www.karnatakatv.net : ರಾಯಚೂರು: ರಾಯರ 350ನೇ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಮಂತ್ರಾಲಯಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಶ್ರೀಕ್ಷೇತ್ರದಲ್ಲಿ ಭಕ್ತರ ಸುರಕ್ಷತೆಗಾಗಿ ಕೊವಿಡ್ ನಿಯಮಾವಳಿಗಳನ್ನು ಪಾಲಿಸಲಾಗ್ತಿದೆ. ಆದರೂ ಸಹ ರಾಜ್ಯ ಹೊರರಾಜ್ಯಗಳಿಂದ ಆಗಮಿಸುತ್ತಿರೋ ಅಪಾರ ಸಂಖ್ಯೆಯ ಭಕ್ತವೃಂದಿಂದಾಗಿ ಇದೀಗ ಕೋವಿಡ್ ಹರಡೋ ಭೀತಿ ಎದುರಾಗಿದ್ದು ಶ್ರೀ ಮಠ ಇದಕ್ಕಾಗಿ ಬೌನ್ಸರ್ ಗಳ ಮೊರೆ ಹೋಗಿದೆ.
ಹೌದು, ಇಂದಿನಿಂದ 7 ದಿನಗಳ ಕಾಲ ನಡೆಯೋ ಆರಾಧನಾ ಮಹೋತ್ಸವದ ಪೂಜಾ ವಿಧಿ ವಿಧಾನಗಳು ಸಾಂಗವಾಗಿ ಸಾಗುತ್ತಿದೆ. ಆದರೆ ಭಕ್ತರು ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ಶ್ರೀಗಳ ಆಶೀರ್ವಾದ ಪಡೆಯಲು ಮುಗಿಬೀಳುತ್ತಿದ್ದ ಹಿನ್ನೆಲೆಯಲ್ಲಿ 6 ಮಂದಿ ಬೌನ್ಸರ್ ಗಳನ್ನು ನಿಯೋಜಿಸಲಾಗಿದೆ. ಶ್ರೀಗಳ ಸುತ್ತಮುತ್ತಲು ಬರುವ ಭಕ್ತರನ್ನು ನಿಯಂತ್ರಿಸೋ ಕೆಲಸ ಮಾಡ್ತಿದ್ದಾರೆ.
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು