Sunday, September 8, 2024

Latest Posts

ಬಾಲಿವುಡ್ ನಲ್ಲಿ ರಾಕಿ ಭಾಯ್ ಗೆ ನಂ.1 ಪಟ್ಟ..?!

- Advertisement -

Bollyood News:

ಹಿಂದಿ ಚಿತ್ರರಂಗದಲ್ಲಿ ಸದ್ಯ ಪರಭಾಷೆಯ ಸಿನಿಮಾಗಳು ಸದ್ದು ಮಾಡುತ್ತಿವೆ. ದಕ್ಷಿಣದ ಹಲವು ಸಿನಿಮಾಗಳು ಹಿಂದಿ ಚಿತ್ರರಂಗದಲ್ಲಿ ಯಶಸ್ಸು ಕಂಡಿವೆ. ಇದರಿಂದ ಅಲ್ಲಿಯವರಿಗೆ ಭಯ ಶುರುವಾಗಿದೆ. ಆದರೆ, ಇತ್ತೀಚೆಗೆ ತೆರೆಗೆ ಬಂದ ಯಾವ ಬಾಲಿವುಡ್ ಚಿತ್ರಗಳು ಕೂಡ ದೊಡ್ಡ ಮಟ್ಟದ ಗೆಲುವಿನ ನಗೆ ಬೀರಿಲ್ಲ. ಕೆಲವರು ಈ ಬಗ್ಗೆ ಬೇಸರ ಮಾಡಿಕೊಂಡಿಲ್ಲ. ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈಗ ಬಾಲಿವುಡ್​ನ ಸ್ಟಾರ್ ನಟ ಶಾಹಿದ್ ಕಪೂರ್ ಅವರು ಯಶ್ ಗೆ ಬಾಲಿವುಡ್​ನ ನಂಬರ್ ಒನ್ ಹೀರೋ ಪಟ್ಟ ನೀಡಿದ್ದಾರೆ.

ಇತ್ತೀಚೆಗೆ ಶಾಹಿದ್ ಕಪೂರ್ ಅವರು ‘ಕಾಫಿ ವಿತ್ ಕರಣ್ ಸೀಸನ್ 7’ಗೆ ಅತಿಥಿಯಾಗಿ ಆಗಮಿಸಿದ್ದರು. ಅವರ ಜತೆ ಕಿಯಾರಾ ಅಡ್ವಾಣಿ ಕೂಡ ಇದ್ದರು. ಕರಣ್ ಜೋಹರ್ ಅವರು ಈ ಶೋ ನಡೆಸಿಕೊಟ್ಟಿದ್ದಾರೆ. ಈ ವೇಳೆ ಹಲವು ವಿಚಾರಗಳನ್ನು ಚರ್ಚೆ ಮಾಡಲಾಗಿದೆ. ಕರಣ್ ಕೇಳಿದ ಒಂದು ಪ್ರಶ್ನೆಗೆ ಶಾಹಿದ್ ಕಪೂರ್ ಅಚ್ಚರಿಯ ಉತ್ತರ ನೀಡಿದ್ದಾರೆ.

‘ಬಾಲಿವುಡ್​ನ ನಂಬರ್ ಒನ್ ಹೀರೋಯಿನ್ ಹಾಗೂ ಹೀರೋ ಯಾರು’ ಎಂದು ಕರಣ್ ಜೋಹರ್ ಕೇಳಿದರು. ಇದಕ್ಕೆ ಶಾಹಿದ್ ಕಪೂರ್ ಒಂದು ಕ್ಷಣವೂ ಯೋಚಿಸದೆ ಉತ್ತರ ನೀಡಿದ್ದಾರೆ. ‘ನಂಬರ್ ಒನ್ ಹೀರೋಯಿನ್ ಕಿಯಾರಾ. ನಂಬರ್ ಒನ್ ಹೀರೋ ರಾಕಿ ಭಾಯ್’ ಎಂದರು ಅವರು. ‘ರಾಕಿ ಭಾಯ್ ಎಂದರೆ ಯಶ್ ಅಲ್ಲವೇ’ ಎಂದು ಕರಣ್ ಕೇಳಿದರು. ಇದಕ್ಕೆ ಹೌದು ಎನ್ನುವ ಉತ್ತರ ಶಾಹಿದ್ ಕಪೂರ್ ಕಡೆಯಿಂದ ಬಂತು.

ಮುಹೂರ್ತ ನೆರವೇರಿಸಿಕೊಂಡ ‘The Darwin’s in ದಂಡಿದುರ್ಗ’ ಸಿನಿಮಾ..ಹೊಸಬರಿಗೆ ಸಾಥ್ ಕೊಟ್ಟ ನಿರ್ದೇಶಕ ಸತ್ಯಪ್ರಕಾಶ್ ಹಾಗೂ ಅಜಯ್ ರಾವ್

ಕಿಚ್ಚನ ಬರ್ತ್ ಡೇಗೆ ಸುದೀಪಿಯನ್ಸ್ ಗೆ ಸ್ಪೆಷಲ್ ಗಿಫ್ಟ್….ಜೀ5 ಒಟಿಟಿಗೆ ಲಗ್ಗೆ ಇಡ್ತಿದ್ದಾನೆ ವಿಕ್ರಾಂತ್ ರೋಣ

ತಂದೆಗೆ ಇನ್ನೂ ಪ್ರಜ್ಞೆ ಬಂದಿಲ್ಲ ಸುಳ್ಳು ಸುದ್ದಿ ನಂಬಬೇಡಿ ಎಂದ ನಟ ರಾಜು ಶ್ರೀವಾತ್ಸವ್ ಪುತ್ರಿ

- Advertisement -

Latest Posts

Don't Miss