Bollywood News: 4 ವರ್ಷದ ದಾಂಪತ್ಯ ಜೀವನಕ್ಕೆ ಎಳ್ಳು ನೀರು ಬಿಟ್ಟ ನಟಿ ಹನ್ಸಿಕಾ ಮೋಟ್ವಾನಿ..

Bollywood News: ನಟಿ ಹನ್ಸಿಕಾ ಮೋಟ್ವಾನಿ ಉದ್ಯಮಿ ಸೋಹೇಲ್ ಖತುರಿಯಾ ಜತೆಗಿನ 4 ವರ್ಷದ ವೈವಾಹಿಕ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. 2022ರಲ್ಲಿ ಇವರಿಬ್ಬರೂ ಅದ್ಧೂರಿಯಾಗಿ ವಿವಾಹವಾಗಿದ್ದರು.

ಸೋಹೇಲ್ ಹನ್ಸಿಕಾ ಅವರ ಸ್ನೇಹಿತೆ ರಿಂಕಿಯ ಪತಿಯಾಗಿದ್ದು, ರಿಂಕಿ ಮತ್ತು ಸೋಹೇಲ್ 12 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು. ಬಳಿಕ ರಿಂಕಿಯಿಂದ ವಿಚ್ಛೇದನ ಪಡೆದು, ಹನ್ಸಿಕಾ ಜತೆ ಸೋಹೇಲ್ ವಿವಾಹವಾದರು. ಇದೀಗ ಈ ವಿವಾಹವನ್ನು ಮುರಿಯುವ ಸಮಯ ಬಂದಿದ್ದು, ಹನ್ಸಿಕಾ ಸೋಹೇಲ್‌ಗೆ ಡಿವೋರ್ಸ್ ನೀಡಿದ್ದಾರೆ.

ಇನ್ನು ಸೋಹೇಲ್ ಜತೆ ಹನ್ಸಿಕಾ ವಿವಾಹವಾದಾಗ, ಹಲವರು ಹನ್ಸಿಕಾರನ್ನು ಅಭಿನಂದಿಸುವ ಬದಲು, ಹೀಯಾಳಿಸಿದ್ದರು. ಏಕೆಂದರೆ, ಸ್ನೇಹಿತೆಯ ಪತಿಯನ್ನೇ ಬುಟ್ಟಿಗೆ ಬೀಳಿಸಿ, ಮದುವೆಯಾದೆ ಎಂದು. ಅದಕ್ಕೆ ಪ್ರತಿಕ್ರಿಯಿಸಿದ್ದ ಹನ್ಸಿಕಾ, ಅವರ ವಿಚ್ಛೇದನಕ್ಕೂ ನಮ್ಮ ಮದುವೆಗೂ ಯಾವುದೇ ಸಂಬಂಧವಿಲ್ಲ. ನಾನು ಸೆಲೆಬ್ರಿಟಿಯಾದ ಕಾರಣ, ನನ್ನ ಮೇಲೆ ಇಂಥ ಆರೋಪ ಮಾಡುವುದು ತುಂಬಾ ಸುಲಭ ಎಂದು ಬೇಸರ ವ್ಯಕ್ತಪಡಿಸಿದ್ದರು.

ಇನ್ನು ಈ ಬಗ್ಗೆ ಮಾಜಿ ಪತಿ ಸೋಹೇಲ್ ಕೂಡ ಸ್ಪಷ್ಟನೆ ನೀಡಿದ್ದು, ನನ್ನ ಮತ್ತು ರಿಂಕಿ ವಿಚ್ಛೇದನಕ್ಕೂ ಹನ್ಸಿಕಾಗೂ ಯಾವುದೇ ಸಂಬಂಧವಿಲ್ಲ ಎಂದಿದ್ದರು. ಅಲ್ಲದೇ ಇದೀಗ ಇಬ್ಬರಿಗೂ ವಿಚ್ಛೇದನ ಸಿಕ್ಕಿದ್ದು, ಹನ್ಸಿಕಾ ಯಾವುದೇ ಜೀವನಾಂಶ ಕೇಳಲಿಲ್ಲವೆನ್ನಲಾಗಿದೆ.

About The Author