Bollywood News: ಬಾಲಿವುಡ್ ನಟಿ ನರ್ಗೀಸ್ ಫಕ್ರಿ ಸಹೋದರಿ ತನ್ನ ಮಾಜಿ ಪ್ರಿಯಕರನನ್ನು ಕೊಂದ ಕಾರಣಕ್ಕೆ ಅರೆಸ್ಟ್ ಆಗಿದ್ದಾಳೆ. ನರ್ಗೀಸ್‌ಳ ಕಿರಿಯ ಸಹೋದರಿಯಾದ ಆಲಿಯಾ ಫಕ್ರಿ, ನ್ಯೂಯಾರ್ಕ್ ಮೂಲದ 35 ವರ್ಷ ವಯಸ್ಸಿನ ಎಡ್ವರ್ಡ್ ಜೆಕಬ್ ಎಂಬುವವರನ್ನು ಪ್ರೀತಿಸುತ್ತಿದ್ದಳು.
ಆದರೆ ಇವರಿಬ್ಬರ ಪ್ರೀತಿಯ ನಡುವೆ ಇನ್ನೋರ್ವ ಯುವತಿ ಎಂಟ್ರಿ ಕೊಟ್ಟಿದ್ದಳು. ಹಾಗಾಗಿ ಅಲಿಯಾಳನ್ನು ಜೆಕಬ್ ಇಗ್ನೋರ್ ಮಾಡಿದ್ದ. ಹೀಗಾಗಿ ಇವರಿಬ್ಬರ ನಡುವೆ ಹಲವು ಬಾರಿ, ಜಗಳ ನಡೆದಿದೆ. ಜೆಕಬ್ ಬ್ರೇಕಪ್ ಮಾಡಿಕೊಳ್ಳಲು ನಿರ್ಧರಿಸಿದರೂ ಕೂಡ, ಆಲಿಯಾ ಮಾತ್ರ ಆತನನ್ನು ಬಿಟ್ಟುಕೊಡುವ ಮಾತೇ ಇಲ್ಲ ಅನ್ನುವಂತೆ ಇದ್ದಳು.
ಕೆಲ ದಿನಗಳ ಹಿಂದೆ ಜೆಕಬ್ ತನ್ನ ಮನೆಯಲ್ಲಿ ಆ ಮೂರನೇಯವಳ ಜೊತೆ ಇದ್ದುದ್ದನ್ನು ತಿಳಿದಿದ್ದ ಆಲಿಯಾ, ಮನೆಗೆ ಹೋಗಿ, ನೀವಿಬ್ಬರೂ ಸಾಯಲಿದ್ದೀರಿ ಎಂದು ವಾರ್ನ್ ಮಾಡಿ. ಮನೆಯ ಹೊರಗೆ ಬಂದು, ಲಾಕ್ ಮಾಡಿಬಿಟ್ಟಿದ್ದಾಳೆ. ಅಲ್ಲದೇ ಇಡೀ ಮನೆಗೆ ಬೆಂಕಿ ಹಚ್ಚಿದ್ದಾಳೆ. ಒಳಗಿದ್ದ ಜಾಕಬ್ ಮತ್ತು ಆತನ ಗೆಳತಿ, ಉಸಿರು ಗಟ್ಟಿ ಮೃತಪಟ್ಟಿದ್ದಾರೆ.
ಈಕೆಯ ಕೃತ್ಯ ಬೆಳಕಿಗೆ ಬಂದ ಬಳಿಕ, ಆಲಿಯಾಳನ್ನು ಪೊಲೀಸರು ಅರೆಸ್ಟ್ ಮಾಡಿ, ಕೋರ್ಟ್ಗೆ ಹಾಜರುಪಡಿಸಿದ್ದಾರೆ. ಆರೋಪ ಒಪ್ಪಿಕೊಂಡ ಹಿನ್ನೆಲೆ, ಈಕೆಗೆ ಜಾಮೀನು ನೀಡಲಾಗುವುದಿಲ್ಲವೆಂದು ಹೇಳಲಾಗಿದೆ. ಹಾಗಾಗಿ ಆಲಿಯಾ ಫಕ್ರಿಗೆ ಸದ್ಯ ಜೈಲೇ ಗತಿಯಾಗಿದೆ. ಈ ಆರೋಪ ಸಾಬೀತಾದರೆ, ಈಕೆಗೆ ಜೀವಾವಧಿ ಶಿಕ್ಷೆ ನೀಡಲಾಗುತ್ತದೆ.