HDK CM ಆಗೋಕೆ ಡಿಕೆ ಶಿವಕುಮಾರ್ ಕಾರಣ: Mohammed Haris Nalapad Exclusive Interview

Special Interview: ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಮಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗೋದಕ್ಕೆ ಈಗಿನ ಸಿಎಂ ಡಿ.ಕೆ.ಶಿವಕುಮಾರ್ ಅವರೇ ಕಾರಣ ಎಂದಿದ್ದಾರೆ.

ಈ ಬಗ್ಗೆ ಮಾತು ಮುಂದುವರಿಸಿರುವ ನಲಪಾಡ್, ಡಿ.ಕೆ.ಶಿವಕುಮಾರ್ ಮತ್ತು ಕುಮಾರಸ್ವಾಮಿಯವರನ್ನು ಅಂದು ಜನ ಜೋಡೆತ್ತು ಎಂದು ಕರೆದಿದ್ದರು. ಮೈತ್ರಿ ಸರ್ಕಾರವನ್ನು ಜೋಡೆತ್ತುಗಳು ನಡೆಸುತ್ತಿದ್ದಾರೆಂದೇ ಜನ ಮಾತನಾಡುತ್ತಿದ್ದರು. ಹಾಗೆ ಕುಮಾರಸ್ವಾಮಿ ಸಿಎಂ ಆಗಲು ಬೆಂಬಲಿಸಿದವರೇ ಡಿಕೆಶಿ. ಅವರ ಬೆಂಬಲವಿಲ್ಲದಿದ್ದರೆ ಹೆಚ್ಡಿಕೆ ಸಿಎಂ ಆಗುತ್ತಿರಲಿಲ್ಲ ಎಂದು ನಲಪಾಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಮಾರಸ್ವಾಮಿ ವಿರುದ್ಧವಿದ್ದ ಕೋಪವನ್ನು ಬಿಟ್ಟು ಡಿಕೆಶಿಯವರು ಕುಮಾರಸ್ವಾಮಿ ಬೆಂಬಲಕ್ಕೆ ನಿಂತು ಆಡಳಿತ ನಡೆಸಲು ಅನುಕೂಲ ಮಾಡಿದ್ದರು. ಡಿಕೆಶಿ ಇಲ್ಲದಿದ್ದರೆ ಕುಮಾರಸ್ವಾಮಿ ಅಷ್ಟು ತಿಂಗಳು ಕೂಡ ಆಡಳಿತ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೇ ಮಂಡ್ಯ ಎಲೆಕ್ಷನ್ ವೇಳೆ ಡಿಕೆಶಿ ಸುಮಲತಾಗೆ ಟಿಕೇಟ್ ನೀಡದೇ, ನಿಖಿಲ್ ಕುಮಾರ್‌ಗೆ ಟಿಕೇಟ್ ಸಿಗುವಂತೆ ಮಾಡಿ, ಬೆಂಬಲಕ್ಕೆ ನಿಂತಿದ್ದರು.

ಇಂದಿಗೂ ಸುಮಲತಾ ಅವರಿಗೆ ಡಿಕೆಶಿ ಅವರ ಬಗ್ಗೆ ಬೇಸರವಿದೆ. ಆದರೆ ನಿಖಿಲ್ ಈಗ ಡಿಕೆಶಿ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ನಲಪಾಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author