Political News: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸತ್ ಚಲೋ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಮತ್ತು ಕಾಕ್ರೋಚ್ ಪಕ್ಷದ ಬೆಂಬಲಿಗರ ಮೇಲೆ ಪೋಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ, ಗೃಹಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರ ಮನೆಯ ಮಕ್ಕಳು ಬಿಜೆಪಿಯ ಅನೈತಿಕತೆಯನ್ನು ಪ್ರಶ್ನಿಸತೊಡಗಿದ್ದಾರೆ. ಅಮಾನವೀಯ, ಅನಾಗರಿಕ ಮತ್ತು ಅನೈತಿಕ ಧೋರಣೆಯ ಕೇಂದ್ರ ಸರ್ಕಾರದಿಂದಾಗಿ ಬಿಜೆಪಿಯವರ ಮಕ್ಕಳು ಸಮಾಜಕ್ಕೆ ಮುಖ ತೋರಿಸಲು ಹಿಂದೇಟು ಹಾಕುತ್ತಿದ್ದಾರೆ. BJP ನಾಯಕರೇ, ನಿಮ್ಮ ಮಕ್ಕಳನ್ನು ಮಾತಾಡಿಸಿ ನೋಡಿ, ಅವರೂ ನಿಮ್ಮ ಪಕ್ಷದ ಹೆಸರು ಹೇಳಿದರೆ ಅಸಯ್ಯಪಡುತ್ತಾರೆ! ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಹೆಣ್ಣುಮಗಳು ಯುವಜನರ ನೈತಿಕ ಪ್ರಜ್ಞೆಯ ಪ್ರತಿನಿಧಿಯಾಗಿ ಮಾತನಾಡಿದ್ದಾಳೆ, ಯುವಜನರು ಭವಿಷ್ಯದ ಹಿತದ ಬಗ್ಗೆ ಮಾತ್ರ ಮುನ್ನೋಟ ಹೊಂದಿದ್ದಾರೆಯೇ ಹೊರತು ನಿಮ್ಮ ಕಲುಷಿತ ಸಿದ್ದಾಂತ, ನಿಮ್ಮ ಕೊಳಕು ರಾಜಕೀಯ, ನಿಮ್ಮ ಧರ್ಮಾಂಧತೆ, ನಿಮ್ಮ ಪ್ರೊಪೆಗಂಡಾ, ನಿಮ್ಮ ಸುಳ್ಳುಗಳ ಭರವಸೆ, ನಿಮ್ಮ ನಕಲಿ ಇಮೇಜ್, ಇದ್ಯಾವುದೂ ಯುವಜನರಿಗೆ ಬೇಕಿಲ್ಲ.
ಭಾರತದ ಯುವ ಶಕ್ತಿ ಇಂದು ಬೀದಿಯಲ್ಲಿದ್ದಾರೆ, ತಮ್ಮ ಭವಿಷ್ಯಕ್ಕಾಗಿ, ಭಾರತದ ಹಿತಕ್ಕಾಗಿ, ಅವರನ್ನು ಲಾಠಿಗಳಿಂದ ಹತ್ತಿಕ್ಕುತ್ತೇವೆ ಎಂಬ ಭ್ರಮೆಯಲ್ಲಿರುವ 56 ಇಂಚು ಎದೆಯ ನಕಲಿ ವಿಶ್ವಗುರುವಿನ ಭ್ರಮೆ ಕಳಚುವ ದಿನಗಳು ದೂರವಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಗರೇ, ನಿರ್ಲಜ್ಜತನವನ್ನು ಬಿಡದಿದ್ದರೆ ಹೋರಾಟಗಾರರು ನಿಮ್ಮ ಮನೆಯಲ್ಲೇ ಹುಟ್ಟಿಕೊಳ್ಳುತ್ತಾರೆ, ಎಚ್ಚರ..
ಬಿಜೆಪಿ ನಾಯಕರ ಮನೆಯ ಮಕ್ಕಳು ಬಿಜೆಪಿಯ ಅನೈತಿಕತೆಯನ್ನು ಪ್ರಶ್ನಿಸತೊಡಗಿದ್ದಾರೆ.
ಅಮಾನವೀಯ, ಅನಾಗರಿಕ ಮತ್ತು ಅನೈತಿಕ ಧೋರಣೆಯ ಕೇಂದ್ರ ಸರ್ಕಾರದಿಂದಾಗಿ ಬಿಜೆಪಿಯವರ ಮಕ್ಕಳು ಸಮಾಜಕ್ಕೆ ಮುಖ ತೋರಿಸಲು ಹಿಂದೇಟು ಹಾಕುತ್ತಿದ್ದಾರೆ.… pic.twitter.com/wb4l2i5AY2— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) July 20, 2026




