Sunday, September 15, 2024

Latest Posts

ಬಿಜೆಪಿ ಶಾಸಕರ ರೆಸಾರ್ಟ್ ವಾಸ್ತವ್ಯ- ಶಾಸಕ ಅಶೋಕ್ ಹೇಳಿದ್ದೇನು…?

- Advertisement -

ಬೆಂಗಳೂರು: ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡ್ತೀನಿ ಅಂತ ಘೋಷಣೆ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡಿರೋ ತನ್ನ ಶಾಸಕರನ್ನು ರೆಸಾರ್ಟ್ ವಾಸ್ತವ್ಯದಲ್ಲಿಡೋಕೆ ಸಿದ್ಧವಾಗಿದೆ. ಆದ್ರೆ ಆರ್.ಅಶೋಕ್ ಇದಕ್ಕೆ ಸಮಜಾಯಿಶಿ ಕೊಟ್ಟಿದ್ದು ಮಾತ್ರ ಭಿನ್ನವಾಗಿತ್ತು.

ಸದ್ದಿಲ್ಲದೆ ತನ್ನ ಆಟ ಮುಂದುವರಿಸುತ್ತಿರೋ ಬಿಜೆಪಿಗೆ ಇದೀಗ ಆತಂಕ ಶುರುವಾಗಿದೆ. ಬೆಳಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಸಿಎಂ ವಿಶ್ವಾಸಮತ ಯಾಚನೆ ಬಗ್ಗೆ ಖಡಕ್ ಆಗಿ ಘೋಷಣೆ ಮಾಡಿದ ಕೂಡಲೇ ಬಿಜೆಪಿ ನಾಯಕರು ಹುಷಾರಾಗಿದ್ದಾರೆ. ತನ್ನೆಲ್ಲಾ ಶಾಸಕರನ್ನು ಜೋಪಾನ ಮಾಡೋದಕ್ಕೆ ನಿರ್ಧರಿಸಿರೋ ಬಿಜೆಪಿ ಅವರನ್ನು ರೆಸಾರ್ಟ್ ಗೆ ಕರೆದೊಯ್ಯುವ ತಯಾರಿ ನಡೆಸಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕ ಆರ್.ಅಶೋಕ್, ನಮಗೆ ರಿವರ್ಸ್ ಆಪರೇಷನ್ ಭೀತಿ ಏನಿಲ್ಲ. ಆದ್ರೆ ವಿಶ್ವಾಸಮತ ಯಾಚನೆಗೆ ಎಲ್ಲರೂ ಸರಿಯಾದ ಸಮಯಕ್ಕೆ ವಿಧಾನಸೌಧಕ್ಕೆ ಬರಬೇಕು ಅನ್ನೋ ಉದ್ದೇಶದಿಂದ ಎಲ್ಲರೂ ಒಂದೇ ಜಾಗದಲ್ಲಿದ್ದು ಅಲ್ಲಿಂದಲೇ ಹೊರಡಲಿದ್ದೇವೆ ಅಂತ ಹೇಳಿದ್ರು. ಅಲ್ಲದೆ ವಿಶ್ವಾಸಮತ ಯಾಚನೆಯಂದು ಸ್ವಲ್ಪ ತಡವಾದ್ರೂ ತೊಂದರೆಯಾಗುತ್ತೆ. ಅದಕ್ಕೆ ನಾವು ನಮ್ಮ ಶಾಸಕರನ್ನೆಲ್ಲಾ ದೊಡ್ಡಬಳ್ಳಾಪುರ ಬಳಿಯ ರೆಸಾರ್ಟ್ ಗೆ ಕರದೊಯ್ಯುತ್ತಿದ್ದೇವೆ ಅಂತ ಆರ್.ಅಶೋಕ್ ಹೇಳಿದ್ರು.

ಇಲ್ಲಿದೆ ಶಾಸಕರ ಅನರ್ಹತೆ ರಹಸ್ಯ..! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=iK91eE5RUH4

- Advertisement -

Latest Posts

Don't Miss