ಧಾರವಾಡ: ಅನ್ನ ನೀಡುವ ಅನ್ನದಾತನಿಗೆ ವಧು ಸಿಗುತ್ತಿಲ್ಲವೆಂಬ ಆತಂಕ ಮೂಡಿದ್ದು, ಎಲ್ಲ ಹೆಣ್ಣುಮಕ್ಕಳ ಹೆತ್ತವರು ನೌಕರಿ ವರ ಬೇಕೆಂದು ಕೇಳುತ್ತಿದ್ದಾರೆ. ರೈತರನ್ನು ಯಾರು ಮದುವೆಯಾಗಲು ಮುಂದೆ ಬರುತ್ತಿಲ್ಲವೆಂದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹೊಸಳ್ಳಿ ಗ್ರಾಮದ ರೈತರು ಸರ್ಕಾರದತ್ತ ಮುಖ ಮಾಡಿದ್ದಾರೆ. ಸ್ವಾಭಿಮಾನದ ಬದುಕು ನಡೆಸುವ ಅನ್ನದಾತನಿಗೆ ಈಗ ಸಂಕಷ್ಟ ಎದುರಾಗಿದ್ದು, ನಾವು ರೈತರು ಎಂಬ ಒಂದೇ ಕಾರಣಕ್ಕೆ ಕನ್ಯೆ ಕೊಡಲು ನಿರಾಕರಿಸುತ್ತಿದ್ದಾರೆ ಎಂದು ತಹಶೀಲ್ದಾರ್ ಮುಂದೆ ಅಳಲು ತೊಡಿಕೊಂಡಿದ್ದಾರೆ. ಸರ್ಕಾರ ಜಾರಿಗೆ ತಂದಿರುವ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಗ್ರಾಮದ ರೈತರು ಬೇಡಿಕೆ ಇಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಯುವ ರೈತರು ಮದುವೆಯಾಗಲು ಎದುರಾಗುತ್ತಿರುವ ಸಂಕಷ್ಟದ ಕುರಿತು ಮನವಿ ಪತ್ರದಲ್ಲಿ ಬರೆದು ತಹಸೀಲ್ದಾರ್ಗೆ ಸಲ್ಲಿಸಿದ್ದಾರೆ.
ರೈತರಿಗೆ ಮತ್ತು ಗ್ರಾಹಕರಿಗೆ ಹೊರೆಯಾಗದಂತೆ ಹಾಲಿನ ದರ ನಿಗದಿಪಡಿಸಲು ಕೆಎಂಎಫ್ಗೆ ತಿಳಿಸಿದ್ದೇನೆ : ಸಿಎಂ ಬೊಮ್ಮಾಯಿ
ಭಾರತ-ಪಾಕಿಸ್ತಾನ ಗಡಿಯಲ್ಲಿ ಒಳನುಗ್ಗಲು ಪ್ರಯತ್ನಿಸಿದ ಪಾಕಿಸ್ತಾನಿಯ ಹತ್ಯೆ