Bengaluru News: ಬೆಂಗಳೂರು: ಬೆಂಗಳೂರು ನಗರದ 23 ಶಾಲೆಗಳಿಗೆ ಮತ್ತು ಬೆಂಗಳೂರು ಹೊರವಲಯದ 12 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಮೇಲ್ ಮೂಲಕ, ಬಾಂಬ್ ಇದೆ ಎಂದು ಹೇಳಲಾಗಿದೆ. ಈ ಮೇಲ್ನಲ್ಲಿ ಮುಜಾಹಿದ್ದೀನ್ ಸಂಘಟನೆಯ ಹೆಸರು ಬರೆದಿದ್ದು, ಇದು ಮುಜಾಹಿದ್ದೀನ್ ಸಂಘಟನೆಯ ಕೃತ್ಯ ಎಂದು ಹೇಳಲಾಗಿದೆ. ಆದರೆ ಇದು ಪುಂಡ ಪೋಕರಿಗಳು ಮಾಡಿದ್ದೋ, ಅಥವಾ ಮುಜಾಹಿದ್ದೀನ್ ಮಾಡಿದ್ದೋ ಅನ್ನೋದು ಮಾತ್ರ ಗೊತ್ತಾಗಬೇಕಿದೆ.
ಈಗಾಗಲೇ ಹಲವು ಶಾಲೆಗಳ ಮಕ್ಕಳಿಗೆ ರಜೆ ಘೋಷಿಸಲಾಗಿದ್ದು, ಅವರ ಪೋಷಕರನ್ನು ಕರೆದು, ಮಕ್ಕಳನ್ನು ಕರೆದುಕೊಂಡು ಹೋಗಿ ಎಂದು ಹೇಳಲಾಗಿದೆ. ಹಾಗಾಗಿ ಪೋಷಕರು, ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಕೆಲವು ಶಾಲೆಗಳಿಗೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ, ತಪಾಸಣೆ ನಡೆಸಲಾಗಿದ್ದು, ಯಾವುದೇ ಬಾಂಬ್ ಇಲ್ಲವೆಂದು ಹೇಳಿದ್ದಾರೆ. ಇನ್ನುಳಿದ ಶಾಲೆಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ಪೋಷಕರು ಮತ್ತು ಶಿಕ್ಷಕರಲ್ಲಿ ಆತಂಕ ಮನೆ ಮಾಡಿದ್ದು, ಮಕ್ಕಳಿಗೆ ಅಲ್ಲೇನಾಗುತ್ತಿದೆ ಎಂಬುದರ ಅರಿವೇ ಇಲ್ಲ. ಆದರೆ ಏನೋ ತೊಂದರೆಯಾಗಿದೆ ಎಂದು ಅರಿತ ಕೆಲ ಮಕ್ಕಳು ಹೆದರಿ ಕಣ್ಣೀರು ಹಾಕುತ್ತಿದ್ದಾರೆ. ಒಟ್ಟಾರೆಯಾಗಿ ಇದು ನಿಜವಾದ ಮುಜಾಹಿದ್ದೀನ್ ಸಂಘಟನೆಯ ಕರೆಯೋ, ಅಥವಾ ಹುಸಿ ಬಾಂಬ್ ಕರೆಯೋ ಎಂಬುದು, ಪೊಲೀಸ್ ಕಾರ್ಯಾಚರಣೆಯಿಂದ ಗೊತ್ತಾಗಬೇಕಿದೆ ಅಷ್ಟೇ.
8 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೆರಬೇಕು! ರಷ್ಯಾ ಮಹಿಳೆಯರಿಗೆ ಪುಟಿನ್ ಕರೆ
ನನ್ನ ಕ್ಷೇತ್ರದಲ್ಲೇ 224 ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ: ಹೆಚ್.ಡಿ.ರೇವಣ್ಣ
ಹೆಣ್ಣು ಭ್ರೂಣ ಹತ್ಯೆ ಅಕ್ಷಮ್ಯ, ಹೀನ ಕೆಲಸ : ಸಚಿವ ಎಂ.ಬಿ ಪಾಟೀಲ್ ಕಿಡಿ