International News: ಪಾಕಿಸ್ತಾನದಲ್ಲಿರುವ ಬ್ರಿಟೀಷ್ ರಾಯಭಾರಿ, ಇಂದು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಭಾರತ ಸರ್ಕಾರ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಪಾಕಿಸ್ತಾನದಲ್ಲಿರುವ ಬ್ರಿಟೀಷ್ ರಾಯಭಾರಿ ಜೆನ್ ಮ್ಯಾರಿಯಟ್ ಪಾಕ್ ಆಕ್ರಮಿತ ಕಾಶ್ಮೀರದ ಮೀರಪುರಕ್ಕೆ ಭೇಟಿ ನೀಡಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಜೆನ್ ಭೇಟಿ ಅತ್ಯಂತ ಆಕ್ಷೇಪಾರ್ಹ ಎಂದು ತಿಳಿಸಿದೆ. ಅಲ್ಲದೇ ಜಮ್ಮು ಮತ್ತು ಕಾಶ್ಮೀರ , ಲಡಾಖ್ ಕೇಂದ್ರಾಡಳಿತ ಪ್ರದೇಶಗಳು, ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿ ಉಳಿಯುತ್ತದೆ ಎಂದು ಹೇಳಿದೆ.
ಇನ್ನು ಪಿಓಕೆಗೆ ಭೇಟಿ ಕೊಟ್ಟ ಫೋಟೋಗಳನ್ನು ಜೆನ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಮೆರಿಕ ಮತ್ತು ಪಾಕಿಸ್ತಾನದ ಜನರ ಹೃದಯವಾಗಿರುವ ಮೀರ್‌ಪುರಕ್ಕೆ ಸಲಾಮ್. 70% ಬ್ರಿಟೀಷ್ ಪಾಕಿಸ್ತಾನಿ ಬೇರುಗಳು ಮೀರ್‌ಪುರದಿಂದ ಬಂದಿದೆ ಎಂದು ಜೆನ್ ಬರೆದುಕೊಂಡಿದ್ದಾರೆ.
ಇನ್ನು ಈ ಬಗ್ಗೆ ಆಕ್ರೋಶ ಹೊರಹಾಕಿರುವ ಭಾರತೀಯ ನೆಟ್ಟಿಗರು, ಬ್ರಿಟೀಷ್ ಸರ್ಕಾರವು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ತಮ್ಮ ರಾಯಭಾರಿಯನ್ನು ಕಳುಹಿಸಿರುವುದು ನಾಚಿಕೆ ಗೇಡಿನ ಸಂಗತಿ ಎಂದು ಹೇಳಿದ್ದಾರೆ.
ಮಾರಿಷಿಯಸ್‌ನಲ್ಲಿ ರಾಮಮಂದಿರ ಉದ್ಘಾಟನೆ ದಿನ ಹಿಂದೂಗಳಿಗೆ ಪ್ರಾರ್ಥನೆಗಾಗಿ 2 ಗಂಟೆ ವಿಶೇಷ ವಿಶ್ರಾಂತಿ
ಎಕ್ಸ್ ಸಂಸ್ಥೆಯ ಸುರಕ್ಷತಾ ವಿಭಾಗದಿಂದ 1ಸಾವಿರ ಉದ್ಯೋಗಿಗಳಿಗೆ ಗೇಟ್‌ಪಾಸ್