Sunday, December 22, 2024

Latest Posts

‘ಬ್ರ್ಯಾಂಡ್ ಬೆಂಗಳೂರು ಸಿಂಗಾಪುರ ಮಾಡ್ತೀವಿ ಅಂತಾರೆ ಆದರೆ ಕುಡಿಯೋಕೆ ನೀರಿಲ್ಲ’

- Advertisement -

Hassan Political News: ಹಾಸನ: ಹಾಸನದಲ್ಲಿಂದು ಸುದ್ದಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸದಾನಂದಗೌಡ, ಬರ ಅಧ್ಯಯನದ ಬಗ್ಗೆ ಮಾತನಾಡಿದ್ದಾರೆ.

14 ತಂಡಗಳ ಮೂಲಕ ಬರ ಅಧ್ಯಯನ ಮಾಡಿ ರಾಜ್ಯ ಕೇಂದ್ರ ಬರ ಪರಿಹಾರ ಕೊಡಬೇಕ ಅಂತ ಕೇಂದ್ರ ಮತ್ತು ರಾಜ್ಯಕ್ಕೆ ಒತ್ತಡ ಹಾಕ್ತೀವಿ. ಆದ್ರೆ ಯಾರು ಮೂಲ ಕರ್ತವ್ಯ ಮಾಡಬೇಕು ಅವ್ರ ವೈಫಲ್ಯ ಬಗ್ಗೆ ಹೆಚ್ಚು ಗಮನ ನೀಡಿದ್ದೆವು. ಮುಖ್ಯವಾಗಿ ಆಗಸ್ಟ್ ನಲ್ಲಿ ಮಳೆ ಬೇಕು. ಹಾಸನದಲ್ಲಿ ಆಗಸ್ಟ್ ನಲ್ಲಿ 73. % ಮಳೆ ಕಮ್ಮಿ ಆಗಿದೆ. ರೈತರು ಕಣ್ಣೀರು ಹಾಕೋ ಪರಿಸ್ಥಿತಿಯಲ್ಲಿದ್ದಾರೆ ಎಂದರು.

ವಿಶೇಷವಾಗಿ ಜೋಳ ಹೆಚ್ಚು ಹಾಳಾಗಿದೆ. ಅಲ್ಪ ಸ್ವಲ್ಪ ನೀರು ಬೋರ್ ಇದ್ದಕಡೆ ಸ್ವಲ್ಪ ಇದೆ. ಬೋರ್ ಇದ್ದ ಕಡೆ ಬೆಳೆಯೋಣ ಅಂದ್ರೆ ಕರೆಂಟ್ ಇಲ್ಲ. ಇನ್ನು ರಾತ್ರಿ ಚಿರತೆಗಳ ಕಾಟ, ಜನ ಅಷ್ಟು ಭಯಭೀತರಾಗಿದ್ದಾರೆ. ಈಗಾಗಲೇ 12 ಕೋಟಿ ಹಾಸನ ಜಿಲ್ಲೆಗೆ ಬಿಡುಗಡೆ ಆಗಿದೆ. ಆದ್ರೆ ಯಾವುದೇ ಮಾರ್ಗಸೂಚಿ ಕೊಟ್ಟಿಲ್ಲ. ಅನುದಾನ ಬಗ್ಗೆ ಮಾರ್ಗ ಸೂಚಿ ನೀಡಿಲ್ಲ. ಕನಿಷ್ಟ ಕರ್ಟೆಸಿ ಕೂಡ ಇನ್ನು ಈ ಸರ್ಕಾರಕ್ಕೆ ಇಲ್ಲ ಎಂದು ಸದಾನಂದಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ಹಾವು ಕಡಿದು ಸತ್ತವರಿಗೆ ಹಣ ನೀಡಿಲ್ಲ. ಎರಡುವರೆ ಲಕ್ಷ ಹೆಕ್ಟೇರ್ ಬಿತ್ತನೆ ಆಗಿದೆ ಇದರಲದಲಿ ಎರಡುಲಕ್ಷ ಅಧಿಕ ಹೆಕ್ಟೇರ್ ನಷ್ಟ ಆಗಿದೆ. ಜಾನುವಾರುಗಳಿಗೆ ಯಾವುದೇ ಮೇವಿನ ಕಿಟ್ ನೀಡಿಲ್ಲ ಕೊನೆ ಗಳಿಗೆಗೆ ತಯಾರಿ ಮಾಡೋದಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಸದಾನಂದ ಗೌಡ ಅಸಮಾಧಾನ ಹೊರಹಾಕಿದ್ದಾರೆ.

ನಾನು ಸಿಎಮ್ ಆಗಿದ್ದಾಗ 136 ತಾಲೂಕ್ ಬರ ಆಗಿದ್ದವು ,ಮೂರು ದಿನಕ್ಕೊಮ್ಮೆ ಮಾಹಿತಿ ನೀಡಿ ಹಣ ಪಡೆಯಲು ಸೂಚಿಸಿದ್ದೆವು. ಯಾವುದೋ ಪ್ರಚಾರಕ್ಕೆ ಬಿಜೆಪಿ ಬರ ಅಧ್ಯಯನ ಸಮೀತಿ ಮಾಡಿಲ್ಲ. ಅವ್ರು ಮಾಡ್ತಾರೆ ಅಂತ ಕಾದು ಕಾದು ಈ ಕೆಲಸ ಮಾಡಿದ್ದು. 30 ವರ್ಷ ನಿರಂತರವಾಗಿ ಶಾಸಕನಾಗಿದ್ದೆನೆ. ಆದರೆ ನನ್ನ ಇತಿಹಾಸದಲ್ಲಿ ಇಂತಹ ದಯನೀಯ ಸರ್ಕಾರ ನಾನು ಯಾವತ್ತು ನೋಡಿಲ್ಲ ಎಂದಿದ್ದಾರೆ.

ಇನ್ನಾದ್ರು ಸಿಎಂ ತಮ್ಮ ದೊಂಬರಾಟ ನಿಲ್ಲಿಸಿ. ಬನ್ನಿ ಬರಪರಿಹಾರಕ್ಕೆ ಕೇಳೋಣ ಅಂತ ಕರಿಲಿ , ನಾವು ಬರುತ್ತೇವೆ. ರೈತರು ಬೀದಿಗಿಳಿಯೋ ಮೊದಲು ಇಒ ಕೆಲಸ ಮಾಡಲಿ. ಇಡೀ ರಾಜ್ಯದಲ್ಲಿ ಕುಡೊಯೋ ನೀರಿನ ಕಷ್ಟ ಎದುರಾಗಿದೆ. ಬ್ರ್ಯಾಂಡ್ ಬೆಂಗಳೂರು ಸಿಂಗಾಪುರ ಮಾಡ್ತಿವಿ ಅಂತಾರೆ ಆದರೆ ಕುಡಿಯೋಕೆ ನೀರಿಲ್ಲ ಎಂದು ಸದಾನಂದ ಗೌಡ ಆಡಳಿತ ಪಕ್ಷದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಮೋದಿ ಪರ ನಿಂತ ಅಹಿಂಸಾ ಚೇತನ್‌! ಸಂತೋಷ್‌ ಲಾಡ್‌ಗೆ ಅಜ್ಞಾನಿ ಸಚಿವರೇ ಎಂದು ವ್ಯಂಗ್ಯ

ಅರ್ಚಕರು, ಸಂತರು ಅತ್ಯಾಚಾರಿಗಳು ಎಂದ ಕಾಂಗ್ರೆಸ್‌ ಶಾಸಕ ಅಫ್ತಾಬುದ್ದೀನ್‌ ಮುಲ್ಲಾ ಬಂಧನ

ಸ್ತ್ರೀಯರು ಕಲಿತರೆ ಜನಸಂಖ್ಯೆ ನಿಯಂತ್ರಣ: ನಿತೀಶ್‌ ಕ್ಷಮೆಯಾಚನೆಗೆ ಪಟ್ಟು

- Advertisement -

Latest Posts

Don't Miss