Tuesday, May 28, 2024

Latest Posts

ಶಿವಸೇನೆಯ ಶಿಂಧೆ ಬಣಕ್ಕೆ ಸೇರ್ಪಡೆಯಾದ ಬಾಲಿವುಡ್ ನಟ ಗೋವಿಂದ

- Advertisement -

Movie News: ಬಾಲಿವುಡ್ ನಟ, ಮಾಜಿ ಸಂಸದ ಗೋವಿಂದಾ, ಮತ್ತೆ ರಾಜಕೀಯಕ್ಕೆ ಸೇರಿದ್ದಾರೆ. ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಗೋವಿಂದಾ, ಶಿವಸೇನೆಯ ಶಿಂಧೆ ಬಣವನ್ನು ಸೇರಿದ್ದಾರೆ.

2004ರಲ್ಲಿ ಗೋವಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ಈ ಅವಧಿ ಬಳಿಕ, ಅವರು ಮತ್ತೆ ಸ್ಪರ್ಧಿಸದೇ, ಕಾಂಗ್ರೆಸ್‌ಗೆ ಬೆಂಬಲಿಸಿ,  ಪ್ರಚಾರ ನಡೆಸಿದ್ದರು. ಬಳಿಕ ರಾಜಕೀಯದಿಂದ ದೂರ ಉಳಿದಿದ್ದರು. ಇದೀಗ ಮತ್ತೆ ರಾಜಕೀಯಕ್ಕೆ ಮರಳಿದ್ದು, ಕಾಂಗ್ರೆಸ್ ತೊರೆದು ಶಿಂಧೆ ಬಣ ಸೇರಿದ್ದಾರೆ. ಅಲ್ಲದೇ, ಮೊದಲೆಲ್ಲ ಸಿನಿಮಾದಲ್ಲಿ ನಟಿಸುತ್ತಿದ್ದ ಗೋವಿಂದ, ಬಳಿಕ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಬರಲಾರಂಭಿಸಿದರು. ಬಳಿಕ ಸಿನಿ ರಂಗದಿಂದಲೂ ಅಂತರ ಕಾಯ್ದುಕೊಂಡಿದ್ದರು.

ಇನ್ನು ಶಿಂಧೆ ಬಣ ಸೇರಿದ ಬಳಿಕ ಮಾತನಾಡಿದ ಗೋವಿಂದ, 14 ವರ್ಷದ ಬಳಿಕ ಮತ್ತೆ ರಾಜಕೀಯಕ್ಕೆ ಮರಳಿದ್ದೇನೆ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿಭಾಯಿಸುತ್ತೇನೆ ಎಂದಿದ್ದಾರೆ. ಆದರೆ ಈ ಬಾರಿ ನೀವು ಚುನಾವಣೆಗೆ ಸ್ಪರ್ಧಿಸುತ್ತೀರಾ ಅಂತಾ ಕೇಳಿದ ಪ್ರಶ್ನೆಗೆ ಗೋವಿಂದ ಉತ್ತರಿಸಲಿಲ್ಲ.

ಕಷ್ಟಕ್ಕೆ ಸ್ಪಂದಿಸುವ ಡಿ.ಕೆ.ಸುರೇಶ್ ಬೇಕೊ? ವೈಟ್ ಕಾಲರ್ ಡಾ.ಮಂಜುನಾಥ್ ಬೇಕೋ?ನೀವೇ ನಿರ್ಧರಿಸಿ ಎಂದ ಸಿಎಂ

ಮೇಡಂ ಟುಸ್ಸಾಡ್ಸ್‌ನಲ್ಲಿರುವ ತಮ್ಮ ಮೇಣದ ಪ್ರತಿಮೆ ಅನಾವರಣಗೊಳಿಸಿದ ನಟ ಅಲ್ಲು ಅರ್ಜುನ್

ನಾವೆಲ್ಲರೂ ಲಿಂಗಾಯತರು ನಮ್ಮನ್ನು ಬೆಳೆಸಿದ್ದು ಪ್ರಹ್ಲಾದ್ ಜೋಶಿ: ಶಾಸಕ ಎಂ.ಆರ್.ಪಾಟೀಲ್

- Advertisement -

Latest Posts

Don't Miss