ಲೋಕಸಭಾ ಚುನಾವಣೆ ಸಲುವಾಗಿ ಬಿಜೆಪಿ ರಾಮಮಂದಿರ ಗಿಮಿಕ್: ಮಮತಾ ಬ್ಯಾನರ್ಜಿ

National Political News: ಮುಂದೆ ಲೋಕಸಭೆ ಚುನಾವಣೆ ಬರುತ್ತದೆ. ಚುನಾವಣೆಯಲ್ಲಿ ಗೆಲುವು ಸಾಧಿಸಲು, ಪ್ರದಾನಿ ಮೋದಿ, ರಾಮಮಂದಿರ ಗಿಮಿಕ್ ನಡೆಸಲು ಹೊರಟಿದ್ದಾರೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಬಿಜೆಪಿ ಇತರ ಸಮುದಾಯವನ್ನು ಒಡೆಯುವ ಮತ್ತು ಕಡೆಗಣಿಸುವ ಕಾರ್ಯ ಮಾಡಬಾರದು. ನಾನು ಅಲ್ಲಾಾಹನ ಮೇಲೆ ಪ್ರತಿಜ್ಞೆ ಮಾಡಿ ಹೇಳುತ್ತೇನೆ, ನಾನು ಇದುವರೆಗೂ ಹಿಂದೂ-ಮುಸ್ಲಿಂ ಹೆಸರಿನಲ್ಲಿ ಕಿತ್ತಾಡುವುದನ್ನು ಅನುಮತಿಸುವುದಿಲ್ಲ. ನಾವು ಬಿಜೆಪಿಗೆ ಶರಣಾಗುವುದಿಲ್ಲವೆಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದ್ದು, ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಪ್ರಧಾನಿ ಮೋದಿ ಸೇರಿ ಹಲವು ಬಿಜೆಪಿ ನಾಯಕರು, ರಾಜಕೀಯ, ಸಿನಿಮಾ ಗಣ್ಯರು ಸೇರಿ ಹಲವರು ಭಾಗಿಯಾಗಲಿದ್ದಾರೆ. ಈ ದಿನ ರಾಮಲಲ್ಲಾನ ಪ್ರಾಣಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ.

ಲಕ್ಷದ್ವೀಪದ ಅಭಿವೃದ್ಧಿಗೆ ಭಾರತಕ್ಕೆ ನಾವು ಸಾಥ್ ಕೊಡುತ್ತೇವೆ ಎಂದ ಇಸ್ರೇಲ್

ರಾಮಮಂದಿರಕ್ಕೆ 1 ಲಕ್ಷ ರೂಪಾಯಿ ದೇಣಿಗೆ ನೀಡಿದ ನಟಿ ಪ್ರಣಿತಾ..

ರಾಮಮಂದಿರ ಉದ್ಘಾಟನೆ ದಿನ ಉತ್ತರಪ್ರದೇಶದಲ್ಲಿ ಶಾಲಾ ಕಾಲೇಜುಗಳಿಗೆ ರಜೆ

About The Author