Thursday, June 19, 2025

Latest Posts

ಬೋರ್ ಬಂತು ಅಂತಾ ಹಿಂಗಾ ಮಾಡೋದು..? ಕೆಲಸವೂ ಹೋಯ್ತು, ದುಡ್ಡು ಹೋಯ್ತು..

- Advertisement -

ಕೆಲವೊಮ್ಮೆ ಬೋರ್ ಬಂತು ಅಂತಾ ನಾವು ಮಾಡೋ ಕೆಲ ಕೆಲಸಗಳು ನಮ್ಮ ಜೀವಕ್ಕೆ ಬರತ್ತೆ. ಅಂಥ ಘಟನೆ ಮಾಸ್ಕೋದಲ್ಲಿ ನಡೆದಿದೆ. ಬೋರ್ ಬಂತು ಅಂತಾ 60 ವರ್ಷದ ಸೆಕ್ಯೂರಿಟಿ ಗಾರ್ಡ್ 7 ಕೋಟಿ ರೂಪಾಯಿಗೂ ಮೀರಿದ ವಿಮೆ ಮಾಡಿಸಿದ್ದ ಪೇಂಟಿಂಗ್‌ಗೆ ಕಣ್ಣು ಬಿಡಿಸಿ, ದಂಡ ಕಟ್ಟಿ, ಶಿಕ್ಷೆ ಅನುಭವಿಸುವ ಕೆಲಸ ಮಾಡಿಕೊಂಡಿದ್ದಾನೆ.

ಸೆಕ್ಯೂರಿಟಿಗೆ ಬೇಸರ ಬಂದ ಕಾರಣ, ಬಾಲ್ ಪೆನ್ ತೆಗೆದುಕೊಂಡ ಸೆಕ್ಯೂರಿಟಿ, ಮುಖದ ಚಿತ್ರಕ್ಕೆ ಕಣ್ಣು ಬಿಡಿಸಿದ್ದಾನೆ. ಈ ಘಟನೆ ನಡೆದಿದ್ದು ಡಿಸೆಂಬರ್ 7, 2021ರಲ್ಲಿ. ಆದರೆ ಅದು ಸಾಬೀತಾಗಿ ಸೆಕ್ಯೂರಿಟಿ ಕೆಲಸ ಕಳೆದುಕೊಂಡಿದ್ದು ಈ ವಾರ. ಈ ಪೇಂಟ್ ಮಾಡಿದ ಕಲಾಕಾರರಿಗೆ ಈ ವಿಷಯ ತಿಳಿಸಿದ್ದು, ಅವರು ಈ ಚಿತ್ರವನ್ನು ಮೊದಲಿನ ಹಾಗೆ ಮಾಡಿಕೊಡುತ್ತಾರೆಂದು ಭರವಸೆ ನೀಡಿದ್ದಾರೆ.

ಈ ಕಲಾಕೃತಿಯನ್ನು ತ್ರೀ ಫಿಗರ್ಸ್ ಎಂದು ಕರೆಯುತ್ತಾರೆ.  ಮತ್ತು ಈ ಕಲಾಕೃತಿ “ದಿ ವರ್ಲ್ಡ್ ಆ್ಯಸ್ ನಾನ್ ಆಬ್ಜೆಕ್ಟಿವಿಟಿ- ದಿ ಬರ್ತ್ ಆಫ್ ನ್ಯೂ ಆರ್ಟ್” ಭಾಗವಾಗಿ ಪ್ರದರ್ಶನಕ್ಕೆ ಇಡಲಾಗಿತ್ತು. 1932-1934ರಲ್ಲಿ ಆನ್ನಾ ಎಂಬ ವಿದ್ಯಾರ್ಥಿ ಈ ಪೇಂಟಿಂಗ್ ಮಾಡಿದ್ದರು. ಇನ್ನು ಸೆಕ್ಯೂರಿಟಿಯನ್ನು ಕೆಲಸದಿಂದ ತೆಗೆದು ಹಾಕಿದ್ದಲ್ಲದೇ,  40 ಸಾವಿರ ದಂಡ ಮತ್ತು ಒಂದು ವರ್ಷ ಶಿಕ್ಷೆ ನೀಡಿದೆ.   

- Advertisement -

Latest Posts

Don't Miss