನು ಬಿಟ್ಟು ದೇಶದ ಉದ್ಧಾರಕ್ಕಾಗಿ, ಸಮಾಜ ಸೇವೆಯಲ್ಲಿ ತೊಡಗಿರುವ ಚಕ್ರವರ್ತಿ ಸೂಲಿಬೆಲೆ ವಿದ್ಯಾರ್ಹತೆ ಬಗ್ಗೆ, ಪ್ರಥಮ ಪಿಯುಸಿ ಫೇಲಾಗಿರುವ ಪ್ರಿಯಾಂಕ್ ಖರ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದಿದ್ದಾರೆ.
ಅಲ್ಲದೇ, ನಿಮ್ಮ ವಿದ್ಯಾರ್ಹತೆ ನೋಡಿಕೊಂಡು ಸೂಲಿಬೆಲೆ ಬಗ್ಗೆ ಮಾತನಾಡಿ. ಅವರ ವಿರುದ್ಧ ಮಾತನಾಡುವ ಯಾವ ನೈತಿಕತೆಯೂ ನಿಮಗಿಲ್ಲ ಎಂದು ಭರತ್ ವಾಗ್ದಾಳಿ ನಡೆಸಿದ್ದಾರೆ. ರಾಷ್ಟ್ರಪ್ರೇಮಿ, ರಾಷ್ಟ್ರ ಭಕ್ತಿಯ ಬಗ್ಗೆ ಮಕ್ಕಳಿಗೆ ತಿಳಿಸುವ ಪ್ರಯತ್ನವೂ ಮಾಡದ ಕಾಂಗ್ರೆಸ್, ಭಯೋತ್ಪಾದಕರಿಗೆ ಏನಾದರೂ ಆದರೆ, ಕಣ್ಣೀರಿಡುತ್ತದೆ. ಇಂಥವರಿಂದಲೇ ನಮ್ಮ ದೇಶ ಸೊರಗುತ್ತಿದೆ ಹೊರತು, ಸೂಲಿಬೆಲೆಯಂಥ ದೇಶ ಭಕ್ತರಿಂದಲ್ಲ ಎಂದು ಕಿಡಿಕಾರಿದ್ದಾರೆ.
‘ಗ್ಯಾರಂಟಿಗಳ ಆಸೆ ತೋರಿಸಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ, ಮಸೀದಿಗಳ ಸೌಂಡ್ ಹೆಚ್ಚಾಗಿದೆ’
ಕಾಂಗ್ರೆಸ್ ಸರಕಾರದಲ್ಲಿ ಕಾಸಿಗಾಗಿ ಪೋಸ್ಟಿಂಗ್: ಸ್ಫೋಟಕ ಅಂಶಗಳನ್ನು ಬಯಲು ಮಾಡಿದ ಹೆಚ್ಡಿಕೆ
‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಮಾಡುತ್ತಿದೆ’