Political News: ಧಾರವಾಡ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆಗೆ ವಿರೋಧಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಏಗನಗೌಡ ವಾಗ್ದಾಳಿ ನಡೆಸಿದ್ದಾರೆ. ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ನಾಲ್ಕು ದಿನಗಳ ಹಿಂದೆ ರೌಡಿ ಶಿಟರ್ ಎದುರಿಗೆ ಸಿಪಿಐ ಅವರಿಗೆ ಬೆದರಿಸುತ್ತಾರೆ. ಅವರ ವರ್ತನೆ ಸರಿಯಾಗಿಲ್ಲ ಎಂದಿದ್ದಾರೆ.
ಜೋಶಿ ಅವರು ಕ್ಷುಲಕ್ ಕಾರಣಕ್ಕೆ ಅಧಿಕಾರಿಯ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ ಎಂದಿದ್ದಾರೆ. ಕೇಂದ್ರ ಸಚಿವರು ಸಿಪಿಐ ಕಾಡದೇವರಮಠ ವಿಷಯವನ್ನ ಕೇಂದ್ರಕ್ಕೆ ಮುಟ್ಟಿಸುತ್ತಾರೆ ಅಂತಿದ್ದಾರೆ. ರೌಡಿಶೀಟರ್ ಗಳ ಮುಂದೆ ಪೋಲಿಸ್ ಅಧಿಕಾರಿಗಳಿಗೆ ಅವ್ಯಾಚ್ಯ ಶಬ್ದಗಳಿಂದ ಮಾತನಾಡುತ್ತಿದ್ದಾರೆ. ಕಾನೂನನ್ನ ಪಾಲನೆ ಮಾಡೋ ಸಚಿವರೇ ಈ ರೀತಿಯಾಗಿ ಮಾತನಾಡಬಾರದು. ಜೋಶಿ ಅವರ ಕುಮ್ಮಕ್ಕಿನಿಂದ ರೌಡಿಗಳು ಬಾಲ ಬಿಚ್ಚಿದ್ದಾರೆ ಎಂದು ಏಗನಗೌಡ ಅಸಮಾಧಾನ ಹೊರಹಾಕಿದ್ದಾರೆ.
ಅವರು ಸೋಲಿನ ಭೀತಿಯಿಂದ ಹತಾಶರಾಗಿ ಮಾತನಾಡುತ್ತಿದ್ದಾರೆ. ಕೇಂದ್ರ ಸಚಿವರು ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಅವರು ನೈತಿಕ ಹೊಣೆ ಹೊತ್ತು ರಾಜಿನಾಮೆ ಕೊಡಬೇಕು. ನಾವು ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿಗೆ ಪತ್ರ ಚಳುವಳಿ ಮಾಡುತ್ತೇವೆ. ಜೋಶಿ ಅವರನ್ನ ಅಧಿಕಾರದಿಂದ ಕೆಳಗಿಳಿಸಿ ಎಂದು ಪತ್ರ ಬರೆಯುತ್ತೇವೆ ಎಂದು ಅರವಿಂದ್ ಹೇಳಿದ್ದಾರೆ.
ನರೇಂದ್ರ ಗ್ರಾಮದಲ್ಲಿ ಇಸ್ಪೆಟ್ ಆಡುತ್ತಿದ್ದವರ ಮೆಲೆ ಪೋಲಿಸರು ದಾಳಿ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಜೋಶಿ ಅವರ ಕುಮ್ಮಕ್ಕಿನಿಂದ ಈ ರೀತಿಯಾಗಿ ಮಾಡುತ್ತಿದ್ದಾರೆ. ಸಿಪಿಐಗೆ ಕ್ಷಮೆಯಾಚಣೆ ಮಾಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಏಗನಗೌಡ ಆಗ್ರಹಿಸಿದ್ದಾರೆ.
ಸಾಕು ನಾಯಿ ಕಚ್ಚಿದ ಪ್ರಕರಣ: 15 ನಿಮಿಷ ವಿಚಾರಣೆಗೆ ಹಾಜರಾದ ನಟ ದರ್ಶನ್
Crime News: ಉಡುಪಿ ತಾಯಿ- ಮಕ್ಕಳ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗಲೆ ಬಂಧನ
”ವಹಿಸಿರುವುದು ಅಧಿಕಾರವಲ್ಲ ಹೊಣೆಗಾರಿಕೆ’ ಎಂದರಿತು ಕಾರ್ಯಕರ್ತನಾಗಿ ಹೆಜ್ಜೆ ಇಡಲಿದ್ದೇನೆ’