Friday, March 14, 2025

Latest Posts

ಹುಬ್ಬಳ್ಳಿಯ ಐಇಎಂಎಸ್ಎಮ್‌ಬಿಎ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ

- Advertisement -

Hubballi News: ಹುಬ್ಬಳ್ಳಿ: ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಇನ್ ಮ್ಯಾನೇಜ್‌ಮೆಂಟ್ ಸೈನ್ಸ್, ಹುಬ್ಬಳ್ಳಿ ಮತ್ತು ಪ್ರೇಮಬಿಂದು ಬ್ಲಡ್ ಬ್ಯಾಂಕ್ ಹುಬ್ಬಳ್ಳಿ ಸಹಯೋಗದಲ್ಲಿ ದಿನಾಂಕ 20.10.2023 ರಂದು ತನ್ನ ಕ್ಯಾಂಪಸ್‌ನಲ್ಲಿ ಸ್ಥಾಪಕ ಅಧ್ಯಕ್ಷ ಖ್ಯಾತ ಚಾರ್ಟರ್ಡ್ ಅಕೌಂಟೆಂಟ್ ಡಾ.ಎನ್.ಎ.ಚರಂತಿಮಠ ಅವರ ಜನ್ಮದಿನದ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು.

ಶಿಬಿರವನ್ನು ಮುಖ್ಯ ಅತಿಥಿಗಳಾದ ಶ್ರೀ. ಶರಣಪ್ಪ ಕೊಟಗಿ, ಅಧ್ಯಕ್ಷರು ಬಸವೇಶ್ವರ ರೂರಲ್ ಎಜುಕೇಶನ್ ಸೊಸೈಟಿ, ಸತ್ತೂರು, ಹುಬ್ಬಳ್ಳಿ ಮಾತನಾಡುತ್ತ, ಈ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ದೇಶದ ಯುವಕರಲ್ಲಿ ಸಾಮಾಜಿಕ ಜವಾಬ್ದಾರಿಯ ಅಂಶವನ್ನು ತರುತ್ತದೆ ಎಂದು ಹೇಳಿದರು. ರಕ್ತವು ಅಗತ್ಯವಿರುವಾಗ ಯಾವುದೇ ಜಾತಿ, ಮತ ಮತ್ತು ಧರ್ಮದೊಂದಿಗೆ ಭೇದಿಸದ ಏಕೈಕ ಅಂಶವಾಗಿದೆ.

ಈ ಸಂದರ್ಭದಲ್ಲಿ ಕನಕದಾಸ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷ ಶ್ರೀ. ಶಾಂತಣ್ಣ ಕಡಿವಾಳ್. ಶ್ರೇಯಾ ಜವಾನೀಸ್ ಫೌಂಡೇಶನ್ ರಾಜ್ಯಾಧ್ಯಕ್ಷ ವಿದ್ಯಾನಗರ ಹುಬ್ಬಳ್ಳಿ ಯ ಶ್ರೀ ವಿ ಜಿ ಪಾಟೀಲ್ ಇವರು ಭಾಗವಹಿಸಿದ್ದರು.

ಸಂಸ್ಥೆ ನಿರ್ದೇಶಕ ಡಾ.ವೀರಣ್ಣ ಡಿ.ಕೆ ಮಾತನಾಡುತ್ತ ರಕ್ತದಾನ ಸಮಾಜದಲ್ಲಿ ಉದಾತ್ತವಾದ ಧ್ಯೇಯವನ್ನು ಹೊಂದಿದೆ. ಜನರು ರಕ್ತದಾನ ಮಾಡುವ ಮೂಲಕ ಅನೇಕ ಜೀವಗಳನ್ನು ಉಳಿಸಬಹುದು ಮತ್ತು ಅನೇಕ ಕುಟುಂಬಗಳಿಗೆ ಪರೋಕ್ಷವಾಗಿ ಬೆಂಬಲ ನೀಡಬಹುದು. ವಿಜ್ಞಾನವು ತನ್ನ ಉತ್ತುಂಗಕ್ಕೆ ಬೆಳೆದಿರುವ ಇಂದಿನ ದಿನಗಳಲ್ಲಿಯೂ ಯಾವುದೇ ಆವಿಷ್ಕಾರವು ಕೃತಕ ರಕ್ತ ಉತ್ಪಾದನೆಯಲ್ಲಿ ಯಶಸ್ವಿಯಾಗಲಿಲ್ಲ. ಇದನ್ನು ಜೈವಿಕವಾಗಿಯೇ ಉತ್ಪಾದಿಸಬೇಕು ಎಂದು ಹೇಳಿದರು . ರಕ್ತ ದಾನಿಗಳು ಸಮಾಜದಲ್ಲಿ ಹೆಚ್ಚಿನ ಗೌರವವನ್ನು ಹೊಂದಿದ್ದಾರೆ ಏಕೆಂದರೆ ಅವರು ನಿರ್ಣಾಯಕ ಸಮಯದಲ್ಲಿ ಜೀವಗಳನ್ನು ರಕ್ಷಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.

ಶ್ರೀ. ವಿ ಎಂ ಹಿರೇಮಠ, ವ್ಯವಸ್ಥಾಪಕ ಟ್ರಸ್ಟಿ, ಪ್ರೇಮಾ ಬಿಂದು ಬ್ಲಡ್ ಬ್ಯಾಂಕ್ ವಿದ್ಯಾನಗರ ಹುಬ್ಬಳ್ಳಿಯವರು ಮಾತನಾಡುತ್ತ ಡಾ.ಎನ್.ಎ.ಚರಂತಿಮಠ ಅವರು ವಿವಿಧ ವೇದಿಕೆಗಳ ಮೂಲಕ ಸಲ್ಲಿಸಿದ ಸೇವೆಗಳ ಬಗ್ಗೆ ಪ್ರಸ್ತಾಪಿಸಿದರು. ಅವರ ಜನ್ಮದಿನದ ಹಿನ್ನೆಲೆಯಲ್ಲಿ ಕಾಲೇಜು ಅಧಿಕಾರಿಗಳು ಈ ಉದಾತ್ತ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸುಮಾರು ೪೦ ಯೂನಿಟ್ ರಕ್ತವನ್ನು ಸಂಗಹಿಸಲಾಯಿತು. ಸಾಂಸ್ಕೃತಿಕ ಕೋಶವು ಈ ಕಾರ್ಯಕ್ರಮನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಕೋಶದ ಆಯೋಜಕರಾದ ಪ್ರೊ. ಪ್ರೀತಿ ಬೆಳಗಾಂಕರ್ ಮತ್ತು ಪ್ರೊ. ಪ್ರೀತಿ ಗೌಡರ್ ಮತ್ತು ಇತರ ಶಿಕ್ಷಕ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು

MTB Nagaraj : ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಮತ್ತೆ ಆರೋಪಿಸಿದ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್

40 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಡಿಡಿಪಿಐ.

ಜನತಾ ದರ್ಶನದಲ್ಲಿ ಜನರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಭರವಸೆ ಮೂಡಿಸಿದ ಜಿಲ್ಲಾಧಿಕಾರಿ

- Advertisement -

Latest Posts

Don't Miss