Friday, August 8, 2025

Latest Posts

ಶ್ರೀರಂಗಪಟ್ಟಣದಲ್ಲಿ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ಸಂಕಲ್ಪ ಸಭೆ..

- Advertisement -

ಮಂಡ್ಯ: ಶ್ರೀರಂಗಪಟ್ಟಣದ ನಿಮಿಷಾಂಬಾ ದೇಗುಲಕ್ಕೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭೇಟಿ ನೀಡಿದ್ದರು. ಬಿಜೆಪಿ ಕಾರ್ಯಕರ್ತರ ಜೊತೆ ಆಗಮಿಸಿ ಕಟೀಲ್ ವಿಶೇಷ ಪೂಜೆ ಮಾಡಿದ್ದು, ನಳೀನ್‌ರಿಗೆ ದೇವಸ್ಥಾನದ ಸಿಬ್ಬಂದಿ ಆದರದ ಸ್ವಾಗತ ನೀಡಿದ್ದಾರೆ. ಅಲ್ಲದೇ ಶಾಲು ಹೊದಿಸಿ, ಪ್ರಧಾನ ಅರ್ಚಕರು ಆಶೀರ್ವಾದವನ್ನೂ ಮಾಡಿದರು.

ಕ್ರೇನ್ ವಾಹನ ಹರಿದು ವಿದ್ಯಾರ್ಥಿನಿ ದಾರುಣ ಸಾವು…

ಇದಾದ ಬಳಿಕ ಶ್ರೀರಂಗಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಬಿಜೆಪಿ ಸಂಕಲ್ಪ ಸಭೆ ನಡೆಸಲಾಯಿತು. ಈ ವೇಳೆ ಕಟೀಲ್‌ಗೆ ಸಚಿವ ಕೆ.ಗೋಪಾಲಯ್ಯ ಸಾಥ್ ನೀಡಿದ್ದು, ಅದ್ಧೂರಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಡೊಳ್ಳು ಕುಣಿತ, ವೀರಗಾಸೆ, ಕಲಾತಂಡದ ಮೂಲಕ ಸ್ವಾಗತ ನೀಡಲಾಯಿತು.

ನದಿಯ ಮೇಲೆ ಆಣೆ ಮಾಡಲು ಹೋಗಿ ಕಾಲು ಜಾರಿ ಬಿದ್ದು ಇಬ್ಬರ ದುರ್ಮರಣ..

ಇದಾದ ಬಳಿಕ ಕಟೀಲ್ ದೀಪ ಬೆಳಗುವುದರ ಮೂಲಕ, ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆಯನ್ನು ಉದ್ಘಾಟನೆ ಮಾಡಿದರು. ಸಕ್ಕರೆ ನಾಡಲ್ಲಿ ಬಿಜೆಪಿ ಸಧೃಡಗೊಳಿಸಲು ಸಭೆಯಲ್ಲಿ ಮಾಸ್ಟರ್ ಪ್ಲಾನ್ ಮಾಡಲಾಗಿದ್ದು, ಬೂತ್ ಮಟ್ಟದ ಅಧ್ಯಕ್ಷರು‌ ಹಾಗೂ ಕಾರ್ಯಕರ್ತರೊಂದಿಗೆ, ಬಿಜೆಪಿ ಬಲ ವರ್ಧನೆ ಕುರಿತು ಚರ್ಚೆ ನಡೆಸಲಾಯಿತು. ಸಂಕಲ್ಪ ಸಭೆಯಲ್ಲಿ ಸಚಿವ ಕೆ.ಗೋಪಾಲಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಸಿಪಿ ಉಮೇಶ್, ಜಗ್ಗದೀಶ್ ಹಿರೇಮನಿ, ಮುನಿರಾಜ್,ಬಿಜೆಪಿ ಮುಖಂಡ ಡಾ.ಇಂದ್ರೇಶ್ ಸೇರಿ ಹಲವರು ಭಾಗಿಯಾಗಿದ್ದರು.

- Advertisement -

Latest Posts

Don't Miss