Thursday, July 31, 2025

Latest Posts

ಅಯೋಧ್ಯಾ ರಾಮ ಮಂದಿರದ ಮೇಲೆ ಬಾಂಬ್ ದಾಳಿ ಬೆದರಿಕೆ, ಯೋಗಿ ಆದಿತ್ಯನಾಥ್ ಹತ್ಯೆಗೂ ಸಂಚು..!

- Advertisement -

National News: ಪುರಾತನ ಕಾಲದಿಂದಲೂ, ಉತ್ತಮ ಕಾರ್ಯಗಳಿಗೆ ವಿಘ್ನ ತರಲು ರಕ್ಕಸರು ಕಾದು ಕುಳಿತಂತೆ, ರಾಮಮಂದಿರದ ಮೇಲೂ ದುಷ್ಟರ ಕಣ್ಣು ಬಿದ್ದಿದೆ. ಎಲ್ಲ ಭಾರತೀಯರು, ತಮ್ಮ ಬಹುವರ್ಷಗಳ ಕನಸಾದ ರಾಮ ಮಂದಿರ ಉದ್ಘಾಟನೆಯ ಕ್ಷಣಕ್ಕಾಗಿ ಕಾತುರದಿಂದ ಕಾದು ಕುಳಿತಿದ್ದಾರೆ. ಅಲ್ಲದೇ ಅಯೋಧ್ಯೆಯಲ್ಲಿಯೂ ರಾಮ ಮಂದಿರ ಉದ್ಘಾಟನೆಗಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಆದರೆ ರಾಮಮಂದಿರದ ಮೇಲೆ ನಾವು ಬಾಂಬ್ ದಾಳಿ ಮಾಡುತ್ತೇವೆ. ಸಿಎಂ ಯೋಗಿ ಆದಿತ್ಯನಾಥ್‌ರನ್ನೂ ಮುಗಿಸುವ ಸಂಚು ಮಾಡಿದ್ದೇವೆ ಎಂದು ಉಗ್ರನೊಬ್ಬ ಬೆದರಿಕೆ ಈ ಮೇಲ್ ಕಳಿಸಿದ್ದಾನೆ.

ದೇವೇಂದ್ರ ತಿವಾರಿ ಎಂಬುವವರಿಗೆ ಈ ಮೇಲ್ ಬಂದಿದ್ದು, ಇದನ್ನು ಕಳಿಸಿದ ವ್ಯಕ್ತಿಯ ಹೆಸರು ಜುಬೈರ್ ಹುಸೇನ್ ಖಾನ್. ಇವನಿಗೆ ಪಾಕಿಸ್ತಾನದ ಐಎಸ್ಐ ಜೊತೆ ಸಂಬಂಧವಿದೆಯಂತೆ. ಇವರು ರಾಮಮಂದಿರಕ್ಕೆ ಬಾಂಬ್ ಹಾಕುವುದರ ಜೊತೆಗೆ, ಗೋಸೇವಕರಾದ ಸಿಎಂ ಯೋಗಿ ಆದಿತ್ಯನಾಥ್, ದೇವೇಂದ್ರ ತಿವಾರಿ, ಅಮಿತಾಬ್ ಯಶ್ ಅವರಿಗೂ ಜೀವ ಬೆದರಿಕೆ ಹಾಕಿದ್ದಾನೆ.

ಈ ಸಂಬಂಧ ಉತ್ತರಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಈ ಮೊದಲು ಕೂಡ ದೇವೇಂದ್ರ ತಿವಾರಿಗೆ ಈ ರೀತಿ ಜೀವ ಬೆದರಿಕೆ, ಬಾಂಬ್ ಬೆದರಿಕೆ ಕರೆ ಬಂದಿದ್ದು, ಅವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪೊಲೀಸರು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪವಿದೆ.

ಶಿಕ್ಷಣ ಸಚಿವ ಮಧುಬಂಗಾರಪ್ಪ ರಾಜೀನಾಮೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯ

‘ಯಾವ ಸೀಮೆಯ ನೈತಿಕತೆ ಸ್ವಾಮಿ ನಿಮ್ಮದು? ಇಂತಹ ಇನ್ಯಾವ ಬಗೆಯ ಕಳ್ಳ ದಂಧೆಗಳಿವೆ ನಿಮ್ಮದು?’

ಮರಗಳ್ಳತನ ಪ್ರಕರಣ: ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಅರೆಸ್ಟ್

- Advertisement -

Latest Posts

Don't Miss