Friday, April 25, 2025

Latest Posts

Basavaraj Bommai : ಬೊಮ್ಮಾಯಿ ಸರ್ಕಾರದ ಯಡವಟ್ಟಿನಿಂದ ಕಂಗೆಟ್ಟ ಗುತ್ತಿಗೆದಾರರು: ಜಿಲ್ಲೆಯಲ್ಲಿಯೇ 315 ಕೋಟಿ ಬಾಕಿ

- Advertisement -

Hubballi News : ಸರ್ಕಾರ ಜಾರಿ ಮಾಡಿರುವ ಯೋಜನೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ನಮ್ಮ ಮನೆಯ ಆವರಣದಲ್ಲಿನ ರಸ್ತೆ ಕಾಮಗಾರಿ ಸ್ಟಾಫ್ ಆಗಿದೆ‌ ಅಂತ ಸಾರ್ವಜನಿಕರ ಕಂಪ್ಲೆಂಟ್ ಮಾಡ್ತಿದ್ದಾರೆ. ಆದರೆ ಕಾಮಗಾರಿ ಆರಂಭವಾಗಲು ಆರ್ಥಿಕ ಶಕ್ತಿ ಬೇಕಿದೆ. ಸರ್ಕಾರಗಳ ತಿಕ್ಕಾಟದ ನಡುವೆ ಜನರು ಮಾತ್ರವಲ್ಲದೆ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ..? ಕಾಮಗಾರಿ ಕೈ ಬಿಟ್ಟ ಕಥೆಯನ್ನು ಬಿಚ್ಚಿಡುತ್ತಿದೆ ನಿಮ್ಮ ಕರ್ನಾಟಕ ಟಿವಿ

ಹೀಗೆ ಅರ್ಧಂಬರ್ಧ ಪೂರ್ಣಗೊಂಡ ರಸ್ತೆಗಳು. ಸ್ವರೂಪ ಬದಲಾಗದೇ ಉಳಿದ ಕಾಮಗಾರಿ. ಇದೆಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಧಾರವಾಡ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳು. ಹೌದು.. ಸರ್ಕಾರಗಳ ತಿಕ್ಕಾಟದ ನಡುವೆ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಎರಡೂ ವರ್ಷಗಳಿಂದ ಗುತ್ತಿಗೆ ಪಡೆದ ಕಾಮಗಾರಿ ಹಣ ಗುತ್ತಿಗೆದಾರರ ಕೈ ಸೇರಿಲ್ಲ. ಕಾಮಗಾರಿ ಮುಗಿಯುವ ಹಂತಕ್ಕೆ ಬಂದರೂ 315 ಕೋಟಿ ರೂಪಾಯಿ ಬಿಲ್ ಬಾಕಿ ಉಳಿದಿರುವುದು ಗುತ್ತಿಗೆದಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಧಾರವಾಡ ಜಿಲ್ಲೆಯಲ್ಲಿ ಕಳೆದ ಎರಡೂ ವರ್ಷಗಳಿಂದ ಗುತ್ತಿಗೆದಾರರಿಗೆ ನೈಯಾಪೈಸೆ ಬಿಡುಗಡೆ ಆಗಿಲ್ಲ. ಟೆಂಡರ್ ಪ್ರಕ್ರಿಯೆ ಮುಗಿಸಿ, ಕಾಮಗಾರಿ ಪೂರ್ಣಗೊಂಡರು ಕೆಲಸ ಮಾಡಿದ ಗುತ್ತಿಗೆದಾರನಿಗೆ ಸಿಕ್ಕಿಲ್ಲ ಹಣ. ಈ ನಿಟ್ಟಿನಲ್ಲಿ ಗುತ್ತಿಗೆದಾರರ ಬದುಕು ಬೀದಿ ಬರುವ ಲಕ್ಷಣ ಗೋಚರಿಸುತಿದ್ದು, ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ.

ಇನ್ನೂ ಬಹುತೇಕ ಕಾಮಗಾರಿ ಕಂಪ್ಲೀಟ್ ಮಾಡಿದರೂ ಹಣ ಇಲ್ಲ. ಇನ್ನೊಂದು ಕಡೆ ಹಣ ಬಿಡುಗಡೆ ಆಗದ ಕಾರಣ ಅರ್ಧಕ್ಕೆ ನಿಂತ ನೂರಾರು ಕಾಮಗಾರಿಗಳು‌. ಬೇಕಾಬಿಟ್ಟಿಯಾಗಿ ಟೆಂಡರ್ ಕರೆದಿದ್ದ ಈ ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರದ ಎಡವಟ್ಟಿನಿಂದ ದಿಕ್ಕು ತೋಚದೆ ಕುಳಿತಿದ್ದಾರೆ. ಜನರಿಂದ ಶಹಬ್ಬಾಸ್‌ಗಿರಿ ಪಡೆಯಲು, ಚುನಾವಣೆಗೊಸ್ಕರ ಮನಸ್ಸೋ ಇಚ್ಚೆ ಟೆಂಡರ್ ಕರೆದಿದ್ದ ಬೊಮ್ಮಾಯಿ ಸರ್ಕಾರ, ಬೊಕ್ಕಸದಲ್ಲಿ ಹಣ ಇಲ್ಲದಿದ್ದರೂ ಲೋಕೋಪಯೋಗಿ ಇಲಾಖೆಯ ಮೂಲಕ ಸಾವಿರ ಕೋಟಿ ರೂಪಾಯಿ ಟೆಂಡರ್ ಕರೆದಿದ್ದಾರೆ. ಆದರೆ ಈಗ ಬಿಲ್ ಪಾವತಿಯಾಗದೇ ಗುತ್ತಿಗೆದಾರರು ಕಂಗಾಲಾಗಿದ್ದಾರೆ.

ಒಟ್ಟಿನಲ್ಲಿ ಕಾಮಗಾರಿಗಳನ್ನು ಮುಗಿಸಿ ವರ್ಷಗಳೆ ಕಳೆದರೂ ಬಿಲ್ ಮಾತ್ರ ಆಗುತ್ತಿಲ್ಲ. ಬಿಲ್‌ಗಾಗಿ ಕಚೇರಿ ಅಲೆದು ಅಲೆದು ಸುಸ್ತಾಗಿ ನಿಂತ ಗುತ್ತಿಗೆದಾರರು. ಈಗ ಸಿದ್ದರಾಮಯ್ಯನವರ ಸರ್ಕಾರ ಆದ್ರೂ ಹಣ ಬಿಡುಗಡೆ ಮಾಡಲಿ ಎನ್ನುತ್ತಿದ್ದಾರೆ. ಆದ್ರೆ ಗ್ಯಾರಂಟಿ‌ಗಳಿಗೆ ಹಣ ಹೊಂದಿಸಲು ಹೆಣಗಾಟ ನಡೆಸಿರುವ ಸಿದ್ದು ಸರ್ಕಾರ, ಗುತ್ತಿಗೆದಾರರ ಸಂಕಷ್ಟಕ್ಕೆ ಸ್ಪಂದಿಸುತ್ತಾ ಕಾದುನೋಡಬೇಕಿದೆ.

-ಸಂಗಮೇಶ್ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

Collage : ಶಿರ್ವ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿಗೆ ನ್ಯಾಕ್ ಭೇಟಿ

Deer : ಬೆಳ್ತಂಗಡಿ : ಜಿಂಕೆ ದಾಳಿಗೆ ಆಡುಗಳು ಬಲಿ..!

Siddaramaiah : ಉಡುಪಿ : ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ : ಸಿದ್ದರಾಮಯ್ಯ

- Advertisement -

Latest Posts

Don't Miss