Sunday, December 22, 2024

Latest Posts

‘ವಿಮಾನ ನಿಲ್ದಾಣಕ್ಕೆ ಕ್ರೂರಿಗಳು, ಕೊಲೆ ಕಡುಕರ ಹೆಸರಿಟ್ಟರೆ ಬಿಜೆಪಿ ಉಗ್ರ ಹೋರಾಟ ಮಾಡಲಿದೆ’

- Advertisement -

Kolar News: ಕೋಲಾರ: ಕೋಲಾರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಮುನಿಸ್ವಾಮಿ, ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿಪ್ಪು ಸುಲ್ತಾನ್ ಭಾರತ ದೇಶದ ಒಬ್ಬ ಖಳ ನಾಯಕ. ಹಿಂದೂಸ್ತಾನ್ ಹೆಸರಿರುವ ಭಾರತಕ್ಕೆ ಮತಾಂತರ ಮಾಡಿ ಸಾವಿರಾರು ಜನರನ್ನ ಬಲಿ‌ ಪಡೆದವನು‌. ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಲು ನಮ್ಮ ವಿರೋಧವಿದೆ. ಕ್ರೂರಿಗಳು, ಕೊಲೆ ಕಡುಕರ ಹೆಸರಿಟ್ಟರೆ ಬಿಜೆಪಿ ಉಗ್ರ ಹೋರಾಟ ಮಾಡಲಿದೆ.

ಸಂಸದ ಪ್ರತಾಪ್ ಸಿಂಹ ವಿರುದ್ದ ಕಾಂಗ್ರೆಸ್ ಕ್ರಮಕ್ಕೆ ಒತ್ತಾಯ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಮುನಿಸ್ವಾಮಿ, ಏನೂ ಸಿದ್ದರಾಮಯ್ತ ಪಿಎಂಮ್ಮಾ..? ಇಲ್ಲಾ ತನಿಖಾಧಿಕಾರಿಯ..? ಅವರಲ್ಲಿರುವ ಅನೇಕರು ಚೈನಾಗೆ , ಪಾಕಿಸ್ತಾನಕ್ಕೆ ನಮ್ಮ ದೇಶದ ಜಾಗ ಬಿಟ್ಟುಕೊಟ್ಟರು. ಎಷ್ಟೋ ಕಿಮೀ ರಸ್ತೆಯನ್ನ ಪಾಕಿಸ್ತಾನ, ಚೈನಾ ಗೆ ಬಿಟ್ಟುಕೊಟ್ರು. ವಿಧಾನಸೌಧಕ್ಕೆ ಕೂಡ ಅಪರಿಚಿತ ವ್ಯಕ್ತಿ ನುಗ್ಗಿದ್ದ. ಅವರ ಮೇಲೆ ಏನು ಕ್ರಮ ತೆಗೆದುಕೊ‌ಂಡ್ರು..? ನಿಮ್ಮದೆ ಸರ್ಕಾರ, ನೀವೇ ಸಿಎಂ ಆಗಿದ್ರಿ ನೀವೇನ್ ರಾಜೀನಾಮೆ ಕೊಟ್ರಾ..? ಮೊದಲು ಸಿದ್ದರಾಮಯ್ಯ ರಾಜೀನಾಮೆ‌ ಕೊಡ್ಲಿ. ನೀವೆ ಹೊಣೆ ಹೊತ್ತು ರಾಜೀನಾಮೆ ಕೊಡಿ, ಬಳಿಕ ಪ್ರತಾಪ್ ಸಿಂಹ ಅವರ ರಾಜೀನಾಮೆ ಕೊಡಲಿ ಎಂದಿದ್ದಾರೆ.

ಮಗುವನ್ನ ಚಿವುಟಿ, ತೊಟ್ಟಿಲು ತೂಗುತ್ತಿದ್ದಾರೆ. ಸಂಸತ್ ಪ್ರಕರಣವನ್ನ ರಾಜಕೀಯಕ್ಕೆ ಕಾಂಗ್ರೆಸ್ ಬಳಿಸಿಕೊಳ್ಳುತ್ತಿದೆ. ಸಿಎಂ ಸಿದ್ದರಾಮಯ್ಯ ಅವರೆ ದೇಶವನ್ನ ವಿಭಾಗ ಮಾಡಲು ಹೊರಟಿದ್ದಾರೆ. ಪ್ರತಾಪ್ ಸಿಂಹ ಒಬ್ಬ ದೇಶ ಪ್ರೇಮಿ. ಪ್ರತಾಪ್ ಸಿಂಹ‌ ಮಾಡಿರುವ ಒಳ್ಳೆಯ ಕೆಲಸಗಳು, ಸಿದ್ದರಾಮಯ್ಯ ಜೀವಮಾನದಲ್ಲಿ ಮಾಡಲು ಆಗಲ್ಲ ಎಂದು ಮುನಿಸ್ವಾಮಿ ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್‌ ನಾಯಕನ ಜತೆ ಲೋಕಸಭೆ ದಾಳಿ ಸಂಚಿನ ರೂವಾರಿ, ಫೋಟೋ ವೈರಲ್‌

‘ಬುದ್ಧಿಜೀವಿಗಳ ಮೂಲಕ ಕಾಂಗ್ರೆಸ್ ಈ ಕೆಲಸ ಮಾಡಿಸಿರಬಹುದು’

ಶಿರಡಿ ಸಾಯಿಬಾಬಾ ದೇಗುಲಕ್ಕೆ ಶಾರುಖ್ ಖಾನ್ ಭೇಟಿ!

- Advertisement -

Latest Posts

Don't Miss