Grammy Award: ಇಂದು ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮ ನಡೆದಿದ್ದು, ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಗ್ರ್ಯಾಮಿ ಅವಾರ್ಡ್ ನೀಡಲಾಗಿದೆ. ಗಾಯಕಿ ಚಂದ್ರಿಕಾ ಟಂಡನ್ ಮಂತ್ರಪಠಣದ ಆಲ್ಬ್ಂಗೆ ಗ್ರ್ಯಾಮಿ ಅವಾರ್ಡ್ ದೊರೆತಿದೆ.
ಭಾರತೀಯ ಮೂಲದ ಅಮೆರಿಕನ್ ಉದ್ಯಮಿ ಮತ್ತು ಸಂಗೀತಗಾರ್ತಿ ಚಂದ್ರಿಕಾ ಟಂಡನ್ ಅವರ ಮಂತ್ರ ಪಠಣದ ಆಲ್ಬಂ ಆಗಿರುವ ತ್ರಿವೇಣಿಗೆ ಗ್ರ್ಯಾಮಿ ಅವಾರ್ಡ್ ಸಿಕ್ಕಿದೆ. ಭಾರತದಲ್ಲಿ ಸೇರಿ ಹರಿಯುವ ತ್ರಿವೇಣಿ ಸಂಗಮದ ಕುರಿತು ಅವರು ಮಂತ್ರ ಹೇಳಿದ್ದು, ತ್ರಿವೇಣಿ ಎಂಬ ಆಲ್ಬ್ಂ ಅದಾಗಿತ್ತು.
ಈ ಆಲ್ಬಮ್ ನಲ್ಲಿ ಆಪ್ರಿಕಾದ ಕೊಳಲುವಾದಕ ವೌಟರ್ ಮತ್ತು ಜಪಾನ್ ಚೆಲೋವಾದರ ಎರು ಜೊತೆ ಚಂದ್ರಿಕಾ ಹಾಡು ಹಾಡಿದ್ದರು. ಇನ್ನು ಚಂದ್ರಿಕಾ ಅವರು ಭಾರತೀಯ ಮೂಲಕ ಅಮೆರಿಕನ್ ಆಗಿದ್ದರೂ ಅವರಿಗೆ ಈ ಮಂತ್ರೋಚ್ಛಾರಣೆ ಹೇಗೆ ಬಂದಿದೆ ಎಂಬ ಪ್ರಶ್ನೆಗೆ ಉತ್ತರ, ಅವರು ಮೂಲತಃ ಚೆನ್ನೈನ ಮಧ್ಯಮ ಕುಟುಂಬದವರಾಗಿದ್ದರು. ಹಾಗಾಗಿ ಧಾರ್ಮಿಕ ಕಾರ್ಯಕ್ರಮ, ಭಜನೆ, ಮಂತ್ರೋಚ್ಛಾರಣೆ ಎಲ್ಲ ಬಾಲ್ಯದಲ್ಲೇ ಹಿರಿಯರಿಂದ ಬಂದ ಬಳುವಳಿಯಾಗಿದೆ.