ಬಿಜೆಪಿ ವಿರುದ್ಧ ಕಾಂಗ್ರೆಸ್, ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟ್ ಮಾಡುವುದು, ಆರೋಪ ಪ್ರತ್ಯಾರೋಪ ಮಾಡೋದು ಕಾಮನ್. ಅದೇ ರೀತಿ, ಸಿದ್ದರಮಾಯ್ಯನವರ ಒಂದು ಹೇಳಿಕೆ ವಿರುದ್ಧ ಬಿಜೆಪಿ ಟ್ವೀಟ್ ಮಾಡಿದೆ.
ಮಾಧ್ಯಮದವರು, ಬಿಜೆಪಿಗರ ಲಿಂಗಾಯತ ಅಸ್ತ್ರದ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದ್ದಕ್ಕೆ, ಉತ್ತರಿಸಿದ ಸಿದ್ದರಾಮಯ್ಯ, ಈಗ ಸಿಎಂ ಆಗಿರುವುದು ಕೂಡ ಲಿಂಗಾಯತರೇ ಅಲ್ವಾ, ಅವರು ಭ್ರಷ್ಟಾಚಾರ ಮಾಡಿ, ಇಡೀ ರಾಜ್ಯವನ್ನೇ ಹಾಳು ಮಾಡಿದ್ದಾರೆ ಎಂದು ಹೇಳಿದರು. ಇದಕ್ಕೆ ವಿರುದ್ಧವಾಗಿ ಬಿಜೆಪಿ ಟ್ವೀಟ್ ಮಾಡಿದೆ.
ಈ ಹಿಂದೆ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಯತ್ನಿಸಿ ಸಿದ್ದರಾಮಯ್ಯ, ಈಗ ಆ ಸಮುದಾಯದವರೆಲ್ಲ ಭ್ರಷ್ಟರು, ರಾಜ್ಯವನ್ನು ಹಾಳುಗೆಡವುವವರು ಎಂಬ ಸಂವೇದನಾರಹಿತ ದ್ವೇಷಪೂರಿತ ಹೇಳಿಕೆ ನೀಡಿರುವುದು ಅಕ್ಷಮ್ಯ. ಜಗದ್ಗುರು ಬಸವಣ್ಣನ ಆದರ್ಶ ಪಾಲಿಸುವ 7 ಕೋಟಿ ಕನ್ನಡಿಗರು, ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಈ ಹಿಂದೆ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಯತ್ನಿಸಿದ @siddaramaiah, ಈಗ ಆ ಸಮುದಾಯದವರೆಲ್ಲ ಭ್ರಷ್ಟರು, ರಾಜ್ಯವನ್ನು ಹಾಳುಗೆಡವುವವರು ಎಂಬ ಸಂವೇದನಾರಹಿತ ದ್ವೇಷಪೂರಿತ ಹೇಳಿಕೆ ನೀಡಿರುವುದು ಅಕ್ಷಮ್ಯ.
ಜಗದ್ಗುರು ಬಸವಣ್ಣನ ಆದರ್ಶ ಪಾಲಿಸುವ 7 ಕೋಟಿ ಕನ್ನಡಿಗರು, ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ.#LingayatVirodhiCongress pic.twitter.com/ScgSlymvKd
— BJP Karnataka (@BJP4Karnataka) April 22, 2023
ಭಾರೀ ಮಳೆಯಿಂದಾಗಿ ಅಮಿತ್ ಶಾ ಕಾರ್ಯಕ್ರಮ ರದ್ದು, ಇನ್ನೊಮ್ಮೆ ಬರುತ್ತೇನೆಂದ ಚಾಣಕ್ಯ
‘ಬಿಜೆಪಿ ಏಜೆಂಟರಂತೆ ವರ್ತಿಸುತ್ತಿರುವ ಬಿಇಓ ಬಲರಾಮ್‌ರನ್ನ ವರ್ಗಾವಣೆ ಮಾಡಿ’
‘ನನ್ನ ಶಾಲೆಯ ಅಡ್ಮಿಷನ್‌ಗಾಗಿ ಸಿಎಂ ಕಡೆಯಿಂದ ಹೇಳಿಸಿದರೂ ನನಗೆ ಸೀಟ್ ಸಿಗಲಿಲ್ಲ’