National Political News: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ, ಬಿಜೆಪಿ, ಟಿಡಿಪಿ, ಜೆಎಸ್ಪಿ ಮೈತ್ರಿಯಾಗಿ ಸ್ಪರ್ಧೆ ಮಾಡಲಿದೆ ಎಂದು, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷ ಮತ್ತು ಜನಸೇನಾ ಪಕ್ಷ ಬಿಜೆಪಿಯೊಂದಿಗೆ ಈ ಬಾರಿ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು, ಚುನಾವಣೆಯನ್ನು ಎದುರಿಸಲಿದೆ. ಈ ಹಿಂದೆ ಟಿಡಿಪಿ ಮತ್ತು ಬಿಜೆಪಿ ಹಲವು ಬಾರಿ ಮೈತ್ರಿ ಮಾಡಿಕೊಂಡು, ಚುನಾವಣೆಯನ್ನು ಎದುರಿಸಿದೆ. ಈ ಬಾರಿಯೂ ಚಂದ್ರಬಾಬು ನಾಯ್ಡು ನೇತೃತ್ವದ ಪಕ್ಷ, ಬಿಜೆಪಿ ಜೊತೆ ಮೈತ್ರಿ ಮುಂದುವರಿಸಲಿದೆ.
ಇನ್ನು ಜನಸೇನಾ ಪಕ್ಷ ಕೂಡೠ ಬಿಜೆಪಿ ಜೊತೆ ಸೇರಿ, ಚುನಾವಣೆ ಎದುರಿಸಲಿದ್ದಾರೆ. ದೇಶದ ಅಭಿವೃದ್ಧಿಗಾಗಿ ಮತ್ತು ಆಂಧ್ರಪ್ರದೇಶದ ಅಭಿವೃದ್ಧಿಗಾಗಿ, ಟಿಡಿಪಿ ಮತ್ತು ಜನಸೇನಾ ಪಕ್ಷ ಬಿಜೆಪಿಯೊಂದಿಗೆ ಚುನಾವಣಾ ಕಣಕ್ಕಿಳಿಯಲಿದೆ. ಈ ಮೂಲಕ ಆಂಧ್ರಪ್ರದೇಶದ ಉನ್ನತಿ ಮತ್ತು ದೇಶದ ಪ್ರಗತಿಗಾಗಿ ನಮ್ಮ ಪಕ್ಷಗಳು ಬದ್ಧವಾಗಿದೆ ಎಂದು ನಡ್ಡಾ ತಿಳಿಸಿದ್ದಾರೆ.
ಬೆಂಗಳೂರಿನ ಈ ಸ್ಥಳದಲ್ಲಿ ಪಾರ್ಕಿಂಗ್ ಮಾಡಬೇಕು ಅಂದ್ರೆ, ಕೊಡಬೇಕಂತೆ 1 ಸಾವಿರ ರೂಪಾಯಿ..
ಟಿಕೆಟ್ ದೊರೆತರೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತೇನೆ: ಮೋಹನ್ ಲಿಂಬಿಕಾಯಿ