Monday, January 13, 2025

Latest Posts

ಬಿಜೆಪಿ ಕಾರ್ಯಕರ್ತೆ ಮಗ ಆತ್ಮಹ* ಕೇಸ್: ಡೆತ್ ನೋಟ್‌ನಲ್ಲಿ ಇದ್ದದ್ದಾದ್ರೂ ಏನು..?

- Advertisement -

Political News: ನಿನ್ನೆ ತುಮಕೂರಿನ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಅವರ ಪುತ್ರ, 7ನೇ ತರಗತಿ ಓದುತ್ತಿದ್ದ ತ್ರಿಶುಲ್ ಆತ್ಮಹತ್ಯೆಗೆ ಶರಣಾಗಿದ್ದ. ಇಷ್ಟು ಚಿಕ್ಕ ವಯಸ್ಸಿಗೆ ಆತ್ಮಹತ್ಯೆಗೆ ಶರಣಾಗುವಂಥದ್ದು ಏನಾಯ್ತು ಅನ್ನೋದೇ ಹಲವರ ಪ್ರಶ್ನೆ.

ತ್ರಿಶಾಲ್‌ ತನ್ನ ತಾಾಯಿ ಜೊತೆ ವಿಜಯನಗರದಲ್ಲಿನ ಮನೆಯಲ್ಲಿ ವಾಸಿಸುತ್ತಿದ್ದ. ಬೆಳಿಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ, ಶಾಲಾ ಸಮವಸ್ತ್ರದಲ್ಲೇ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಇನ್ನು ಈ ಸಾವಿಗೆ ಕಾರಣವೇನು ಎಂದರೆ, ಪಾರಿವಾಳದ ಬೆಟ್ಟಿಂಗ್ ವಿಷಯಕ್ಕೆ ಸಂಬಂಧಿಸಿದಂತೆ, ಸ್ನೇಹಿತರ ಜೊತೆ ಜಗಳವಾಗಿದೆ. ಈ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ನಿನ್ನೆ ಡೆತ್ ನೋಟ್ ಸಿಕ್ಕಿತ್ತು. ಆದರೆ ಅದನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಬಿಜೆಪಿ ಕಾರ್ಯಕರ್ತೆ ಈ ಬಗ್ಗೆ ಮಾತನಾಡಿದ್ದು, ಆತನ ಜೊತೆಯಲ್ಲಿದ್ದ ಆತನ ಸ್ನೇಹಿತರು ದುಡ್ಡು ಕೊಡುವಂತೆ ಆತನನ್ನು ಪೀಡಿಸುತ್ತಿದ್ದರಂತೆ. ಹರ್ಷ ಮತ್ತು ಆದಿತ್ಯ ಎನ್ನುವ ಹುಡುಗರು ಈತನಿಗೆ ಹಣ ನೀಡುವಂತೆ ಮಾನಸಿಕವಾಗಿ ಹಿಂಸೆ ಮಾಡುತ್ತಿದ್ದರು. ಹೀಗಾಗಿ ಅವರಿಗೆ ಶಿಕ್ಷೆಯಾಗಲೇಬೇಕಮ್ಮ ಎಂದು ತ್ರಿಶಾಲ್ ಡೆತ್ ನೋಟ್‌ನಲ್ಲಿ ಬರೆದಿಟ್ಟಿದಾನಂತೆ.

ತ್ರಿಶಾಲ್ ಜೊತೆ ಇರುವ ಹುಡುಗ ಆ ಮಕ್ಕಳ ಹಣ ಕದ್ದ ಕಾರಣಕ್ಕೆ, ಆ ಹುಡುಗರು ತ್ರಿಶಾಲ್‌ಗೆ ಪದೇ ಪದೇ ದುಡ್ಡು ನೀಡುವಂತೆ ಹಿಂಸೆ ನೀಡುತ್ತಿದ್ದರು. ಆದರೆ ಅಮ್ಮನಿಗೆ ವಿಷಯ ಗೊತ್ತಾದರೆ, ಅಮ್ಮನಿಗೆ ಬೇಸರವಾಗುತ್ತದೆ ಎಂದು ಆತ ವಿಷಯ ತಿಳಿಸದೇ, ಆತ್ಮಹತ್ಯೆಗೆ ಶರಣಾಗಿದ್ದಾನೆ. 4,500 ರೂಪಾಯಿ ಹಣ ನೀಡಬೇಕಿತ್ತು. ಅದರ ಬಗ್ಗೆ ನನಗೇನೂ ಸ್ಪಷ್ಟತೆ ಇಲ್ಲ. ದುಡ್ಡು ಕೇಳಿದ್ದರೆ ನಾನು ಕೊಡುತ್ತಿದ್ದೆ ಎಂದು ಶಕುಂತಲಾ ಕಣ್ಣೀರಿಟ್ಟಿದ್ದಾರೆ.

- Advertisement -

Latest Posts

Don't Miss