Thursday, June 19, 2025

Latest Posts

ನೀವು ಇಂಥ Cute Dance ನೋಡಿರೋಕ್ಕೆ ಸಾಧ್ಯಾನೇ ಇಲ್ಲಾ ಬಿಡಿ

- Advertisement -

ಸಾಮಾನ್ಯವಾಗಿ ಮದುವೆಗಳಲ್ಲಿ ಬ್ಯಾಂಡ್‌ ಬಾಜಾಗಳಿಗೆ ಮಧು ಮಕ್ಕಳು ಸ್ಟೆಪ್ ಹಾಕೋದನ್ನ ನೋಡಿರ್ತೀವಿ. ಇನ್ನೂ ವಿಚಿತ್ರವಾದ ಡ್ಯಾನ್ಸ್‌ಗಳ ವೀಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರ್ತೀವಿ. ಆದ್ರೆ ಕ್ಯೂಟ್ ಆದ, ಭಾವನಾತ್ಮಕ ಡಾನ್ಸ್ ನೋಡಿರೋದು ತುಂಬಾ ಅಪರೂಪ. ಅಂಥ ವೀಡಿಯೋವೊಂದು ಈಗ ವೈರಲ್ ಆಗಿದ್ದು, ಸಖತ್ ವೈರಲ್ ಆಗಿದೆ.

ವಧು ವರರು ನಾಯಿಯೊಟ್ಟಿಗೆ ಸೇರಿ ಡಾನ್ಸ್ ಮಾಡುವ ವೀಡಿಯೋ ಇದಾಗಿದ್ದು, ಇದನ್ನ ನೋಡಿದ ಜನರು ಭಾವನಾತ್ಮಕವಾಗಿ ಕಾಮೆಂಟ್ ಮಾಡಿದ್ದಾರೆ. ಕೆನಡಾದಲ್ಲಿ ಸ್ಟೇಫಾನಿ ಮತ್ತು ಗ್ರೇಗ್ ಮದುವೆ ನಡೆಯುತ್ತಿರುವ ಸಮಯದಲ್ಲಿ ವಧುವಾದ ಸ್ಟೇಫಾನಿಯ ಸಾಕು ನಾಯಿ ಬೀಯರ್‌, ಸ್ಟೇಫಾನಿಯನ್ನ ತಬ್ಬಿಕೊಂಡು ತನ್ನ ಭಾವನೆಯನ್ನ ವ್ಯಕ್ತಪಡಿಸಿತ್ತು.

ಗೋಲ್ಡನ್ ರಿಟ್ರೈವರ್ ಲಿಲ್ಲಿ ಎನ್ನುವ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಈ ವೀಡಿಯೋ ಅಪ್ಲೋಡ್ ಮಾಡಲಾಗಿದ್ದು, ವಧು ವರರನ್ನು ಅಪ್ಪಿಕೊಂಡು ಈ ನಾಯಿ ಮುದ್ದು ಮಾಡಿದೆ. ಈ ವೀಡಿಯೋವನ್ನ ಒಂದು ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದು, 10 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.

ವೀಡಿಯೋ ಲಿಂಕ್

- Advertisement -

Latest Posts

Don't Miss