ವಿಜಯಪುರ: ಸಚಿವ ಡಿ. ಕೆ. ಶಿವಕುಮಾರ ತಮ್ಮ ವಿರುದ್ಧ ದಾಖಲಾಗಿರುವ ಐಟಿ, ಇಡಿ ಪ್ರಕರಣಗಳಿಂದ ನುಣುಚಿಕೊಳ್ಳೋದಕ್ಕೆ ಯತ್ನಿಸುತ್ತಿದ್ದು ಇದಕ್ಕಾಗಿ ಕೇಂದ್ರದಲ್ಲಿ ಲಾಭಿ ನಡೆಸಿದ್ದಾರೆ ಅಂತ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಮೇಲಿರುವ ಐಟಿ ಮತ್ತು ಇಡಿ ಪ್ರಕರಣಗಳನ್ನು ರದ್ದು ಪಡಿಸೋದಕ್ಕೆ ಯತ್ನಿಸುತ್ತಿದ್ದಾರೆ. ಇದಕ್ಕಾಗಿ ಕೇಂದ್ರ ಸಚಿವರು ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಲಾಬಿ ಮಾಡೋಕೆ ಮುಂದಾಗಿದ್ದಾರೆ ಅಂತ ಆರೋಪಿಸಿದ್ರು. ಇದಕ್ಕಾಗಿಯೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸೋದಕ್ಕೆ ವಿರೋಧಿಸುವುದಿಲ್ಲ ಅಂತ ಸಚಿವ ಡಿಕೆಶಿ ಭರವಸೆ ನೀಡಿದ್ದಾರೆ ಅಂತ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ. ಇನ್ನು ತಮ್ಮನ್ನು ಬಿಜೆಪಿಯವರು ಪಕ್ಷಕ್ಕೆ ಆಹ್ವಾನಿಸುತ್ತಿದ್ದಾರೆಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿರೋ ಯತ್ನಾಳ್, ಡಿಕೆಶಿಗೆ ಬಿಜೆಪಿಗೆ ಬರುವಂತೆ ಯಾರೂ ಕರೆದಿಲ್ಲ ಅಂತ ಇದೇ ವೇಳೆ ಹೇಳಿದ್ದಾರೆ.
ದೇವೇಗೌಡರ ಮಾತಿಗೆ ಸಿದ್ದರಾಮಯ್ಯ ಹೇಳಿದ್ದೇನು..?ಮಿಸ್ ಮಾಡದೇ ಈ ವಿಡಿಯೋ ನೋಡಿ