Tuesday, December 3, 2024

Latest Posts

ಲೆಬನಾನ್‌ನಲ್ಲಿ ಪೇಜರ್ಸ್ ಸ್ಪೋಟ, 9 ಮಂದಿ ಸಾವು, 2,800 ಮಂದಿಗೆ ಗಾಯ

- Advertisement -

Lebanon: ಲೆಬನಾನ್‌ನಲ್ಲಿ ಪೇಜರ್ಸ್ ಸ್ಪೋಟಗೊಂಡು 9 ಮಂದಿ ಸಾವನ್ನಪ್ಪಿದ್ದು, 2,800ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಾವನ್ನಪ್ಪಿದವರೆಲ್ಲ ಹಿಜ್ಬುಲ್ಲಾ ಸಂಘಟನೆಯ ಉಗ್ರರು ಎನ್ನಲಾಗಿದ್ದು, ಈ ಕೆಲಸದ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಹಿಜ್ಬುಲ್ಲಾ ಆರೋಪಿಸಿದೆ. ಹಲವು ವರ್ಷಗಳ ಹಿಂದೆ ಪೇಜರ್ಸ್‌ನ್ನು ಮೊಬೈಲ್ ರೀತಿ ಬಳಕೆ ಮಾಡಲಾಗುತ್ತಿತ್ತು. ಉಗ್ರ ಸಂಘಟನೆಗಳು ಇದನ್ನು ಹೆಚ್ಚು ಬಳಸುತ್ತಿದ್ದವು. ಇದೀಗ ಅದೇ ಸಾಧನ ಬ್ಲಾಸ್ಟ್ ಆಗುವ ರೀತಿ ಸಂಚು ರೂಪಿಸಲಾಗಿದೆ.

ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಯುದ್ಧ ಶುರುವಾಗಿ 1 ವರ್ಷವಾಗುತ್ತ ಬಂತು. ಆದರೂ ಯುದ್ಧ ನಿಂತಿಲ್ಲ. ಈ ಮಧ್ಯೆ ಪ್ಯಾಲೇಸ್ತೇನ್ ನಲ್ಲಿ ಅಲ್ಲಲ್ಲಿ ಇಸ್ರೇಲ್ ದಾಳಿ ನಡೆಸಿದ್ದು, ದಾಳಿಯಲ್ಲಿ ಪ್ಯಾಲೇಸ್ತಿನ್ ನಾಗರಿಕರು ಸಾವನ್ನಪ್ಪಿದ್ದು ದುರದೃಷ್ಟಕರ ಸಂಗತಿ.

ಇನ್ನು ಲೆಬನಾನ್‌ನಲ್ಲಿ ಈ ರೀತಿಯಾಗಿ ಪೇಜರ್ಸ್ ಸ್ಪೋಟ ಮಾಡಿರುವುದು ಇಸ್ರೇಲ್ ಕೃತ್ಯ. ಇದು ಈ ಯುದ್ಧವನ್ನು ಮತ್ತಷ್ಟು ಪ್ರೇರೇಪಿಸುವ ಕೆಲಸವಾಗಿದೆ ಎಂದು ಹಿಜ್ಬುಲ್ಲಾ ಸಂಘಟನೆ ಆರೋಪಿಸಿದ್ದಾರೆ.

- Advertisement -

Latest Posts

Don't Miss