Bollywood News: ಬಾಲಿವುಡ್ ಹಾಡುಗಾರ, ಗಝಲ್ ಸಿಂಗರ್ ಪಂಕಜ್ ಉದಾಸ್(73) ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಪಂಕಜ್ ಉದಾಸ್, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಬಾಲಿವುಡ್ ಹಾಡಷ್ಟೇ ಅಲ್ಲದೇ, ಪಂಕಜ್ ಉದಾಸ್ ಕೇಳಲು ಹಿತವೆನ್ನಿಸುವ ಗಝಲ್ ಕೂಡ ಹಾಡಿದ್ದರು. ಕನ್ನಡದ ಸ್ಪರ್ಶ ಚಿತ್ರದ ಫೇಮಸ್ ಹಾಡಾಗಿರುವ ಅಂದಕಿಂತ ಚೆಂದ ನೀನೇ ಸುಂದರ ಹಾಡಿಗೆ, ಪಂಕಜ್ ಉದಾಸ್ ಕಂಠದಾನ ಮಾಡಿದ್ದರು.
ಪಂಕಜ್ ಉದಾಸ್ ಪುತ್ರಿ ನಯಾಬ್ ಉದಾಸ್, ತಮ್ಮ ಇನ್‌ಸ್ಟಾ ಗ್ರಾಮ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಧೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಮ್ಮ ತಂದೆ ಫೆಬ್ರವರಿ 26ರಂದು ನಿಧನರಾಗಿದ್ದಾರೆಂದು ತಿಳಿಸಿದ್ದಾರೆ. ಪಂಕಜ್ ಉದಾಸ್ ಸಾವಿಗೆ, ಬಾಲಿವುಡ್ ಗಣ್ಯರು ಸೇರಿ ಹಲವು ಭಾರತೀಯ ಚಿತ್ರ ತಾರೆಯರು ಸಂತಾಪ ಸೂಚಿಸಿದ್ದಾರೆ.
ಕಾಂಗ್ರೆಸ್ ಅವನತಿಗೆ ಕಾರಣವೇನು..? ಈ ಬಗ್ಗೆ ಸಿ.ಟಿ.ರವಿ ಹೇಳಿದ್ದೇನು..?
ಸಂವಿಧಾನ ಬದಲಾಯಿಸಲು ಬಂದವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು: ಸಿಎಂ ಸಿದ್ದರಾಮಯ್ಯ