Saturday, July 27, 2024

Latest Posts

ನೇಹಾ ಮನೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಭೇಟಿ: ಸಿಎಂ, ಗೃಹಸಚಿವರ ಹೇಳಿಕೆಗೆ ಆಕ್ರೋಶ..

- Advertisement -

Political Newsಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ್ ಕೊಲೆ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆಗ್ರಹಿಸಿದ್ದಾರೆ. ಹುಬ್ಬಳ್ಳಿಯಲ್ಲಿರುವ ನೇಹಾ ಹಿರೇಮಠ್ ಮನೆಗೆ ಭೇಟಿ ನೀಡಿದ ಜೆಪಿ ನಡ್ಡಾ, ನೇಹಾ ತಂದೆ ನಿರಂಜನ್ ಹಿರೇಮಠ್ ಹಾಗೂ ತಾಯಿ ಗೀತಾ ಹಿರೇಮಠ್‌ಗೆ ಸಾಂತ್ವನ ಹೇಳಿದರು. ಬಳಿಕ ಮಾತನಾಡಿದ ಅವರು, ಈ ಪ್ರಕರಣ ಅತ್ಯಂತ ಖಂಡನೀಯ. ಮಾನವೀಯ ಮೌಲ್ಯಗಳಿಗೆ ಅಘಾತವಾಗಿದೆ. ಈ ಘಟನೆಯನ್ನು ಖಂಡಿಸುತ್ತೇವೆ ಎಂದರು. ಇಡೀ ದೇಶ ಅವರ ಕುಟುಂಬದ ಜೊತೆಗಿದೆ ಅಂತ ಧೈರ್ಯ ತುಂಬಿದ್ರು.

ಸಿಎಂ, ಗೃಹ ಸಚಿವರ ಹೇಳಿಕೆಗೆ ನಡ್ಡಾ ಆಕ್ರೋಶ

ನೇಹಾ ಹಿರೇಮಠ್ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆಗ್ರಹಿಸಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹಸಚಿವ ಡಾ. ಜಿ. ಪರಮೇಶ್ವರ್ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಎಂ ಮತ್ತು ಗೃಹ ಸಚಿವರು ಅತ್ಯಂತ ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ. ಅವರ ಹೇಳಿಕೆ ಖಂಡನೀಯ ಅಂತ ಹೇಳಿದ್ದಾರೆ.

ಪ್ರಕರಣದ ತನಿಖೆ ಹಾದಿ ತಪ್ಪುತ್ತಿದೆ

ತುಷ್ಟಿಕರಣದ ಪರಮಾವಧಿ ಇದಾಗಿದೆ. ಪ್ರಕರಣದ ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ. ಪ್ರಕರಣಕ್ಕೆ ಮುಸುಕು ಹಾಕುವ ಪ್ರಯತ್ನ ನಡೆದಿದೆ ಅಂತ ನಡ್ಡಾ ಆರೋಪಿಸಿದ್ದಾರೆ. ಕರ್ನಾಟಕದ ಜನತೆ ಇದನ್ನು ಕ್ಷಮಿಸೋಲ್ಲ ಅಂತ ನಡ್ಡಾ ಹೇಳಿದ್ದಾರೆ.

ನೇಹಾ ತಂದೆಗೂ ಪೊಲೀಸರ ಮೇಲೆ ನಂಬಿಕೆ ಇಲ್ಲ

ಪೊಲೀಸರು ಸೂಕ್ತ ತನಿಖೆ ಮಾಡಬೇಕು. ರಾಜ್ಯ ಪೊಲೀಸರು ಅಸಮರ್ಥರಿದ್ದರೆ ಸಿಬಿಐಗೆ ವಹಿಸಿ. ಸಿಬಿಐಗೆ ರೆಫರ್ ಮಾಡಿದರೆ ನಾವು ಸೂಕ್ತ ತನಿಖೆ ಮಾಡಿಸ್ತೇವೆ ಅಂತ ನಡ್ಡಾ ಹೇಳಿದ್ದಾರೆ. ನೇಹಾ ಹಿರೇಮಠ್ ಅವರ ತಂದೆಗೂ ರಾಜ್ಯ ಪೋಲೀಸರ ಮೇಲೆ ನಂಬಿಕೆ ಹೋಗಿದೆ. ಹೀಗಾಗಿ ಕೇಂದ್ರ ತನಿಖಾ ಸಂಸ್ಥೆಗೆ ಒಪ್ಪಿಸಬೇಕು ಅಂತ ನಡ್ಡಾ ಹೇಳಿದ್ರು.

ವಿವಿಧ ಸಮುದಾಯದ ಪ್ರಮುಖರ ಜೊತೆ ಸಭೆ

ಇನ್ನು ಇದಕ್ಕೂ ಮುನ್ನ ಜೆಪಿ ನಡ್ಡಾ ವಿವಿಧ ಸಮುದಾಯಗಳ ಪ್ರಮುಖರ ಸಭೆ ನಡೆಸಿದ್ರು. ಕರ್ನಾಟಕ ಸಂಸ್ಕೃತಿಗಾಗಿ ಹೆಸರುವಾಸಿಯಾಗಿದೆ. ಇದರೊಂದಿಗೆ ತಾಂತ್ರಿಕತೆಗೂ ಹೆಸರು ಪಡೆದಿದೆ. ದೇಶಭಕ್ತಿ ಇಲ್ಲಿನ ಕಣಕಣದಲ್ಲಿಯೂ ಇದೆ. 70ಕ್ಕೂ ಹೆಚ್ಚು ಸಮುದಾಯದವರು ಇಲ್ಲಿಗೆ ಬಂದಿದ್ದೀರಿ. ನೀವೆಲ್ಲ ನಿಮ್ಮ ಅಕ್ಕಪಕ್ಕದವರಿಗೂ ಮತ ಹಾಕುವಂತೆ ಹೇಳಿ. ಇದು ಕೇವಲ ಜೋಶಿ ಚುನಾವಣೆ ಅಲ್ಲ. ಇದು ಮೋದಿಯವರ ವಿಕಸಿತ ಭಾರತ್ ಸಂಕಲ್ಪದ ಚುನಾವಣೆ ಅಂತ ಹೇಳಿದ್ರು.

ಕಾಂಗ್ರೆಸ್ ವಿರುದ್ಧ ನಡ್ಡಾ ಆರೋಪ

ಇನ್ನು ವಿರೋಧ ಪಕ್ಷಗಳ ಕೂಗಾಟ, ಚೀರಾಟ ಹೆಚ್ಚಾಗಿದೆ. ದೇಶವನ್ನು ಹೇಗೆ ಗಟ್ಟಿಗೊಳಿಸಬೇಕು ಅನ್ನೋದನ್ನು ಮೋದಿ ತೋರಿಸಿದ್ದಾರೆ. ಎಲ್ಲ ಬಗೆಯ ಜನರನ್ನು ಗಟ್ಟಿಗೊಳಿಸಬೇಕು, ಆಗಷ್ಟೇ ದೇಶ ಗಟ್ಟಿಯಾಗುತ್ತೆ. ಇದು ಮೋದಿಯವರ ಲೆಕ್ಕಾಚಾರ ಅಂತ ನಡ್ಡಾ ಹೇಳಿದ್ರು. ಕಾಂಗ್ರೆಸ್‌ನವರು ಗರೀಬಿ ಹಠಾವೋ ಅಂದರು. 70 ವರ್ಷಗಳಲ್ಲಿ ಅದು ಸಾಧ್ಯವಾಗಲಿಲ್ಲ ಅಂತ ಆರೋಪಿಸಿದ್ರು.

ರಾಹುಲ್ ಗಾಂಧಿಗೆ ಟಾಂಗ್

ರಾಹುಲ್ ಗಾಂಧಿ ಚಿಟಿಕೆ ಹೊಡೆಯುವುದರಲ್ಲೇ ಬಡತನ ನಿರ್ಮೂಲನೆ ಮಾಡೋದಾಗಿ ಹೇಳುತ್ತಾರೆ. 70 ವರ್ಷದಲ್ಲಿ ಆಗದ್ದು ಚಿಟಿಕೆ ಹೊಡೆಯೋದೊರೊಳಗೆ ಹೇಗೆ ಆಗುತ್ತೆ ಅಂತ ನಡ್ಡಾ ಪ್ರಶ್ನಿಸಿದ್ರು. ರಾಜ್ಯದಲ್ಲಿ 4 ಕೋಟಿ ಜನರು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಅಂತ ನಡ್ಡಾ ಮಾಹಿತಿ ನೀಡಿದ್ರು.

ನಿರಂಜನ ಅವರ ಮಗಳು ಸತ್ತಿಲ್ಲ. ನಮ್ಮ‌ ಸಹೋದರಿ ತೀರಿ ಹೋಗಿದ್ದಾಳೆ: ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ

ಈ ದೇಶಕ್ಕೆ ಹಿಡಿದಿರುವ ಶನಿ ಅಂದರೆ ಅದು ಮೋದಿ: ರಮೇಶ್ ಕುಮಾರ್ ವಿವಾದಾತ್ಮಕ ಹೇಳಿಕೆ..

ಮೋದಿಯವರು ಪ್ರಧಾನಿಯಾಗಿರಲು ನಾಲಾಯಕ್: ಪಿಎಂ ವಿರುದ್ಧ ನಾಲಿಗೆ ಹರಿಬಿಟ್ಟ ಸಿಎಂ ಸಿದ್ದರಾಮಯ್ಯ

- Advertisement -

Latest Posts

Don't Miss