Special Interview: ಕಾಂಗ್ರೆಸ್ ಯುವನಾಯಕ ನಲಪಾಡ್ ಹ್ಯಾರಿಸ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಸಿಎಂ ಡಿ.ಕೆ.ಶಿವಕುಮಾರ್ ಅವರ ಕಾರ್ಯವೈಖರಿಯ ಬಗ್ಗೆ ಹೇಳಿಕೆ ನೀಡಿದ್ದಾರೆ.
ಸಿಎಂ ಆಗೋಕ್ಕಿಂತ ಮುಂಚೆಗೂ, ಸಿಎಂ ಆದ್ಮೇಲೆೆ ಡಿ.ಕೆ.ಶಿವಕುಮಾರ್ ಅವರ ವೈಖರಿ ಚೇಂಜ್ ಆಗಿದ್ದು, ಸಿಎಂ ಆದ ಬಳಿಕ ಬೇರೆ ಪಕ್ಷದವರನ್ನು ಡಿಕೆಶಿ ಅಣ್ಣ ಎಂದು ಗೌರವಯುತವಾಗಿ ಮಾತನಾಡಿಸುತ್ತಿದ್ದಾರೆ. ಆಗ ಸಿಎಂ ಆಗ್ಬೇಕು ಅನ್ನೋ ಟೆನ್ಶನ್ ಇತ್ತು. ಈಗ ಹೆಸರು ಉಳಿಸಿಕ“ಳ್ಳುವ ಕೆಲಸ ಅಷ್ಟೇನಾ ಎಂಬ ಪ್ರಶ್ನೆಗೆ ನಲಪಾಡ್ ಉತ್ತರಿಸಿದ್ದಾರೆ.
ಡಿಕೆಶಿಯವರಿಗೆ ತಮ್ಮ ಪೋಸಿಷನ್ ಬಗ್ಗೆ ಟೆನ್ಶನ್ ಇತ್ತು. ಇದೀಗ ಅವರು ಸಿಎಂ ಆಗಿದ್ದಾರೆ. ಅವರಿಗೆ ಬರೀ ಜನರಿಗಾಗಿ ಏನು ಮಾಡಬೇಕು ಎಂಬ ಯೋಚನೆ ಮಾತ್ರ ಇದೆ. ಅವ್ರಿಗೆ ಇನ್ನೇನು ಆಗ್ಬೇಕಾಗಿಲ್ಲ. ಅವರಿಗೆ ಬೇಕಾದ ಪೋಸಿಷನ್ ಸಿಕ್ಕಿದೆ. ಇದೀಗ ಅಭಿವೃದ್ಧಿ ಪರ ಕಾರ್ಯದ ಬಗ್ಗೆ ಮಾತ್ರ ಯೋಚಿಸುತ್ತಿದ್ದಾರೆಂದು ನಲಪಾಡ್ ಹೇಳಿದ್ದಾರೆ.
ಇನ್ನು ಡಿಕೆಶಿ ಆಸ್ತಿ ಬಗ್ಗೆ ಮಾತನಾಡಿರುವ ನಲಪಾಡ್, ಅವರು ಅವರ ಮಕ್ಕಳಿಗೆ ಬೇಕಾದಷ್ಟು ಮಾಡಿಟ್ಟಿದ್ದಾರೆ. ಮೂರು ತಲೆಮಾರು ಕೂತು ತಿನ್ನುವಷ್ಟು ಆಸ್ತಿ ಇದೆ. ಈಗ ಬರೀ ಜನಸೇವೆ ಮಾಡುವುದೇ ಸಿಎಂ ಡಿ..ಕೆಶಿವಕುಮಾರ್ ಗುರಿ ಎಂದು ನಲಪಾಡ್ ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




