Friday, July 4, 2025

Latest Posts

ಪ್ರಜ್ವಲ್ ಪೆನ್‌ಡ್ರೈವ್ ಕೇಸ್‌ನ ಹೊಣೆಯನ್ನು ಬಿಜೆಪಿ ಮೇಲೆ ಹೊರಿಸುತ್ತಿರುವುದು ಹಾಸ್ಯಾಸ್ಪದ: ಚೇತನ್ ಅಹಿಂಸಾ

- Advertisement -

Bengaluru News: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್‌ಗೆ ಸಬಂಧಿಸಿದಂತೆ, ರಾಜ್ಯಾದ್ಯಂತ ಪರ ವಿರೋಧ ಹೇಳಿಕೆಗಳು ಕೇಳಿಬರುತ್ತಿದೆ. ವಿರೋಧ ಪಕ್ಷಗಳು, ಮಹಿಳಾ ಹೋರಾಟಗಾರ್ತಿಯರು ಪ್ರತಿಭಟನೆ ಮಾಡುತ್ತಿದ್ದಾರೆ. ಇದೀಗ ನಟ ಚೇತನ್ ಅಹಿಂಸಾ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಅಪರೂಪಕ್ಕೆ ಬಿಜೆಪಿ ಪರ ಬ್ಯಾಟ್ ಬೀಸಿದ್ದಾರೆ.

ಪ್ರಜ್ವಲ್ ಕೇಸ್‌ನಲ್ಲಿ ಮಹಿಳೆಯರು ತಾವಾಗಿಯೇ ಮುಂದೆ ಬಂದು ದೂರು ದಾಖಲಿಸುತ್ತಿರುವುದು ಸಂತೋಷದ ವಿಷಯ. ಪ್ರಜ್ವಲ್ ಮಾಡಿರುವುದು ತಪ್ಪೆಂದು ಸಾಬೀತಾದರೆ, ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಆದರೆ ಕಾಂಗ್ರೆಸ್ ಪಕ್ಷದವರು, ಪ್ರಜ್ವಲ್ ಪೆನ್‌ಡ್ರೈವ್ ಕೇಸ್‌ನ ಹೊಣೆಯನ್ನು ಬಿಜೆಪಿ ಮೇಲೆ ಹೊರಿಸುತ್ತಿರುವುದು ಹಾಸ್ಯಾಸ್ಪದ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.

ಪ್ರಜ್ವಲ್ 2,900 ವೀಡಿಯೋಗಳನ್ನು ಕಾರ್ಯರೂಪಕ್ಕೆ ತರಲು ನಿರ್ಭಿತಿಯಿಂದ ಇದ್ದಿದ್ದು ನೋಡಿ ನಾನು ದಿಗ್ಭ್ರಮೆಗೊಳಗಾಗಿದ್ದೇನೆ. ಇಂಥ ವಿಷಯಗಳು ಹೊರಬರುವುದರಿಂದ ಅವರ ಕುಟುಂಬ, ರಾಜಕೀಯದ ಮೇಲೆ ಪರಿಣಾಮ ಬೀರಬಹುದು ಎಂದು ಆತನಿಗೆ ಮೊದಲೇ ಗೊತ್ತಿರಲಿಲ್ಲವೇ ಎಂದು ಚೇತನ್ ಪ್ರಶ್ನಿಸಿದ್ದಾರೆ.

ದೇಶದ ಜನ ಸ್ವಾವಲಂಬಿಯಾಗಲು ಮೋದಿಯವರು ಅನೇಕ ಸ್ಕೀಮ್ ಕೊಟ್ಟಿದ್ದಾರೆ: ಪ್ರಹ್ಲಾದ್ ಜೋಶಿ

ಪಾಕಿಸ್ತಾನ ಕೂಡ ಹೆದರುವಂತ ಮಹಾನ್ ವ್ಯಕ್ತಿ ಮೋದಿ: ಬಿ.ಎಸ್.ಯಡಿಯೂರಪ್ಪ

ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ: ಸಂತ್ರಸ್ತೆಯ ಅತ್ತೆಯಿಂದ ಸ್ಪೋಟಕ ಹೇಳಿಕೆ..

- Advertisement -

Latest Posts

Don't Miss