Tuesday, August 5, 2025

Latest Posts

ಬಿಜೆಪಿ ಗ್ರಾಮೀಣ ಅಧ್ಯಕ್ಷರ ರೇಸ್‌ನಲ್ಲಿ ಮೂಲ ಬಿಜೆಪಿ ನಾಯಕರಿಗೆ ಹಿನ್ನೆಡೆ: ವಲಸೆ ಬಂದವರಿಗೆ ಸಿಗುತ್ತಾ ಸ್ಥಾನ?

- Advertisement -

Hubballi News: ಹುಬ್ಬಳ್ಳಿ : ಧಾರವಾಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಓರ್ವ ನಾಯಕನ ಹೆಸರು ಅಂತಿಮವಾಗಿದೆ ಎನ್ನುವ ಮಾಹಿತಿ ಕೇಳಿ ಬರುತ್ತಿದೆ. ಅಧಿಕೃತ ಮುದ್ರೆ ಒತ್ತುವುದು ಬಾಕಿ ಇದೆ ಎಂದು ಆಪ್ತ ವಲಯದಲ್ಲಿನ ಮಾತುಗಳು.ಅಂದುಕೊಂಡಂತೆ ಪ್ರಲ್ಲಾದ ಜೋಶಿ ನಿರ್ಣಯವೇ ಜಿಲ್ಲೆಯಲ್ಲಿ ಫೈನಲ್ ಆಗಿದ್ದು ನಗರ ಹಾಗೂ ಜಿಲ್ಲಾ ವಿಭಾಗಕ್ಕೆ ಇಬ್ಬರನ್ನೂ ಜೋಶಿ ಅವರೇ ಫೈನಲ್‌ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಆದರೆ ಬಿಜೆಪಿಯಲ್ಲಿ ಕೆಲವು ತತ್ವ ಸಿದ್ಧಾಂತಗಳು ಪಕ್ಷಕ್ಕಾಗಿ ದುಡಿದವರನ್ನ ಹಾಗೂ ಸಂಘದ ಹಿನ್ನೆಲೆಯುಳ್ಳ ವ್ಯಕ್ತಿಗಳಿಗೆ ಮನ್ನಣೆ ಹಾಗೂ 30 ವರ್ಷ ಸಂಘಟನೆ ಮಾಡಿಕೊಂಡು ಪಕ್ಷಕ್ಕಾಗಿ ದುಡಿದವರು ಸಾಕಷ್ಟು ಜನ ಇದ್ದಾರೆ. ಮೂಲ ಬಿಜೆಪಿ ನಾಯಕರಿಗೆ ಅಧ್ಯಕ್ಷ ಸ್ಥಾನ ಸಿಕ್ಕರೆ ಒಳ್ಳೆಯದು ಎನ್ನುತ್ತಿದ್ದಾರೆ ಮೂಲ ಬಿಜೆಪಿಗರು.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್ ವಂಚಿತರಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ್ ನೇತೃತ್ವದಲ್ಲಿ ಬಿಜೆಪಿ ಪಕ್ಷ ಸೇರಿರುವ ಮಾಜಿ MLC ನಾಗರಾಜ್ ಛಬ್ಬಿ ಸಂತೋಷ್ ಲಾಡ್ ವಿರುದ್ಧ ಸೋತಿದ್ದರು. ನಂತರ ಪಕ್ಷ ಸಂಘಟನೆಗೆ ಜೋಶಿ ಜೊತೆಗೆ ಸಾಥ್ ನೀಡುತ್ತಾ ಬಂದಿದ್ದಾರೆ.ಇದೆ ಹಿನ್ನಲೆಯಲ್ಲಿ ಇದೀಗ ನಾಗರಾಜ್ ಛಬ್ಬಿ ಅವರನ್ನು ಗ್ರಾಮೀಣ ಅಧ್ಯಕ್ಷರನ್ನಾಗಿ ಮಾಡುವತ್ತ ಪ್ರಲ್ಲಾದ ಜೋಶಿ ಒಲವು ತೋರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.ಅಂತಿಮವಾಗಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ನೀವು ಹೆಚ್ಚು ಮಕ್ಕಳು ಮಾಡಿ, ಮೋದಿ ಮನೆ ಕಟ್ಟಿಸಿಕೊಡ್ತಾರೆ: ಬಿಜೆಪಿ ಸಚಿವರ ವಿವಾದಾತ್ಮಕ ಹೇಳಿಕೆ

ಈ ಶಾಲೆಯಲ್ಲಿ ಹಾಜರಿ ಹಾಕುವಾಗ ಎಸ್‌ ಮಿಸ್ ಅಲ್ಲಾ, ಜೈಶ್ರೀರಾಮ್ ಹೇಳಬೇಕು..

ಮಾಲ್ಡೀವ್ಸ್‌ನಲ್ಲಿ ಇನ್ನು ಮುಂದೆ ಶೂಟಿಂಗ್ ಮಾಡುವುದಿಲ್ಲ: ಮೋದಿಗೆ ಚಿತ್ರರಂಗ ಸಾಥ್..

- Advertisement -

Latest Posts

Don't Miss