ಹುಬ್ಬಳ್ಳಿಯ ಬಣ ರಾಜಕೀಯ ಶಮನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಂಟ್ರಿ

Hubballi News: ಹುಬ್ಬಳ್ಳಿ: ಹುಬ್ಬಳ್ಳಿಯ ಬಣ ರಾಜಕೀಯ ಶಮನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಎಂಟ್ರಿ ಕೊಡುತ್ತಿದ್ದಾರೆ.  ಹೀಗಾಗಿ ನಾಳೆ ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ.

ಮೊನ್ನೆಯಷ್ಟೇ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಿಜೆಪಿಗೆ ವಾಪಸ್ ಬಂದಿದ್ದು, ಇದಾದ ಬಳಿಕ ಹುಬ್ಬಳ್ಳಿಯ ಬಿಜೆಪಿಯಲ್ಲಿ ಎರಡು ಬಣ ವಿಂಗಡಣೆಯಾಗಿದೆ. ಶಾಸಕರುಗಳಾದ ಅರವಿಂದ್ ಬೆಲ್ಲದ, ಮಹೇಶ್ ಟೆಂಗಿನಕಾಯಿ, ಎಂಆರ್ ಪಾಟೀಲ್ ಒಂದು ಕಡೆಯಾದ್ರೆ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಸಚಿವ ಶಂಕರ್ ಪಾಟೀಲ್ ಮುನೆನಕೊಪ್ಪ, ಎಸ್ ಐ ಚಿಕ್ಕನಗೌಡರ, ಕಳಕಪ್ಪ ಬಂಡಿ ಮತ್ತೊಂದು ಬಣದವರಾಗಿದ್ದಾರೆ.

ಇನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಎಂಎಲ್‌ಸಿ ಪ್ರದೀಪ್ ಶೆಟ್ಟರ್ ಈ ಎರಡೂ ಬಣಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಇನ್ನು ಲೋಕಸಭಾ ಚುನಾವಣೆ ಕೂಡ ಸಮೀಪಿಸುತ್ತಿದ್ದು, ಈ ಬಣ ರಾಜಕೀಯದಿಂದ ಬಿಜೆಪಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಉತ್ತರಕರ್ನಾಟಕ ಭಾಗದಲ್ಲಿ ಈ ಬಣ ರಾಜಕೀಯ, ಪ್ರಭಾವ ಬೀರುವ ಲಕ್ಷಣಗಳಿದೆ.

ಹಾಗಾಗಿ ಬಣ ರಾಜಕೀಯ ಶಮನಕ್ಕೆ ವಿಜಯೇಂದ್ರ ಚಿಂತನೆ ನಡೆಸಿದ್ದು, ನಾಳೆ ನಡೆಯಲಿರುವ ಶಿರಹಟ್ಟಿ ಫಕಿರೇಶ್ವರ ತುಲಾಭಾರ ಕಾರ್ಯಕ್ರಮಕ್ಕಾಗಿ ಅವರು ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಈ ನೆಪದಲ್ಲಿ ಕಾಾರ್ಯಕ್ರಮಮ ಮುಗಿದ ಬಳಿಕ, ಎಲ್ಲಾ ಮುಖಂಡರೊಂದಿಗೆ ವಿಜಯೇಂದ್ರ ಮಹತ್ವದ ಸಭೆ ನಡೆಸಲಿದ್ದಾರೆ.

ಆಸ್ಟ್ರೇಲಿಯಾಕ್ಕೆ ಕೊಕೇನ್‌ ರಫ್ತು ಮಾಡುತ್ತಿದ್ದ ಭಾರತೀಯ ದಂಪತಿಯ ಬಂಧನ

ಸಾವರ್ಕರ್‌ ಪತ್ನಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ನಟಿ, ಬಿಗ್‌ಬಾಸ್ ಚೆಲುವೆ ಅಂಕಿತಾ ಲೋಖಂಡೆ

ಅಭಿಮಾನಿಯ ನಡೆಗೆ ಸಿಟ್ಟಾಗಿ, ಮೈಕ್ ಬಿಸಾಡಿದ ಪಾಕಿಸ್ತಾನಿ ಸಿಂಗರ್

About The Author