ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮೈತ್ರಿ ನಾಯಕರನ್ನು ಟೀಕಿಸಿದ್ದಾರೆ. ಏನೇ ಮಾಡಿದ್ರೂ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸೋದಕ್ಕೆ ಆಗಲಿಲ್ಲ ಅಂತ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗ ಗ್ರಾಮಾಂತರದಲ್ಲಿ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಆಯನೂರು ಮಂಜುನಾಥ್ ಕಾಂಗ್ರೆಸ್ ನಾಯಕರ ವಿರುದ್ಧ ಟೀಕೆ ಮಾಡಿದ್ರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರರನ್ನು ಸೋಲಿಸೋದಕ್ಕೆ ಮೈತ್ರಿ ಕೂಟದ ನಾಯಕರೆಲ್ಲರೂ ಶಿವಮೊಗ್ಗಕ್ಕೆ ಬಂದಿದ್ರು. ಸಚಿವ ಡಿ.ಕೆ ಶಿವಕುಮಾರ್ ಶಿವಮೊಗ್ಗಕ್ಕೆ ಬಂದು ಟೈರ್ ಟ್ಯೂಬ್ ಗಿರಾಕಿಯಾಗಿಬಿಟ್ರು ಅಂತ ಟೀಕಿಸಿದ್ರು.
ಅಲ್ಲದೆ ನನಗೆ ಮಧು ಬಂಗಾರಪ್ಪ ಸೋಲಿನ ಬಗ್ಗೆ ಮೊದಲೇ ಗೊತ್ತಿತ್ತು. ಮಧು ಬಂಗಾರಪ್ಪ ಒತ್ತಾಯಕ್ಕಾಗಿ ಮೈತ್ರಿ ನಾಯಕರು ಇಲ್ಲಿಗೆ ಬಂದಿದ್ದರು ಅಂತ ಆಯನೂರು ಮಂಜುನಾಥ್ ವ್ಯಂಗ್ಯವಾಡಿದ್ರು.
ಯಡಿಯೂರಪ್ಪ ಕನಸಿಗೆ ಸಿದ್ದು ಸಪೋರ್ಟ್…!! ಮಿಸ್ ಮಾಡದೇ ಈ ವಿಡಿಯೋ ನೋಡಿ.