Friday, December 13, 2024

Latest Posts

ಚಿನ್ನದ ಬ್ರಶ್ ತೋರಿಸಿ ಟ್ರೋಲ್ ಆದ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ

- Advertisement -

Bollywood News: ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ಗೆ ಬರುವ ನಟಿ ಮಣಿಯರು ನಟನೆಗಿಂತ ಹೆಚ್ಚು ಎಕ್ಸ್‌ಪೋಸ್‌ಗೆ ಬೆಲೆ ಕೊಡುತ್ತಿದ್ದಾರೆ. ಹಾಗಾಗಿ ಪ್ರೇಕ್ಷಕರಿಗೆ ಅಷ್ಟು ಇಷ್ಟವಾಗುತ್ತಿಲ್ಲ. ಆದರೆ ತಮ್ಮ ನಟನೆಯಿಂದಲೇ ಬಾಲಿವುಡ್‌ನಲ್ಲಿ ಸದ್ದು ಮಾಡಿ, ಇಂದಿಗೂ ಅದೇ ಗ್ಲಾಮರ್ ಮೆಂಟೇನ್ ಮಾಡಿರುವ ನಟಿ ಅಂದ್ರೆ, ಕಾಯಿರಾ ಅಡ್ವಾಣಿ.

ಬಾಲಿವುಡ್ ನಟ ಸಿದ್ಧಾರ್ಥ ಮಲ್ಹೋತ್ರಾ ಅವರನ್ನು ವರಿಸಿರುವ ನಟಿ, ಹಲವರ ಫೆವರಿಟ್ ನಟಿ. ಈಕೆ ಆಯ್ಕೆ ಮಾಡುವ ಬಟ್ಟೆ, ಜೂವೆಲ್ಲರಿಗಳಿಂದಲೇ, ಮನೆ ಮಾತಾಗುವಾಕೆ. ಆದ್ರೆ ಈ ಬಾರಿ ಆಕೆ ಟ್ರೋಲ್ ಆಗಿದ್ದಾರೆ. ಕಾರಣವಿಷ್ಟೇ. ಆಕೆ ಬಳಸುತ್ತಿರುವ ಗೋಲ್ಡ್ ಬ್ರಶ್.

ತಮ್ಮ ಚಿನ್ನದ ಬ್ರಶ್ ಹಿಡಿದು ಕಾಯ್ರಾ ಫೋಟೋ ತೆಗೆದು ಸೋಶಿಯಲ್ ಮೀಡಿಯಾಗೆ ಹಾಕಿದ್ದೇ ತಡ. ಟ್ರೋಲರ್‌ಗಳು ಆಕೆಯನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ದುಡ್ಡು ಹೆಚ್ಚಾದ್ರೆ ಹಿಂಗೆಲ್ಲಾ ಆಗತ್ತೆ ಅಂತಿದ್ದಾರೆ. ಇನ್ನು ನೆಟ್ಟಿಗರ ಕಣ್ಣು ಕೆಂಪಾಗುವಂತೆ ಮಾಡಿದ್ದು ಇದಲ್ಲ. ಬದಲಾಗಿ, ಆಕೆ ಕೊಟ್ಟಿರುವ ಶೀರ್ಷಿಕೆ. ತಾನು ಸಿಂಧಿ ಅನ್ನೋದನ್ನು ಬಾಯಿಬಿಟ್ಟು ಹೇಳದೇ, ಬ್ರಶ್ ತೋರಿಸಿಯೇ ತಾನು ಸಿಂಧಿ ಎಂದು ಹೇಳಬಹುದು ಎನ್ನುವ ಅರ್ಥದಲ್ಲಿ ಶೀರ್ಷಿಕೆ ಕೊಟ್ಟಿದ್ದಾರೆ.

ಈ ಬಗ್ಗೆ ನಾನಾ ರೀತಿಯ ಕಾಮೆಂಟ್ಸ್ ಬಂದಿದ್ದು, ನಾನು ಮೂರು ತಿಂಗಳಿಗೊಮ್ಮೆ ಬ್ರಶ್ ಚೇಂಜ್ ಮಾಡುತ್ತೇನೆ. ನೀವು ಜೀವನಪೂರ್ತಿ ಅದೇ ಬ್ರಶ್ ಬಳಸಬೇಕಲ್ಲ ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು, ಈ ಬ್ರಶ್ನಿಂದ ಹಲ್ಲುಜ್ಜಿದರೆ, ಹಲ್ಲು ಚಿನ್ನವಾಗಬಹುದೇನೋ ಎಂದಿದ್ದಾರೆ. ಹೀಗೆ ನಾನಾ ರೀತಿಯ ಕಾಮೆಂಟ್ ಬಂದಿದೆ.

- Advertisement -

Latest Posts

Don't Miss