Wednesday, December 4, 2024

Latest Posts

Bollywood News: ಏಕಾಏಕಿ ನಿವೃತ್ತಿ ಘೋಷಿಸಿದ ಬಾಲಿವುಡ್ ನಟ: ಫ್ಯಾನ್ಸ್ ಶಾಕ್

- Advertisement -

Bollywood News: ಬಾಲಿವುಡ್ ನಟಿ ವಿಕ್ರಾಂತ್ ಮಾಸ್ಸಿ ಟ್ವೆಲ್ತ್ ಪಾಸ್ ಸಿನಿಮಾ ಮೂಲಕ ಪ್ರಸಿದ್ಧಿ ಪಡೆದರೂ ಕೂಡ, ಈ ಮೊದಲು ಹಲವು ಧಾರಾವಾಹಿಗಳಲ್ಲಿ ನಟಿಸಿ, ಸೈ ಎನ್ನಿಸಿಕೊಂಡವರು. ಟ್ವೆಲ್ತ್ ಪಾಸ್ ಸಿನಿಮಾದಲ್ಲಿ ಅವರ ನಟನೆಗೆ ಮಾರುಹೋದ ಪ್ರೇಕ್ಷಕ ಪ್ರಭುಗಳು, ಅವರ ನಟನೆಯ ಇನ್ನಷ್ಟು ಸಿನಿಮಾ ರಿಲೀಸ್ ಆಗಲಿ ಎನ್ನುವ ನಿರೀಕ್ಷೆಯಲ್ಲಿ ಇದ್ದರು. ಆದರೆ ವಿಕ್ರಾಂತ್ ಫ್ಯಾನ್ಸ್, ಏಕಾಏಕಿ ರಿಟೈರ್‌ಮೆಂಟ್ ಘೋಷಿಸಿದ್ದು, ಅವರ ಫ್ಯಾನ್ಸ್ ಶಾಕ್ ಆಗಿದ್ದಾರೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ವಿಕ್ರಾಂತ್, ಕಳೆದ ಕೆಲ ವರ್ಷಗಳು ಚೆನ್ನಾಗಿತ್ತು. ನನಗೆ ಬೆಂಬಲ ನೀಡಿದ್ದಕ್ಕೆ, ನಿಮಗೆಲ್ಲ ಧನ್ಯವಾದಗಳು. ಆದರೆ ಸಮಯ ಕಳೆದಿದ್ದು, ನಾನು ಮಗನಾಗಿ, ಪತಿಯಾಗಿ, ಅಪ್ಪನಾಗಿ ಮನೆಗೆ ಹಿಂದಿರುಗಲು ಇದು ಸರಿಯಾದ ಸಮಯ. 2025ರಲ್ಲಿ ಕೊನೆಯ ಬಾರಿಗೆ ಭೇಟಿಯಾಗೋಣ. ಬಳಿಕ 2 ಸಿನಿಮಾಗಳು ಮತ್ತು ಹಳೆಯ ನೆನಪುಗಳು ಮಾತ್ರ. ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು ಎಂದು ವಿಕ್ರಾಂತ್ ತಿಳಿಸಿದ್ದಾರೆ.

ಈ ಮೂಲಕ ವಿಕ್ರಾಂತ್ ತಾವು ಸಿನಿ ಜೀವನದಿಂದ ನಿವೃತ್ತಿ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಅಂದಹಾಗೆ ವಿಕ್ರಾಂತ್‌ಗೆ ಈಗ 37 ವರ್ಷ ವಯಸ್ಸು. ಇಷ್ಟು ಚಿಕ್ಕ ವಯಸ್‌ಸಿಗೆ ಸಿನಿಮಾದಿಂದ ನಿವೃತ್ತಿ ತೆಗೆದುಕೊಳ್ಳುವಂಥಾದ್ದು ಏನಾಯ್ತು ಎಂಬುದಕ್ಕೆ ಕಾರಣ, ಇನ್ನಷ್ಟೇ ಗೊತ್ತಾಗಬೇಕಿದೆ.

- Advertisement -

Latest Posts

Don't Miss