Thursday, November 21, 2024

Latest Posts

Basavaraj Bommai : ಕಾಂಗ್ರೆಸ್​ಗೆ ಬೊಮ್ಮಾಯಿ ಶಾಕ್: ಬಹುಮತವಿದ್ರೂ ‘ಕೈ’ಗೆ ಸೋಲು!

- Advertisement -

ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕಾಂಗ್ರೆಸ್​ಗೆ ಬಿಗ್​ಶಾಕ್ ಕೊಟ್ಟಿದ್ದಾರೆ. ಹಾವೇರಿ ನಗರಸಭೆಯಲ್ಲಿ ಬಹುಮತವಿದ್ದರೂ ಬೊಮ್ಮಾಯಿ ರಣತಂತ್ರಕ್ಕೆ ನಲುಗಿನ ಕಾಂಗ್ರೆಸ್​, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಹೀನಾಯ ಸೋಲುಕಂಡಿದೆ.

ಇಂದು ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಗೆ ಕಾಂಗ್ರೆಸ್​ನ ಆರು ಸದಸ್ಯರು ಗೈರಾದರು. ಹೀಗಾಗಿ, ಪಕ್ಷೇತರರ ಸಹಕಾರದಿಂದ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದ್ರೆ, ಕಾಂಗ್ರೆಸ್ ಬಹುಮತವಿದ್ದೂ ತೀವ್ರ ಮುಖಭಂಗ ಅನುಭವಿಸ್ತು.

ಹಾವೇರಿ ನಗರಸಭೆಯಲ್ಲಿ ಒಟ್ಟು 31 ಸದಸ್ಯರಿದ್ದಾರೆ. ಈ ಪೈಕಿ ಕಾಂಗ್ರೆಸ್ 15, ಬಿಜೆಪಿ 9, ಪಕ್ಷೇತರರರಯ 7 ಜನರು ಇದ್ದಾರೆ. ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾದ ಶಶಿಕಲಾ ರಾಮು ಮಾಳಗಿ ಅವರು 16 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷೆಯಾಗಿ ಆಯ್ಕೆಯಾದರು. ಕಾಂಗ್ರೆಸ್ ಅಭ್ಯರ್ಥಿಯಾದ ರೇಣುಕಾ ಅವರು 11 ಮತ ಪಡೆದು ಪರಾಜಿತಗೊಂಡರು. ಪಕ್ಷೇತರ ಅಭ್ಯರ್ಥಿಯಾದ ಮಲ್ಲಿಕಾರ್ಜುನ ಸಾತೇನಹಳ್ಳಿ ಅವರು ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ರು. ಬಹುಮತವಿಲ್ಲದಿದ್ರೂ ಗೆಲುವಿನ ನಗೆ ಬೀರಿದ ಬಿಜೆಪಿ ನಾಯಕರು, ನಗರಸಭೆ ಮುಂದೆ ಪಟಾಕಿ ಹಚ್ಚಿ ಸಂಭ್ರಮಿಸಿದ್ರು.

ಗೆಲುವಿನ ನಂತರ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ರಾಜ್ಯ ರಾಜಕಾರಣದಲ್ಲಿ ಎಲ್ಲ ಹಂತದಲ್ಲೂ ಬದಲಾವಣೆ ಆಗಲಿದೆ. ರಾಜ್ಯ ಚುಕ್ಕಾಣಿ ಬದಲಾವಣೆಯಾದರೂ ಆಶ್ಚರ್ಯ ಪಡೆಬೇಕಿಲ್ಲ. ಆಪರೇಷನ್ ಕಮಲ ಮಾಡುವ ಅವಶ್ಯಕತೆ ನಮಗೆ ಇಲ್ಲ. ಆದ್ರೆ, ದೊಡ್ಡ ಪ್ರಮಾಣದ ರಾಜಕೀಯ ಬದಲಾವಣೆ ಆಗಲಿದೆ ಎಂದು ಭವಿಷ್ಯ ನುಡಿದ್ರು.ಒಟ್ನಲ್ಲಿ ಬೊಮ್ಮಾಯಿ ಅವರ ರಾಜಕಾರಣ ಅನುಭವವೋ ಅಥವಾ ಕಾಂಗ್ರೆಸ್ ನಾಯಕರು ಅತಿಯಾದ ವಿಶ್ವಾಸವೋ, ಬಿಜೆಪಿ ಗೆಲುವಿನ ಕೇಕೆ ಹಾಕಿದೆ. ಇದು ಕಾಂಗ್ರೆಸ್​ಗೆ ಎಚ್ಚರಿಕೆಯ ಗಂಟೆ ಅಂದ್ರೂ ತಪ್ಪಿಲ್ಲ.

- Advertisement -

Latest Posts

Don't Miss