Thursday, December 5, 2024

Latest Posts

ಟರ್ಮಿನಲ್ 2 ರಿಂದ ಬಿಎಂಟಿಸಿ ವಾಯು ವಜ್ರ ಸೇವೆ ಪ್ರಾರಂಭ: ಸಚಿವರಿಂದ ಚಾಲನೆ

- Advertisement -

Bengaluru News: ದೇವನಹಳ್ಳಿ ಏರ್ಪೋರ್ಟ್: ಇಂದಿನಿಂದ ಟರ್ಮಿನಲ್ 2 ರಿಂದ ಬಿಎಂಟಿಸಿ ವಾಯು ವಜ್ರ ಸೇವೆ ಪ್ರಾರಂಭಗೊಂಡಿದ್ದು, ಸಾರಿಗೆ ಸಚಿವ ರಾಮಲಿಂಗರೆಡ್ಡಿ ಮತ್ತು ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ಚಾಲನೆ ನೀಡಿದ್ದಾರೆ.

ಟರ್ಮಿನಲ್ 2ರಿಂದ ನಗರದ ವಿವಿದೆಡೆಗೆ ವಾಯುವಜ್ರ ಬಸ್ಸುಗಳ ಸಂಚಾರ ಆಂರಭಗೊಂಡಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ‌ T2 ನಲ್ಲಿ ಬಸ್ ಗಳಿಗೆ ಚಾಲನೆ ನೀಡಲಾಗಿದೆ. T2 ಗೆ ಅಂತರಾಷ್ಟ್ರೀಯ ವಿಮಾನಗಳಿಂದ ಪ್ರಯಾಣಿಕರು ಆಗಮಿಸುತ್ತಾರೆ. ಈ ಹಿಂದೆ ಬಸ್ ಗಳಿಲ್ಲದೆ T2 ನಿಂದ T1 ಗೆ ಶಟಲ್ ಬಸ್ ಗಳಲ್ಲಿ ಹೋಗಬೇಕಿತ್ತು. T1 ನಿಂದ ಟಿಕೆಟ್ ಬುಕ್ ಮಾಡಿಕೊಂಡು ಬೇರೆಕಡೆಗೆ ಪ್ರಯಾಣ ಮಾಡಬೇಕಿತ್ತು. T2 ಗೆ ಬಸ್ ವ್ಯವಸ್ಥೆ ಮಾಡಿರುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಈ ಹೈಟೆಕ್ ಬಸ್ ನಿಲ್ದಾಣ, ವಿಐಪಿ ಲಾಂಜ್ ಎಸಿ ಲಾಂಜ್, ಶೌಚಾಲಯ, ಸಹಾಯವಾಣಿ ಕೇಂದ್ರ ಸೇರಿದಂತೆ ಅತ್ಯಾಧುನಿಕ ಸೌಲಭ್ಯ ಹೊಂದಿದೆ. ಪ್ರತಿನಿತ್ಯ ಬೆಂಗಳೂರಿನ ವಿವಿದೆಡೆಗೆ ಬಿಎಂಟಿಸಿ ವಾಯು ವಜ್ರ ಬಸ್ಗಳು ಓಡಾಡುತ್ತದೆ. ಹಾಗಾಗಿ ನಿತ್ಯ ಸಾವಿರಾರು ಜನ ಪ್ರಯಾಣಿಕರಿಗೆ ಈ ಬಸ್ ನಿಲ್ದಾಣದಿಂದ ಅನುಕೂಲವಾಗಲಿದೆ. ಇದು ಗಾರ್ಡನ್ ಟರ್ಮಿನಲ್ ನಂತೆ ವಿಶೇಷತೆಯುಳ್ಳ ನಿಲ್ದಾಣವಾಗಿದೆ.

‘ಇಂಗ್ಲೀಷ್ ಜೊತೆಗೆ ಕನ್ನಡದಲ್ಲಿ ನಾಮಫಲಕ ಹಾಕಿದರೆ ಏನು ತೊಂದರೆ? ಇದು ಬ್ರಿಟನ್ ಅಥವಾ ಇಂಗ್ಲೆಂಡ್ ಅಲ್ಲ’

‘ಕನ್ನಡ ನಾಮಫಲಕ ಹಾಕುವ ಬಗ್ಗೆ ಕಾಯ್ದೆ ಜಾರಿ ಮಾಡುತ್ತೇವೆ. ಅಲ್ಲಿಯವರೆಗೂ ಶಾಂತಿಯುತವಾಗಿರಿ’

‘ಬಿಜೆಪಿಗರು ಬುರುಡೆ ಬಿಡುವುದನ್ನು ಬಿಟ್ಟು ಬೇರೇನು ಮಾಡಿದ್ದಾರೆ..?’

- Advertisement -

Latest Posts

Don't Miss