Mumbai News: ಬಿಜೆಪಿ ಶಾಸಕ ಗಣಪತ್ ಗಾಯಕ್ವಾಡ್, ಶಿವಸೇನೆ ಬಣದ ನಾಯಕನಾದ ಮಹೇಣ್ ಗಾಯಕ್ವಾಡ್ ಎಂಬುವವರ ಮೇಲೆ ಪೊಲೀಸ್ ಠಾಣೆಯಲ್ಲೇ ಗುಂಡು ಹಾರಿಸಿದ್ದು, ಮಹೇಶ್ ದೇಹಕ್ಕೆ 5 ಗುಂಡುಗಳು ಹೊಕ್ಕಿದೆ. ಮಹೇಶ್ ಸ್ಥಿತಿ ಗಂಭೀರವಾಗಿದೆ.
ಮುಂಬೈನ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಮಹೇಶ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಗಣಪತ್ ಗಾಾಯಕ್ವಾಡ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮಹೇಶ್ ಜೊತೆ ಇನ್ನೋರ್ವನಿಗೂ ಗುಂಡು ತಗುಲಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆ ಬಣ ಸೇರಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಆದರೆ ಈ ಗಲಾಟೆ ನಡೆದಿದ್ದು ಜಮೀನಿನ ಸಲುವಾಗಿ. ಇಬ್ಬರು ಸೇರಿ ತಮ್ಮ ಬೆಂಬಲಿಗರೊಂದಿಗೆ ಪೊಲೀಸ್ ಠಾಣೆಗೆ ಬಂದು, ಈ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಜಮೀನಿನಲ್ಲಿ ಗಲಾಟೆ ಇದ್ದು, ಪೊಲೀಸರು ಅದನ್ನು ಸರಿದೂಗಿಸಲು, ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆಸಿದ್ದರು. ಆದರೆ ಪೊಲೀಸ್ ಠಾಣೆಯಲ್ಲಿ ಮಾತಿಗೆ ಮಾತು ಸೇರಿ, ಜಗಳ ಶುರುವಾಗಿ, ಗುಂಡು ಹಾರಿಸುವವರೆಗೂ ಬಂದು ತಲುಪಿದೆ.
‘ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದಿಂದ ನೊಂದು ಡಿ.ಕೆ ಸುರೇಶ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ’
ವಿವಾದದ ಬಳಿಕ ಫೋಟೋ ಶೇರ್ ಮಾಡಿದ ಪವಿತ್ರಾಗೌಡ: ಎಲ್ಲರ ಕಣ್ಣು ಟ್ಯಾಟೂ ಮೇಲೆ